ಬೆಳಗಾವಿ: ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಕಾರಣ ವೈದ್ಯರ ಸಲಹೆಯಂತೆ ಶುದ್ಧ ವಾತಾವರಣ ಪಡೆಯಲು ಗೋವಾಗೆ ಆಗಮಿಸಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಬೆಳಗ್ಗೆ ವಾಯುವಿಹಾರ ನಡೆಸಿ ಸೈಕ್ಲಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಗೋವಾದ ಲೀಲಾವತಿ ಪ್ಯಾಲೆಸ್ ನಲ್ಲಿ ಸೋನಿಯಾ ಗಾಂಧಿ ಹಾಗೂ ಹಾಗೂ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರು ಕಳೆದ ಮೂರ್ನಾಲ್ಕು ದಿನಗಳಿಂದ ವಾಸ್ತವ್ಯ ಹೂಡಿದ್ದಾರೆ. ನಿತ್ಯ ಬೆಳಗ್ಗೆ ಸೋನಿಯಾ ಗಾಂಧಿ ಅವರು ಲೀಲಾವತಿ ಪ್ಯಾಲೇಸ್ ನಲ್ಲಿ ಸೈಕ್ಲಿಂಗ್ ಮಾಡುತ್ತಿದ್ದಾರೆ. ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಜೈಲಿನಿಂದಲೇ ಲಾಲೂ ಕುದುರೆ ವ್ಯಾಪಾರ! ಎನ್ ಡಿಎ ಸರ್ಕಾರ ಪತನಕ್ಕೆ ಆರ್ ಜೆಡಿ ಪ್ಲ್ಯಾನ್
ಗೋವಾದ ಲೀಲಾವತಿ ಪ್ಯಾಲೆಸ್ ನಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃಣಾಲ್ ಹೆಬ್ಬಾಳಕರ ಅವರ ಅದ್ಧೂರಿ ಮದುವೆ ಸಮಾರಂಭ ಶುಕ್ರವಾರ ನಡೆಯಲಿದೆ. ಮಂಗಳವಾರವೇ ಪ್ಯಾಲೆಸ್ ನಲ್ಲಿ ಹೆಬ್ಬಾಳಕರ ಸಂಬಂಧಿಕರು ಹಾಗೂ ಬೀಗರು ಬಂದಿಳಿದಿದ್ದಾರೆ. ಇಲ್ಲಿಯೇ ಮದುವೆ ಸಮಾರಂಭ ನಡೆಯಲಿರುವುದರಿಂದ ಸೋನಿಯಾ ಹಾಗೂ ರಾಹುಲ್ ಈ ಶುಭ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯ ಅಹ್ಮದ ಪಟೇಲ್ ಅವರ ನಿಧನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ದೆಹಲಿಗೆ ಇಂದು ಮಧ್ಯಾಹ್ನ ಮರಳಲಿದ್ದು, ಜತೆಗೆ ಸೋನಿಯಾ ಗಾಂಧಿ ಅವರೂ ಹೋಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ