Advertisement
ಗುಜರಾತ್‌ನ ಮೆಹ್ಸಾನಾದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬುಧವಾರ ನಡೆದ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಅವರು, “ಬಿಜೆಪಿ ಯಾವತ್ತೂ ತಾರತಮ್ಯ ಮತ್ತು ಓಲೈಕೆ ರಾಜಕಾರಣ ಮಾಡಿಲ್ಲ. ಅದೇ ಕಾರಣಕ್ಕೆ ಆಡಳಿತಾರೂಢ ಪಕ್ಷದ ಮೇಲೆ ಯುವಜನರು ನಂಬಿಕೆಯಿಟ್ಟಿರುವುದು. ಕಾಂಗ್ರೆಸ್ ಮಾದರಿ ಎಂದರೆ ಭ್ರಷ್ಟಾಚಾರ, ಸ್ವಜನಪಕ್ಷಪಾತ, ವಂಶಾಡಳಿತ, ಜಾತಿವಾದ’ ಎಂದು ಹೇಳಿದರು.
Related Articles
Advertisement
ಮತ ಹಾಕದಿದ್ರೆ ಫೈನ್!ರಾಜ್‌ಕೋಟ್‌ನ ರಾಜ್ ಸಮಾಧಿಯಾಲಾ ಎಂಬ ಗ್ರಾಮದಲ್ಲಿ ವಿಚಿತ್ರ ನಿಯಮವೊಂದನ್ನು ಜಾರಿ ಮಾಡಲಾಗಿದೆ. ಈ ಗ್ರಾಮದಲ್ಲಿ ರಾಜಕೀಯ ಪ್ರಚಾರಕ್ಕೆ ನಿಷೇಧ ಹೇರಲಾಗಿದೆ. ಪಕ್ಷಗಳು ಪ್ರಚಾರಕ್ಕೆ ಬರುವುದರಿಂದ ಗ್ರಾಮಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಯಾವುದೇ ಅಭ್ಯರ್ಥಿಯನ್ನೂ ಇಲ್ಲಿಗೆ ಬರಲು ಬಿಡುತ್ತಿಲ್ಲ. ಆದರೆ ಗ್ರಾಮಸ್ಥರೆಲ್ಲರೂ ಹಕ್ಕು ಚಲಾಯಿಸಬೇಕು ಎಂಬ ಆದೇಶವನ್ನೂ ನೀಡಲಾಗಿದೆ. ಯಾರು ಮತ ಚಲಾಯಿಸುವುದಿಲ್ಲವೋ ಅವರಿಗೆ 51 ರೂ. ದಂಡ ವಿಧಿಸುವುದಾಗಿ ಎಚ್ಚರಿಸಲಾಗಿದೆ. ರಾಹುಲ್ ಸದ್ದಾಂ ಹುಸೇನ್‌ರಂತೆ ಕಾಣುತ್ತಾರೆ!
ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು ಈಗ “ಸರ್ವಾಧಿಕಾರಿ ಸದ್ದಾಂ ಹುಸೇನ್’ರಂತೆ ಕಾಣುತ್ತಾರೆ. ಲುಕ್ ಬದಲಿಸಬೇಕೆಂದರೆ ವಲ್ಲಭಭಾಯಿ ಪಟೇಲ್‌ರಂತೆ ಅಥವಾ ನೆಹರೂರಂತಾದರೂ ಪ್ರಯತ್ನ ಮಾಡಬಹುದಿತ್ತು. ಆದರೆ ನೀವು ಸದ್ದಾಂ ಹುಸೇನ್‌ರಂತೆ ಕಾಣುತ್ತಿರುವುದೇಕೆ ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮ ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, “ನಿಮ್ಮ ನಾಯಕ(ಪ್ರಧಾನಿ ಮೋದಿ) ಅಷ್ಟುದ್ದ ಗಡ್ಡ ಬಿಟ್ಟಾಗ ನಾವು ಯಾವುದೇ ಹೇಳಿಕೆ ನೀಡಿರಲಿಲ್ಲ. ಏಕೆಂದರೆ ನಾವು ನೈಜ ಸಮಸ್ಯೆಗಳ ಬಗ್ಗೆ ಮಾತ್ರವೇ ಗಮನಹರಿಸುತ್ತೇವೆ’ ಎಂದಿದೆ.