Advertisement

ಕಾಂಗ್ರೆಸ್‌ ಸಂಸದರು ಬಿಜೆಪಿಗೆ ಬೆಂಬಲ ನೀಡಲಾರರೇ: ಬೇಬಿ

01:58 AM Apr 14, 2019 | sudhir |

ಕುಂಬಳೆ: ಲೋಕಸಭಾ ಚುನಾವಣೆಯಲ್ಲಿ ಬಹುಮತ ದೊರೆಯದೆ ಅತಂತ್ರ ಸರಕಾರ ರಚನೆಗೆ ಅವಕಾಶವಾದಲ್ಲಿ ಕಾಂಗ್ರೆಸ್‌ ಲೋಕಸಭಾ ಸದಸ್ಯರು ಬಿ.ಜೆ.ಪಿ.ಗೆ ಬೆಂಬಲ ನೀಡಲಾರರೆಂಬ ಭರವಸೆ ಕಾಂಗೈ ನಾಯಕ ಎ.ಕೆ.ಆ್ಯಂಟನಿಯ ಸಹಿತ ನಾಯಕರಿಗೆ ಇದೆಯೇ ಎಂಜnದಾಗಿ ಸಿ.ಪಿ.ಎಂ.ಪೊಲಿಟ್‌ಬ್ಯೂರೋ ಸದಸ್ಯ ಎಂ.ಎ.ಬೇಬಿ ಅವರು ಹೇಳಿದರು.

Advertisement

ಕಾಸರಗೋಡು ಲೋಕಸಭಾ ಎಡರಂಗಅಭ್ಯರ್ಥಿ ಕೆ.ಪಿ.ಸತೀಶ್ಚಂದ್ರನ್‌ ಆವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಬೇಬಿ ಅವರು.5 ವರ್ಷಗಳ ಹಿಂದೆ ಕಾಂಗೈ ಸಂಸದರಾಗಿದ್ದ ನೂರಕ್ಕೂ ಮಿಕ್ಕವರು ಇಂದು ಮೋದಿಯ ಭಕ್ತರಾಗಿ ಪ್ರವರ್ತಿಸುತ್ತಿರುವರು.ಕೇರಳದಲ್ಲಿ ಗೆದ್ದ ಕಾಂಗ್ರೆಸ್‌ ಎಂ.ಪಿ.ಗಳು ಬಿ.ಜೆ.ಪಿ.ಸೇರಲಾರರೆಂಬ ವಿಶ್ವಾಸ ಆ್ಯಂಟನಿಗೆ ಇದೆಯೇ ಎಂಬುದಾಗಿ ಬೇಬಿ ಪ್ರಶ್ನಿಸಿದರು.ಹೆಚ್ಚಿನ ಕಾಂಗ್ರೆಸ್ಸಿಗರು ಅರ್ಧ ಬಿಜೆಪಿ ಯವರಾಗಿರುವರು.

ರಾಹುಲ್‌ ಗಾಂಧಿಯವರನ್ನು ಉತ್ತರ ಭಾರತದಲ್ಲಿ ಹಿಂದೂ ಕೇÒತ್ರಗಳಿಗೆ ಸಂದರ್ಶಿಸಿ ಶುದ್ಧ ಬ್ರಾಹ್ಮಣನೆಂಬುದಾಗಿ ಮಾಧ್ಯಮದ ಮುಂದೆ ಪ್ರಚಾರ ನಡೆಸುತ್ತಿರುವರು.ಆದರೆ ರಾಹುಲ್‌ ಇತರ ಧರ್ಮಗಳ ಆರಾಧನಾಲಯಗಳಿಗೆ ತೆರಳಲು ಹಿಂದೇಟು ಹಾಕುವುದಾಗಿ ಆರೋಪಿಸಿದರು.ಸಿ.ಪಿ.ಎಂ.ಗೆದ್ದರೆ ಕೇಂದ್ರಕ್ಕೆ ಪ್ರಯೋಜನವೇನೆಂದು ಪ್ರಶ್ನಿಸುವವರಿಗೆ ಕಳೆದ 2014 ರ ಚುನಾವಣೆಯಲ್ಲಿ 18 ಎಡರಂಗ ಸಂಸದರು ಗೆದ್ದು ಕೇಂದ್ರದಲ್ಲಿ ಯುಪಿಎ ಸರಕಾರವನ್ನು ಬೆಂಬಲಿಸಿ ಜಾತ್ಯಾತೀತ ಸರಕಾರ ರಚಿಸಲು ಕಾರಣವಾಗಿದೆ ಎಂದು ಅವರು ತಿಳಿಸಿದರು. ಅದೇರೀತಿ ಈ ಬಾರಿಯೂ ಕೇಂದ್ರದಲ್ಲಿ ಮತೇತರ ಸರಕಾರ ಆಡಳಿತ ನಡೆಸಲಿರುವುದಾಗಿ ಬೇಬಿ ಹೇಳಿದರು.

ಅವರು ವಿವಿಧ ಕಡೆಗಳಲ್ಲಿ ಜರಗಿದ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದರು.ಎಡರಂಗ ನಾಯಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next