Advertisement
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೊನ್ನೆ ಸಂಪುಟ ಉಪ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದೆವು. ನಿನ್ನೆಯೇ ಸಚಿವ ಸತೀಶ ಜಾರಕಿಹೋಳಿ ನಾವು ಕೂಡಿದ್ದೇವು. ಮೈಸೂರು ದಸರಾಗೆ ಹೋಗುತ್ತಿದ್ದೇವೆ, ನೀವೂ ಬನ್ನಿ ಎಂದು ನನ್ನನ್ನೂ ಕರೆದರು.ಸುನೀಲ್ ಹನುಮುಕ್ಕನವರ ಹಾಗೂ ಇತರರ ಬಂದಿದ್ದರು. ಮೈಸೂರು ದಸರಾಗೆ ಹೋದರೆ ಬಂಡಾಯವೇ ಎಂದು ಪ್ರಶ್ನಿಸಿದರು.
Related Articles
Advertisement
ಜಪ್ತಿಯಾದ ಕೋಟಿ ಕೋಟಿ ಹಣ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷದವರು ಬಳಕೆ ಮಾಡಲು ಸಂಗ್ರಹಿಸಿದ್ದು ಎಂದು ಬಿಜೆಪಿ ರಾಜ್ಯ ಅದ್ಯಕ್ಷ ನಳಿನಕುಮಾರ ಕಟೀಲ್ ಆರೋಪಕ್ಕೆ ಕಿಡಿ ಕಾರಿದ ಸಚಿವ ಪಾಟೀಲ, ಐಟಿ ದಾಳಿಯಲ್ಲಿ ಸಿಕ್ಕ ಹಣ ಗುತ್ತಿಗೆದಾರರಿಗೆ ಸೇರಿದ್ದೇ ಹೊರತು ಕಾಂಗ್ರೆಸ್ ಪಕ್ಷಕ್ಕೆ ಇದರಲ್ಲಿ ಯಾವುದೇ ಸಂಬಂಧವಿಲ್ಲ.ನಮ್ಮ ಸರ್ಕಾರ ಬಂದ ಬಳಿಕ ನಾವಿನ್ನು ಯಾವುದೇ ಟೆಂಡರನ್ನೇ ಕರೆದಿಲ್ಲ. ಹೀಗಿರುವಾಗ ಭ್ರಷ್ಟಾಚಾರ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬಹುಶಃ ಇದು ನಳಿನ್ ಕುಮಾರ್ ಕಟೀಲ್ ಅವರ ಪಕ್ಷದ ಸರ್ಕಾರದ ಶೇ. 40 ಪರ್ಸೆಂಟ್ ಕಮಿಷನ್ ನಡೆದಿತ್ತಲ್ಲ, ಆ ಕಥೆ ಆಗಿರಬೇಕು ಎಂದು ತಿರುಗೇಟು ನೀಡಿದರು.
ಐಟಿ ದಾಳಿಯಲ್ಲಿ ಸಿಕ್ಕ ಹಣದ ಕುರಿತು ತನಿಖೆ ನಡೆಸುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಗ್ರಹಿರುವ ಕುರಿತು ಪ್ರತಿಕ್ರಿಯಿಸಿದ ಅವರು, ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಸದ್ಯ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಎಲ್ಲವೂ ಹೊರ ಬರಲಿದೆ ಎಂದರು.