ಬೆಂಗಳೂರು: ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನ ಶುಕ್ರವಾರ ಮುಗಿದ ಬೆನ್ನಲ್ಲೇ ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಸಚಿವರನ್ನು ಮೇ 7ರಂದು ನಡೆಯುವ ಉಳಿದ 14 ಕ್ಷೇತ್ರಗಳ ಪೈಕಿ 13 ಲೋಕಸಭಾ ಕ್ಷೇತ್ರಗಳಿಗೆ ಹೆಚ್ಚುವರಿ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಸಚಿವರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಸ್ಪರ್ಧಿಸಿರುವ ಕಲಬುರಗಿ ಕ್ಷೇತ್ರಕ್ಕೆ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರೇ ಉಸ್ತುವಾರಿ ಆಗಿರುವುದರಿಂದ ಯಾವೊಬ್ಬ ಸಚಿವರನ್ನು ಹೆಚ್ಚುವರಿ ಉಸ್ತುವಾರಿಯನ್ನಾಗಿ ನೇಮಿಸಿಲ್ಲ.
ಹೆಚ್ಚುವರಿ ಉಸ್ತುವಾರಿ ಸಚಿವರ ಪಟ್ಟಿ ಈ ರೀತಿ ಇದೆ.
ದಾವಣಗೆರೆ-ಡಾ| ಜಿ. ಪರಮೇಶ್ವರ್, ಧಾರವಾಡ-ದಿನೇಶ್ ಗುಂಡೂರಾವ್, ಉತ್ತರ ಕನ್ನಡ-ಕೆ.ಜೆ. ಜಾರ್ಜ್, ಚಿಕ್ಕೋಡಿ-ಡಿ. ಸುಧಾಕರ್, ಹಾವೇರಿ-ಕೃಷ್ಣ ಬೈರೇಗೌಡ, ಬಳ್ಳಾರಿ-ರಾಮಲಿಂಗಾರೆಡ್ಡಿ, ಬೆಳಗಾವಿ-ಡಾ| ಎಂ.ಸಿ. ಸುಧಾಕರ್, ಕೊಪ್ಪಳ-ಬೈರತಿ ಸುರೇಶ್, ರಾಯಚೂರು- ಕೆ.ಎಚ್. ಮುನಿಯಪ್ಪ, ಬೀದರ್-ಕೆ. ವೆಂಕಟೇಶ್, ಶಿವಮೊಗ್ಗ- ಚಲುವರಾಯಸ್ವಾಮಿ, ವಿಜಯಪುರ- ಡಾ| ಎಚ್.ಸಿ. ಮಹದೇವಪ್ಪ ಹಾಗೂ ಬಾಗಲಕೋಟೆ- ಕೆ.ಎನ್. ರಾಜಣ್ಣ.