Advertisement

ಉಡುಪಿ ನಗರಸಭೆಯ ಹಾಲಿ ಕಾಂಗ್ರೆಸ್ ಸದಸ್ಯೆ ಸೆಲಿನಾ ಕರ್ಕಡ ನಿಧನ

09:51 AM Oct 30, 2022 | Team Udayavani |

ಉಡುಪಿ: ಉಡುಪಿ ನಗರಸಭೆಯ ಪೆರಂಪಳ್ಳಿ ವಾರ್ಡಿನ ಕಾಂಗ್ರೆಸ್ ನ ಸದಸ್ಯೆ ಸೆಲಿನಾ ಕರ್ಕಡ (52ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಸೆಲಿನಾ ಕರ್ಕಡ ಅವರು ಕರುಳಿನ ಕ್ಯಾನ್ಸರ್ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು ಕಳೆದ ಬುಧವಾರ ಕಾಯಿಲೆ ಉಲ್ಬಣವಾದ ಹಿನ್ನೆಲೆಯಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದ್ದಾರೆ.

ಸೆಲಿನಾ ಕರ್ಕಡ ಅವರು ಎರಡನೆ ಅವಧಿಗೆ ನಗರಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು.

ಮೃತರು ಪತಿ, ಓರ್ವ ಪುತ್ರನನ್ನು ಅಗಲಿದ್ದಾರೆ.

ಇದನ್ನೂ ಓದಿ : 2.3 ಅಡಿ ಎತ್ತರದ ಹುಡುಗನ ಮದುವೆ ಕನಸು ಕೊನೆಗೂ ನನಸು! ಮೋದಿ, ಯೋಗಿಗೆ ಮದುವೆ ಆಮಂತ್ರಣ

Advertisement
Advertisement

Udayavani is now on Telegram. Click here to join our channel and stay updated with the latest news.

Next