ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರ ನೇಮಕ ಮಾಡಿ ರಾಜ್ಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಇಪ್ಪತ್ತು ಜಿಲ್ಲೆಗಳಿಗೆ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಮಿಲಿಂದ್ ಧರ್ಮಸೇನಾ ಅವರನ್ನು ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ಬೆಂಗಳೂರು ಉತ್ತರ-ಡಿ.ಕೆ. ಮೋಹನ್, ಬೆಂಗಳೂರು ಕೇಂದ್ರ-ಜನಾರ್ಧನ, ಬೆಂಗಳೂರು ದಕ್ಷಿಣ-ಎಲ್. ಕೃಷ್ಣಮೂರ್ತಿ, ಬೆಂಗಳೂರು ಗ್ರಾಮಾಂತರ-ಚೇತನ್ ದೇವನಹಳ್ಳಿ, ಬೆಳಗಾವಿ ಗ್ರಾಮಾಂತರ-ಅಶೋಕ್ ಅಸೂಡಿ, ಬಳ್ಳಾರಿ ನಗರ-ಜೆ.ಎಸ್. ಆಂಜನೇಯಲು, ಬಳ್ಳಾರಿ ಗ್ರಾಮಾಂತರ-ಸಿರಾಜ್ ಶೇಖ್, ಚಾಮರಾಜನಗರ-ಕೆ. ಈಶ್ವರ್, ಚಿಕ್ಕಮಗಳೂರು-ಎಚ್.ಎಂ. ಸತೀಶ್, ಚಿತ್ರದುರ್ಗ-ಜಿ.ಎಸ್. ಮಂಜುನಾಥ, ಹಾಸನ-ಎಚ್.ಎಂ. ವಿಶ್ವನಾಥ, ಹಾವೇರಿ-ಬಸವರಾಜ್ ಪಿಳ್ಳನ್ನವರ, ಹುಬ್ಬಳ್ಳಿ-ಧಾರವಾಡ ನಗರ-ಸತೀಶ್ ಮೆಹರ್‌ವಾಡೆ, ಕೊಡಗು-ಸರಿತಾ ಪೂರ್ಣಚ್ಚ, ಮೈಸೂರು ನಗರ-ಶ್ರೀನಾಥ ಬಾಬು, ಮಂಡ್ಯ-ಚಿದಂಬರ, ರಾಮನಗರ-ಗಿರಿಗೌಡ, ಶಿವಮೊಗ್ಗ-ರಮೇಶ್ ಹೆಗಡೆ, ಉಡುಪಿ-ದಿನೇಶ್ ಪುತ್ರನ್, ಉತ್ತರ ಕನ್ನಡ ಜಿಲ್ಲೆಗೆ ಸುಬ್ರಮಣಿ ಎಂಬುವರನ್ನು ನೇಮಿಸಲಾಗಿದೆ.
ಈ ಕುರಿತು ಮಾತನಾಡಿದ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, 20 ಜಿಲ್ಲೆಗಳ ಅಧ್ಯಕ್ಷರ ನೇಮಕ ಮಾಡಲಾಗಿದೆ. ಉಳಿದ ಜಿಲ್ಲೆಗಳ ಅಧ್ಯಕ್ಷರನ್ನು ಶೀಘ್ರವೇ ನೇಮಕ ಮಾಡಲಾಗುವುದು. ಪಕ್ಷದ ಸಿದ್ದಾಂತ ಮತ್ತು ಸರ್ಕಾರ ಸಾಧನೆಗಳನ್ನು ಜನರಿಗೆ ತಲುಪಿಸುವುದು ಇವರ ಕೆಲಸ ಎಂದು ಹೇಳಿದ್ದಾರೆ.