ದಾವಣಗೆರೆ: ಎಸ್.ಎಸ್. ಹೈಟೆಕ್ ಆಸ್ಪತ್ರೆಮತ್ತು ಎಸ್.ಎಸ್. ಮಾಲ್‌ನಲ್ಲಿ ಸಾರ್ವಜನಿಕರ ರಸ್ತೆಗಳೇನಾದರೂ ಇದ್ದಲ್ಲಿ ಬಿಜೆಪಿಯವರುತೋರಿಸಲಿ. ಜಿಎಂಐಟಿ ಇತರೆ ಕಡೆ ಸಹರಸ್ತೆಗಳು ಇರುವುದನ್ನ ನಾವು ದಾಖಲೆ ಸಮೇತ ತೋರಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಸವಾಲು ಹಾಕಿದ್ದಾರೆ.
ದೂಡಾ ಅಧ್ಯಕ್ಷರು ಅಭಿವೃದ್ಧಿ ಕಾರ್ಯಗಳತ್ತ ಗಮನ ನೀಡದೆ ಬರೀ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ದೊಡ್ಡವರನ್ನು ಟೀಕೆ ಮಾಡಿದ ಮಾತ್ರಕ್ಕೆ ನಾವು ದೊಡ್ಡವರಾಗಿ ಹೋಗುತ್ತೇವೆ.ಅಪಪ್ರಚಾರವೇ ಬಿಜೆಪಿಯವರ ಸಾಧನೆ ಎಂದು ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ದೂರಿದರು.
ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಬಿಜೆಪಿಯವರದ್ದು ಯಾವುದೇ ಅಭಿವೃದ್ಧಿ ಕಾರ್ಯ ಇಲ್ಲ. ಮೊಸರಲ್ಲಿಕಲ್ಲು ಹುಡುಕುವ ಕೆಲಸ ಬಿಟ್ಟು ಅಭಿವೃದ್ಧಿಯತ್ತಗಮನ ನೀಡಲಿ ಎಂದು ಹೇಳಿದರು. ದೂಡಾ ಮಾಜಿ ಅಧ್ಯಕ್ಷ ಮಾಲತೇಶ್ ಜಾಧವ್ ಮಾತನಾಡಿ, ನಾನು 2000ರಲ್ಲಿ ದೂಡಾ ಅಧ್ಯಕ್ಷನಾಗಿದ್ದಾಗ ಎಸ್.ಎಸ್. ಹೈಟೆಕ್‌ಆಸ್ಪತ್ರೆಗೆ ಕಾನೂನು ಬದ್ಧವಾಗಿ ಅನುಮೋದನೆನೀಡಲಾಗಿತ್ತು. 2008ರಲ್ಲಿ ಸಿಡಿಪಿ ಆಗಿದೆ. ಇಗ ಅಲ್ಲಿ ರಸ್ತೆಗಳಿವೆ ಎಂದು ಬಿಜೆಪಿಯವರು ಹೇಳುತ್ತಾರೆ.ಸಿಂಗಲ್ ಲೇಔಟ್ ಇದ್ದಾಗ ಕಾನೂನು ಪ್ರಕಾರವೇ ರಸ್ತೆ ಬಿಡಲಿಕ್ಕೆ ಬರುವುದಿಲ್ಲ ಎಂಬುದು ಸಹಅವರಿಗೆ ಗೊತ್ತಿಲ್ಲ. ವಾಣಿ ಹೋಂಡಾ ಶೋರೂಂಸಹ ಸಿಂಗಲ್ ಲೇಔಟ್ ಮಾಡಿಕೊಡಲಾಗಿತ್ತು.ಅಲ್ಲಿಯೂ ರಸ್ತೆಗಳಿವೆ. ಈಗ ಬಿಟ್ಟು ಕೊಡುತ್ತಾರಾ. ಜಿಎಂಐಟಿ ಜಾಗದಲ್ಲು ರಸ್ತೆಗೆ ಜಾಗ ಇದ್ರೆ ಬಿಟ್ಟು ಕೊಡುತ್ತಾರೆ. ಬಿಜೆಪಿಯವರ ಎಲ್ಲಾ ಆರೋಪಗಳು ಸುಳ್ಳು ಎಂದು ತಿಳಿಸಿದರು.
ದೂಡಾ ಮಾಜಿ ಅಧ್ಯಕ್ಷ ಅಯೂಬ್ ಫೈಲ್ವಾನ್ ಮಾತನಾಡಿ, ನಾನು ದೂಡಾ ಅಧ್ಯಕ್ಷನಾಗಿದ್ದಾಗ 1.5 ಕೋಟಿ ವೆಚ್ಚದ ತಾತ್ಕಾಲಿಕ ಶೆಡ್ ನಿರ್ಮಾಣದಲ್ಲಿ ಹಣ ಕಬಳಿಸಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಹಿಂದಿನ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಆಡಳಿತಾಧಿಕಾರಿಯಾಗಿದ್ದಾಗ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿತ್ತು. ದೂಡಾ ಬಳಿ 27 ಕೋಟಿ ವೆಚ್ಚದ ಫ್ಲೆ$ç ಓವರ್, 17 ಸಮಾಜಗಳಿಗೆ ನಿವೇಶನ, ಬೀದಿದೀಪಗಳ ವ್ಯವಸ್ಥೆ ಆಗಿರುವುದು ನನ್ನ ಅಧಿಕಾರವಧಿಯಲ್ಲಿ. ಬಿಜೆಪಿಯವರು ದೊಡ್ಡವರ ಹೆಸರಿಗೆ ಕಪ್ಪು ಚುಕ್ಕೆ ತರುವ ಕೆಲಸ ಬಿಟ್ಟು ಅಭಿವೃದ್ಧಿ ಮಾಡಲಿ ಎಂದು ತಿಳಿಸಿದರು.
ದೂಡಾ ಮಾಜಿ ಅಧ್ಯಕ್ಷ ಶಾಮನೂರು ರಾಮಚಂದ್ರಪ್ಪ ಮಾತನಾಡಿ, ನನ್ನಅಧಿಕಾರವಧಿಯಲ್ಲಿ ಒಂದೇ ಒಂದು ರೂ. ಅವ್ಯವಹಾರ, ಭ್ರಷ್ಟಾಚಾರ ನಡೆಸಿಲ್ಲ ಎಂದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿದಿನೇಶ್ ಶೆಟ್ಟಿ ಮಾತನಾಡಿ, ಯಶವಂತರಾವ್ ಜಾಧವ ದೂಡಾ ಅಧ್ಯಕ್ಷರಾಗಿದ್ದಾಗ ಎಸ್. ನಿಜಲಿಂಗಪ್ಪ ಬಡಾವಣೆಯ ಮೂಲೆ ನಿವೇಶನ ಹರಾಜು ಹಾಕಲಾಗಿತ್ತು. ಅವರ ಅತ್ತೆಯ ಹೆಸರಲ್ಲಿ ಜಾಗ ಪಡೆದು ಆಮೇಲೆ ಅವರ ಹೆಂಡತಿ ಹೆಸರಿಗೆ ದಾನಪತ್ರ ಮಾಡಿಸಿಕೊಂಡಿದ್ದಾರೆ. ಸೆಟ್ ಬ್ಯಾಕ್ ಬಿಡದೆ ವಾಣಿಜ್ಯ ಸಂಕೀರ್ಣ ಕಟ್ಟಿದ್ದಾರೆ.ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಅಕ್ರಮನಡೆಸಿ 612 ನಿವೇಶನ ಮಂಜೂರು ಮಾಡಿರುವ ಬಗ್ಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದೆ. ಬಿಜೆಪಿಯವರು ಸುಳ್ಳು ಆರೋಪನಿಲ್ಲಿಸಲಿ. ಮುಂದುವರೆಸಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಕೆ. ಚಮನ್‌ಸಾಬ್, ಶಾಮನೂರು ಬಸವರಾಜ್, ಹುಲ್ಮನೆ ಗಣೇಶ್, ಸೀಮೆಎಣ್ಣೆ ಮಲ್ಲೇಶ್ ಇತರರು ಇದ್ದರು.