ಬೆಂಗಳೂರು : ನಾವು ಪಾದಯಾತ್ರೆ ನಡೆಸುತ್ತಿರುವುದು ಕೊಡವರ ವಿರುದ್ಧ ಅಲ್ಲ ಎಂಬ ಸ್ಪಷ್ಟೀಕರಣದೊಂದಿಗೆ ಮಡಿಕೇರಿ ಚಲೋ ಕಾರ್ಯಕ್ರಮವನ್ನು ಮುಂದೂಡಿರುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಈ ವಿಷಯ ತಿಳಿಸಿದ ಅವರು ಮಡಿಕೇರಿ ಚಲೋ ಮುಂದೂಡಿರುವುದಾಗಿ ಹೇಳಿದ್ದಾರೆ.
ಅವರು ಬರಲಿ ಕೊಡಗಿಗೆ ಎಂದು ಬೋಪಯ್ಯ ನನಗೇ ಅವಾಜ್ , ಸವಾಲು ಹಾಕುತ್ತಾರೆ. ನಾವು ಸ್ವತಂತ್ರ ಭಾರತದಲ್ಲಿ ಇದ್ದೇವಾ ? ಬರಬೇಡ ಎಂದು ಹೇಳುವುದಕ್ಕೆ ಅವರು ಯಾರು ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಎಸಿಬಿ ವಿಚಾರದಲ್ಲಿ ಸುಪ್ರೀಂ ಮೊರೆ ಹೋದ ರಾಜ್ಯ ಸರಕಾರ
ನಾವು ಕೊಡಗಿಗೆ ಬರುತ್ತೇವೆ ಎಂದು ಘೋಷಣೆ ಮಾಡಿದ ಬಳಿಕ ಜಾಗೃತಿ ಸಮಾವೇಶ ನಡೆಸುತ್ತೇವೆ ಎಂದು ಹೇಳಿದ್ದಾರೆ. ಗೊಂದಲ ಸೃಷ್ಟಿ ಮಾಡುವುದೇ ಅವರ ಉದ್ದೇಶವಾಗಿದೆ ಎಂದು ಆರೋಪಿಸಿದರು.
ನಾನು ಕೊಡಗಿಗೆ ಹೋದಾಗ ಐದು ಬಾರಿ ಪ್ರತಿಭಟನೆ ನಡೆದಿದೆ. ಒಂದು ಕಡೆ ಬಟ್ಟೆಯಲ್ಲಿ ಕಲ್ಲು ಕಟ್ಟಿಕೊಂಡು ದಾಳಿಯಾಗಿದೆ. ಈ ಬಗ್ಗೆ ನಾನು ಸ್ಥಳೀಯ ಎಸ್ಪಿ ಯವರನ್ನು ಕರೆದು ತರಾಟೆಗೆ ತೆಗೆದುಕೊಂಡಿದ್ದೇನೆ. ಇದೊಂದು ಸರಕಾರಿ ಪ್ರಾಯೋಜಿತ ಪ್ರತಿಭಟನೆಯಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.