Advertisement

ಗೋಹತ್ಯೆ ಕೇಸು ದಾಖಲಿಗೆ ಕಾಂಗ್ರೆಸ್‌ ನಾಯಕರಲ್ಲೇ ಅಸಮಾಧಾನ

11:43 PM Feb 08, 2019 | Team Udayavani |

ನವದೆಹಲಿ: ಮಧ್ಯಪ್ರದೇಶ ಸರ್ಕಾರವು ಗೋಹತ್ಯೆ ಆರೋಪದಲ್ಲಿ ಬಂಧಿತರಾದ ಮೂವರ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಯನ್ವಯ ಕೇಸು ದಾಖಲಿಸಿರುವುದು ಕಾಂಗ್ರೆಸ್‌ ನಾಯಕರಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ. ಕಮಲ್‌ನಾಥ್‌ ಸರ್ಕಾರದ ಈ ಕ್ರಮಕ್ಕೆ ಕೇಂದ್ರದ ಮಾಜಿ ಸಚಿವ ಸಲ್ಮಾನ್‌ ಖುರ್ಷಿದ್‌, ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌, ಕರ್ನಾಟಕದ ಮಾಜಿ ಸಚಿವ ರೋಷನ್‌ ಬೇಗ್‌ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಪ್ರತಿಕ್ರಿಯಿಸಿದ ಖುರ್ಷಿದ್‌, ‘ಮೇಲ್ನೋಟಕ್ಕೆ ಇದು ಸರಿಯಾದ ಕ್ರಮವಲ್ಲ ಎಂದು ನನಗನಿಸುತ್ತಿದೆ. ಇದರ ಹಿಂದೆ ಯಾವುದಾದರೂ ಕಾರಣ ಇರಲೂಬಹುದು. ಕಮಲ್‌ನಾಥ್‌ ಸರ್ಕಾರವೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದಿದ್ದಾರೆ.

Advertisement

ಇನ್ನೊಂದೆಡೆ, ಗೋಹತ್ಯೆ ಮಾಡುವವವರ ವಿರುದ್ಧ ಕೇಸು ಹಾಕುವುದು ಸರಿ. ಆದರೆ, ಎನ್‌ಎಸ್‌ಎಯಡಿ ಕೇಸು ದಾಖಲಿಸುವ ಅಗತ್ಯವಿತ್ತೇ? ಇಂಥ ಕ್ರಮದ ಮೂಲಕ ರಾಜ್ಯ ಸರ್ಕಾರವು ಯಾವ ಸಂದೇಶವನ್ನು ನೀಡಲು ಬಯಸುತ್ತಿದೆ ಎಂದು ರೋಷನ್‌ ಬೇಗ್‌ ಪ್ರಶ್ನಿಸಿದ್ದಾರೆ. ಇದೇ ವೇಳೆ ಅಗರ್‌ ಮಾಲ್ವಾ ಜಿಲ್ಲೆಯಲ್ಲಿ ಇನ್ನೂ ಇಬ್ಬರ ವಿರುದ್ಧ ಗೋಹತ್ಯೆ ಹಿನ್ನೆಲೆಯಲ್ಲಿ ಎನ್‌ಎಸ್‌ಎ ಅಡಿ ಕೇಸು ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next