Advertisement

ನಮೋ ಗುಣಗಾನ : ಕಾಂಗ್ರೆಸಿಗರಿಬ್ಬರಿಂದ ಬಿಜೆಪಿ, ಮೋದಿ ಶ್ಲಾಘನೆ

12:37 AM Mar 01, 2021 | Team Udayavani |

ಹೊಸದಿಲ್ಲಿ/ಜಮ್ಮು : ಕಾಂಗ್ರೆಸ್‌ನ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್‌ ಮತ್ತು ರಷೀದ್‌ ಅಳ್ವಿ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಕಾರ್ಯವೈಖರಿಯನ್ನು ಬಹಿರಂಗವಾಗಿ ಹೊಗಳಿದ್ದಾರೆ.

Advertisement

ಜಮ್ಮುವಿನಲ್ಲಿ ಮಾತನಾಡಿದ ಗುಲಾಂ ನಬಿ ಆಜಾದ್‌, “ನಾನು ಹಳ್ಳಿಯಿಂದ ಬಂದವನು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಇದೇ ರೀತಿ ತಮ್ಮ ಹಿನ್ನೆಲೆಯ ಬಗ್ಗೆ ಪ್ರಾಮಾಣಿಕವಾಗಿ ಹೇಳುವ ನಾಯಕರು ನನಗೆ ಇಷ್ಟ. ಮೋದಿ ಕೂಡ ಹಳ್ಳಿ ಹಿನ್ನೆಲೆಯವರಾಗಿದ್ದು, ಚಹಾ ಮಾರುತ್ತಿದ್ದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇದು ಇಷ್ಟವಾಗುತ್ತದೆ’ ಎಂದು ಬಹಿರಂಗವಾಗಿ ಹೊಗಳಿದ್ದಾರೆ.

ಬಿಜೆಪಿ ಕಾರ್ಯ ವೈಖರಿಗೆ ಶ್ಲಾಘನೆ
ಕಾಂಗ್ರೆಸ್‌ನ ಮತ್ತೂಬ್ಬ ನಾಯಕ ರಷೀದ್‌ ಅಳ್ವಿ ಬಿಜೆಪಿಯ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪ್ರತೀ ಚುನಾವಣೆಯನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಅದರ ನಾಯಕತ್ವದ ಪರಿಶ್ರಮ ಮೆಚ್ಚತಕ್ಕದ್ದು. ನಾಯಕರು ಮಾತ್ರವಲ್ಲ, ಪಕ್ಷದ ಎಲ್ಲರೂ ಅದೇ ರೀತಿ ಕೆಲಸ ಮಾಡುತ್ತಾರೆ. ನಾವು ಅವರನ್ನು ನೋಡಿ ಕಲಿಯಬೇಕಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next