ಹೊಸದಿಲ್ಲಿ: ದಿಲ್ಲಿಯಲ್ಲಿ ಗೆಜೆಟೆಡ್ ಅಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಅಧ್ಯಾದೇಶ ವಿರುದ್ಧ ಸಂಸತ್ ಅಧಿವೇಶನದಲ್ಲಿ ಆಪ್‌ಗೆ ಕಾಂಗ್ರೆಸ್ ಬೆಂಬಲ ನೀಡುವ ಸಾಧ್ಯತೆ ಇದೆ.
ಈ ಬಗ್ಗೆ ಪಕ್ಷದ ನಾಯಕ ಜೈರಾಂ ರಮೇಶ್ ಅವರು ಸುಳಿವು ನೀಡಿದ್ದಾರೆ.
“ಚುನಾವಣೆಯಲ್ಲಿ ಆಯ್ಕೆಯಾಗಿರುವ ರಾಜ್ಯಗಳ ಹಕ್ಕುಗಳನ್ನು ರಕ್ಷಿಸಲು ಬೆಂಬಲ ನೀಡಬೇಕಾಗಿದೆ’ ಎಂದಿದ್ದಾರೆ.
ಬೆಂಗಳೂರಿನಲ್ಲಿ ಜು.17, 18ರಂದು ನಡೆಯಲಿರುವ ವಿಪಕ್ಷಗಳ ಸಭೆಗೆ ಆಪ್ ಗೈರುಹಾಜರಾಗುವ ಸೂಚನೆ ಲಭಿಸುತ್ತಿದಂತೆಯೇ ಈ ಘೋಷಣೆ ಹೊರಬಿದ್ದಿದೆ.
ಇದೇ ವೇಳೆ, ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಜು.18ಕ್ಕೆ ಬೆಂಗಳೂರಿಗೆ ಆಗಮಿಸುವುದಾಗಿ ಹೇಳಿದ್ದಾರೆ.