Advertisement

Congress; ಖರ್ಗೆ ಪರಮಾಪ್ತ ಜಗದೇವ ಗುತ್ತೇದಾರ್ ಗೆ ಪರಿಷತ್ ಟಿಕೆಟ್

06:40 PM Jun 02, 2024 | Team Udayavani |

ಕಲಬುರಗಿ: ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಪರಮಾಪ್ತ, ಕಲಬುರಗಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಅಭ್ಯರ್ಥಿ ಯನ್ನಾಗಿ ಅಂತಿಮಗೊಳಿಸಲಾಗಿದೆ.

Advertisement

ವಿಧಾನ ಸಭೆಯಿಂದ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಏಳು ಸ್ಥಾನಗಳಲ್ಲಿ ಗುತ್ತೇದಾರ ಒಬ್ಬರಾಗಿದ್ದು, ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಜಗದೇವ ಗುತ್ತೇದಾರ ವಿಧಾನ ಪರಿಷತ್ ಸದಸ್ಯರಾಗಲಿದ್ದಾರೆ ಎಂಬುದಾಗಿ ಕಳೆದ ಮೇ 27 ರಂದೇ ಉದಯವಾಣಿಯಲ್ಲಿ ಸುದ್ದಿ ಪ್ರಕಟವಾಗಿತ್ತು.

ಕಳೆದ ಎರಡು ಅವಧಿಯಿಂದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜಗದೇವ ಗುತ್ತೇದಾರ ಕಾರ್ಯನಿರ್ವಹಿಸುತ್ತಿದ್ದಾರೆ.ಇತ್ತೀಚಿಗೆ ನಡೆದಿದ್ದ ನಿಗಮ ಮಂಡಳಿ ನೇಮಕದಲ್ಲಿ ತಮಗೆ ಯಾವುದೇ ಸ್ಥಾನ ಬೇಡ ಎಂದು ಜಗದೇವ ನಿರಾಕರಿಸಿದ್ದರು. ಈ ನಡುವೆ ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹೆಸರೂ ಪರಿಷತ್ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿ ಬಂದಿತ್ತಾದರೂ ಪಕ್ಷ ನಿಷ್ಠರಾಗಿರುವ ಅದರಲ್ಲೂ ಖರ್ಗೆ ಅವರಿಗೆ ಪರಮಾಪ್ತರಾಗಿರುವ ಜಗದೇವ ಗುತ್ತೇದಾರರಿಗೆ ಮಣೆ ಹಾಕಲಾಗಿದೆ.

ಕಳೆದ ವರ್ಷ ಕಲಬುರಗಿ ಜಿಲ್ಲೆಯಿಂದ ಕೋಲಿ ಸಮಾಜದ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಕಾಂಗ್ರೆಸ್ ಪಕ್ಷ ದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದು, ಈಗ ಹಿಂದುಳಿದ ವರ್ಗ ಈಡಿಗ ಸಮುದಾಯದ ಗುತ್ತೇದಾರ ಮೇಲ್ಮನೆ ಪ್ರವೇಶಿಸುವ ಅವಕಾಶ ಕಾಂಗ್ರೆಸ್ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next