Advertisement

Money Laundering Case: ಕೊಡಗಿನಲ್ಲಿದ್ದ ಕಾರ್ತಿ ಚಿದಂಬರಂ ಆಸ್ತಿ ವಶಕ್ಕೆ

10:06 PM Apr 18, 2023 | Team Udayavani |

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಅವರಿಗೆ ಸಂಬಂಧಿಸಿದ ಕರ್ನಾಟಕದ ಕೊಡಗಿನಲ್ಲಿದ್ದ ಆಸ್ತಿ ಸೇರಿದಂತೆ 11.04ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಮುಟ್ಟುಗೋಲು ಹಾಕಿದೆ.

Advertisement

ಕಾರ್ತಿಗೆ ಸಂಬಂಧಿಸಿದ ಒಟ್ಟು 4 ಆಸ್ತಿಯನ್ನು ಜಪ್ತಿ ಮಾಡಿದ್ದು, ಈ ಪೈಕಿ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ಒಂದು ಸ್ತಿರಾಸ್ಥಿ ಕೂಡ ಸೇರಿದೆ. ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪುತ್ರರಾಗಿರುವ ಕಾರ್ತಿ, ಯುಪಿಎ ಸರ್ಕಾರದ ಅವಧಿಯಲ್ಲಿ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯ ಅನುಮತಿ ಮೀರಿ ಐಎನ್‌ಎಕ್ಸ್‌ ಮೀಡಿಯಾಗೆ ಬಂಡವಾಳ ಹೂಡುವಂತೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next