ಬೆಂಗಳೂರು: ಆಶೋಕ್ ಮತ್ತು ಯಡಿಯೂರಪ್ಪ ಇಬ್ಬರಿಗೂ ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ, ಏನೆ ಆದರೂ ಕಾಂಗ್ರೆಸ್ ಕಾರಣ ಅನ್ನುತ್ತಾರೆ. ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿ ಘಟನೆಗೆ ಕಾಂಗ್ರೆಸ್ ನಾಯಕರು ಭಾಗಿ ಆರೋಪ ವಿಚಾರವಾಗಿ ಸುದ್ದಿಗಾರರೊಂದಿ ಮಾತನಾಡಿದ ಅವರು, ಅಲ್ತಾಫ್ ಗೆ ಘಟನೆಯಲ್ಲಿ ಗಾಯ ಆಗಿದೆ. ಬೆನ್ನಿಗೆ ಹೊಡೆದಿದ್ದಾರೆ. ಅವರು ಸಹ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಈಗ ಈಚೆ ಬಂದಿದ್ದಾರೆ. ಕಾಂಗ್ರೆಸ್‍ನವರು ಗಲಭೆಯಲ್ಲಿ ಭಾಗಿಯಾಗಿದ್ದರೆ ಅರೆಸ್ಟ್ ಮಾಡಲಿ. ಇವರೇ ಹೇಳುತ್ತಾರೆ ಒದ್ದು ಒಳಗೆ ಹಾಕಿಸಬೇಕು ಎಂದು. ಹಾಕಿಸಲಿ ಯಾರು ಬೇಡ ಅನ್ನುತ್ತಾರೆ. ನಿನ್ನೆ ನಾನೇ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿದ್ದೇನೆ. ಕಾನೂನು ಕೈಗೆತ್ತಿಕೊಂಡವರನ್ನು ಬಿಡಬೇಡಿ ಎಂದು ಹೇಳಿದ್ದೇನೆ. ನಾವು ಯಾರ ರಕ್ಷಣೆಗೂ ತಯಾರಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮೌಖಿಕ ಆದೇಶದ ಮೇಲೆ ಕಾಮಗಾರಿ ಮಾಡಬಾರದು : ಸಿಎಂ ಎಚ್ಚರಿಕೆ
ನೈತಿಕ ಪೊಲೀಸ್ ಗಿರಿಯನ್ನು ಪ್ರಾರಂಭದಲ್ಲಿಯೇ ಮೊಟಕು ಮಾಡಿದ್ದರೆ, ರಾಜ್ಯದಲ್ಲಿ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಯಡಿಯೂರಪ್ಪ ಮಾತನಾಡುತ್ತಾರೆ, ಆಶೋಕ್ ಮಾತನಾಡುತ್ತಾರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇವರು ಯಾವಾಗ ಕಾನೂನು ಪಾಲನೆ ಮಾಡಿದ್ದಾರೆ. ನಮ್ಮ ಮೇಲೆ ಕೇಸ್ ಹಾಕಿದ್ದರು. ಈಶ್ವರಪ್ಪ 144 ಸೆಕ್ಷನ್ ಉಲ್ಲಂಘನೆ ಮಾಡಿದರು. ಮನೆ ಮುಂದೆ ಮೆರವಣಿಗೆ ಮಾಡಿದ್ದಾರೆ. ಕೇಸ್ ಹಾಕಿದ್ರಾ? ಎಂದು ಪ್ರಶ್ನಿಸಿದ್ದಾರೆ.
ದಿಂಗಾಲೇಶ್ವರ ಶ್ರೀಗಳ 30% ಕಮಿಷನ್ ಆರೋಪ ವಿಚಾರವಾಗಿ ಮಾತನಾಡಿ, ಈಗ ಎಲ್ಲರೂ ಆರೋಪ ಮಾಡುತ್ತಾರೆ. ಹಿಂದೆ ಕೆಂಪಣ್ಣ ಹೇಳಿದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಕಮಿಷನ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು. ಈಗ ಜಗಜ್ಜಾಹಿರಾತು ಆಗಿದೆ. ಸ್ವಾಮಿಜೀಗಳು ತಿಳಿದವರು ಇದ್ದಾರೆ. ವಿದ್ಯಾವಂತರು ಇದ್ದಾರೆ. ಹಾಗಾಗಿ ಎಲ್ಲವನ್ನೂ ತಿಳಿದುಕೊಂಡು ಮಾತನಾಡಿದ್ದಾರೆ ಎಂದರು.
ಶ್ರೀಗಳು ನಮ್ಮ ಮೆನೆಗೆ ಬಂದಿದ್ದರು. ಈಶ್ವರಪ್ಪ ಮನೆಗೂ ಸ್ವಾಮಿಜೀಗಳು ಹೋಗಿದ್ದರು. ಹಾಗೆಂದು ನಾವೇ ಕುಮ್ಮಕ್ಕು ಕೊಟ್ಟಿದ್ದೇವೆ ಎಂದಲ್ಲ. ಅವರ ಗಮನಕ್ಕೆ ಬಂದಾಗ ಕಮಿಷನ್ ವಿಚಾರ ಮಾತನಾಡಿದ್ದಾರೆ ಎಂದು ಹೇಳಿದರು.