Advertisement
2018ರವಿಧಾನಸಭೆಚುನಾವಣೆಯಲ್ಲಿ ಸರ್ಕಾರವಿದ್ದರೂ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಇದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಕೈ ನಾಯಕರಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.
Related Articles
Advertisement
ಅಭ್ಯರ್ಥಿ ಪರನಿಂತ ಎಸ್‌ಎಂಕೆ ಬಣ: ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ದಿನೇಶ್‌ಗೂಳಿಗೌಡರನ್ನು ಸೂಚಿಸಿದ್ದೇ ಮಾಜಿ ಸಿಎಂ ಎಸ್.ಎಂ. ಕೃಷ್ಣ ಎಂಬ ಮಾತುಗಳು ಕೇಳಿ ಬಂದಿದ್ದವು. ಕಾಂಗ್ರೆಸ್ ನಲ್ಲಿದ್ದಾಗ ದಿನೇಶ್ ಗೂಳಿಗೌಡ ಎಸ್.ಎಂ.ಕೃಷ್ಣ ಅವರ ಬಳಿಯೂ ಕೆಲಸ ಮಾಡಿದ್ದರು. ಬಿಜೆಪಿ ಸೇರಿದರೂ ನಿಕಟ ಸಂಪರ್ಕದಲ್ಲಿದ್ದರು. ಅದರಂತೆ ಡಿ.ಕೆ.ಶಿವ ಕುಮಾರ್‌ಗೆ ಮೂಲಕ ಗೂಳಿಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು. ಇದಕ್ಕೆ ಜಿಲ್ಲಾಕಾಂಗ್ರೆಸ್‌ನಲ್ಲಿ ಯಾವುದೇ ಅಪಸ್ವರಕೇಳಿ ಬರಲಿಲ್ಲ. ಬಂದರೂ ಅದು ಗೌಪ್ಯವಾಗಿಯೇ ಉಳಿದು ಬಿಟ್ಟಿತು. ಅಲ್ಲದೆ, ಗೂಳಿ ಗೌಡ ಪರ ಎಸ್.ಎಂ.ಕೃಷ್ಣ ಬಣವೂ ಸಕ್ರಿಯವಾಗಿತ್ತು.
ಛಿದ್ರವಾಗಿದ್ದಕಾರ್ಯಕರ್ತರು:2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನಾಗಿ ನಿಖೀಲ್ ಹೆಸರು ಘೋಷಣೆ ಮಾಡುತ್ತಿದ್ದಂತೆ ಸ್ಥಳೀಯಕಾಂಗ್ರೆಸ್‌ಕಾರ್ಯಕರ್ತರು ನಾಯಕರ ವಿರುದ್ಧ ತಿರುಗಿ ಬಿದ್ದಿದ್ದರು. ಸಾಂಪ್ರದಾಯಿಕ ಎದುರಾಳಿ ಜೆಡಿಎಸ್ ಪರ ಕೆಲಸ ಮಾಡಲು
ಹಿಂದೇಟು ಹಾಕಿದ್ದರು. ಕೆಲವು ಕಾರ್ಯಕರ್ತರು ಹೈಕಮಾಂಡ್ ಮಾತಿನಂತೆ ನಿಖೀಲ್ ಬೆಂಬಲಿಸಿದರೆ, ಇನ್ನುಳಿದ ಬಹುತೇಕ ಕಾರ್ಯಕರ್ತರು, ಜಿಲ್ಲಾ ನಾಯಕರು ಸುಮಲತಾ ಬೆನ್ನಿಗೆ ನಿಂತಿದ್ದರು. ಇದರಿಂದ ಜೆಡಿಎಸ್ ಸೋಲಿಗೆಕಾರಣರಾಗಿದ್ದರು. ಅಲ್ಲದೆ, ಬಹುತೇಕ ಕಾರ್ಯಕರ್ತರು ಜೆಡಿಎಸ್, ಬಿಜೆಪಿ ಕಡೆಗೆ ವಾಲಿದ್ದರು.
ನಾವಿಕನಿಲ್ಲದ ದೋಣಿಯಂತಾಗಿದ್ದ ಕೈ : ಚಲುವರಾಯ ಸ್ವಾಮಿಗೆ ನಾಯಕತ್ವ : ವಿಧಾನ ಪರಿಷತ್‌ನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ನಾಯಕರು, ಎನ್.ಚಲುವರಾಯ ಸ್ವಾಮಿಗೆ ನಾಯಕತ್ವ ವಹಿಸಲಾಗಿದೆ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸಲಾಗುವುದು ಎಂದು ಸಾರಿ ಹೇಳುತ್ತಿದ್ದಾರೆ. ಮುಂದೆಯೂ ಇದೇ ರೀತಿ ಒಗ್ಗಟ್ಟಿನಿಂದ ಮುಂದಿನ ಎಲ್ಲ ಚುನಾವಣೆಗಳನ್ನು ಗೆಲ್ಲಲು ಸಿದ್ಧರಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ. ಆದರೆ, ಇದು ಎಲ್ಲಿಯವರೆಗೆ ಸಾಧ್ಯವಾಗಲಿದೆ ಎಂಬುದನ್ನುಕಾದು ನೋಡಬೇಕು.
ಮಂಡ್ಯ ಜಿಲ್ಲೆಯಲ್ಲಿಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಕಂಡ ನಂತರ ನಾಯಕತ್ವದ ಪ್ರಶ್ನೆ ಎದುರಾಗಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಒಗ್ಗಟ್ಟುಕಾಣಲಿಲ್ಲ. ಇದರಿಂದ ನಗರಸಭೆ ಸೇರಿದಂತೆ ವಿವಿಧೆಡೆ ಅಧಿಕಾರಕಳೆದುಕೊಳ್ಳಬೇಕಾಯಿತು. ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಂಭೀರವಾಗಿರಲಿಲ್ಲ. ಆಗ ಎನ್.ಚಲುವರಾಯ ಸ್ವಾಮಿ, ಪಿ.ಎಂ.ನರೇಂದ್ರ ಸ್ವಾಮಿ ಸೇರಿದಂತೆ ಎಲ್ಲರೂ ಇದ್ದರೂ ನಾವಿಕನಿಲ್ಲದ ದೋಣಿಯಂತಾಗಿತು.
ಬೂದಿಮುಚ್ಚಿದ ಕೆಂಡ :
ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ, ಸ್ಥಳೀಯ ಮುಖಂಡರು, ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯ, ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ. ಯಾವಾಗ ಬೇಕಾದರೂ ಹೊತ್ತಿ ಉರಿಯಬಹುದು. ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿಯೇ ಕೆಲವು ಮುಖಂಡರು ತಮ್ಮ ಪಕ್ಷದ ಮುಖಂಡರ ವಿರುದ್ಧವೇ ಕಿಡಿಕಾರಿದ್ದರು.