Advertisement

ಹಿರಿಯ ಕಾಂಗ್ರೆಸ್ ಮುಖಂಡ ಸತೀಶನ್ ಇನ್ನಿಲ್ಲ; ಕಮ್ಯೂನಿಷ್ಟ್ ಪಕ್ಷ ಧಿಕ್ಕರಿಸಿದ್ದ ಪಾಚೇನಿ

01:11 PM Oct 28, 2022 | Team Udayavani |

ಕಣ್ಣೂರು: ಕಾಂಗ್ರೆಸ್ ಹಿರಿಯ ಮುಖಂಡ ಸತೀಶನ್ ಪಾಚೇನಿ (54) ಕಣ್ಣೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆಂದು ವರದಿ ತಿಳಿಸಿದೆ. ಮೆದುಳಿನಲ್ಲಿ ರಕ್ತಸ್ರಾವವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

ಇದನ್ನೂ ಓದಿ:ಓಟಿಟಿಗೆ ಬಂತು ಬಾಕ್ಸಾಫೀಸ್ ನಲ್ಲಿ 500 ಕೋಟಿ ಗಳಿಸಿದ ‘ಪೊನ್ನಿಯನ್ ಸೆಲ್ವನ್-1’ ಸಿನಿಮಾ

ಪಾಚೇನಿ ಅವರು ತಾಲಿಪರಂಬ್ ನ ಕಮ್ಯೂನಿಷ್ಟ್ ಕುಟುಂಬದಲ್ಲಿ ಜನಿಸಿದ್ದರು. ಸತೀಶನ್ ಪಾಚೇನಿ ಉರುವಾಡೆನ್ ಅವರ ಮೊಮ್ಮಗ. ಇವರು ಹಲವಾರು ರೈತ ಚಳವಳಿಯಲ್ಲಿ ಭಾಗವಹಿಸಿ, ಜೈಲುವಾಸ ಅನುಭವಿಸಿದ್ದರು.

ಮಣಿಚೇರಿ ಸತೀಶನ್ ಅಲಿಯಾಸ್ ಸತೀಶನ್ ಪಾಚೇನಿ ಅವರು ಕಮ್ಯೂನಿಷ್ಟ ಕಾರ್ಯಕರ್ತ, ದಿ.ಪಾಲಕ್ಕೀಲ್ ದಾಮೋದರನ್ ಮತ್ತು ಮಣಿಚೇರಿ ನಾರಾಯಣಿ ದಂಪತಿಯ ಹಿರಿಯ ಪುತ್ರರಾಗಿದ್ದಾರೆ.

ಪಾಚೇನಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಸತೀಶನ್ ಅವರು ಕಣ್ಣೂರು ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಅಲ್ಲದೇ ಪಯ್ಯನ್ನೂರು ಕಾಲೇಜಿನಲ್ಲಿ ಪಾಲಿಟಿಕಲ್ ಸೈನ್ಸ್ ನಲ್ಲಿ ಪದವಿ ಪಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಕಾಲೇಜು ದಿನಗಳಲ್ಲಿ ಕಾಂಗ್ರೆಸ್ ಬಗ್ಗೆ ಒಲವು ಹೊಂದಿದ್ದರು. 1977ರಲ್ಲಿ ಗುವಾಹಟಿಯಲ್ಲಿ ನಡೆದಿದ್ದ ಎಐಸಿಸಿ ಸಭೆಯಲ್ಲಿ ಎ.ಕೆ ಆ್ಯಂಟನಿಯವರು ತುರ್ತುಪರಿಸ್ಥಿತಿ ದುರುಪಯೋಗದ ಕುರಿತು ಮಾತನಾಡಿದ್ದ ಭಾಷಣದ ವರದಿಯನ್ನು ಪತ್ರಿಕೆಯಲ್ಲಿ ಸತೀಶನ್ ಓದಿ ಪ್ರಭಾವಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಸತೀಶನ್ ಕಾಲೇಜು ದಿನಗಳಲ್ಲಿ ಕೇರಳ ವಿದ್ಯಾರ್ಥಿ ಸಂಘಟನೆಗೆ ಸೇರ್ಪಡೆಗೊಂಡಿದ್ದರು.

ಕಟ್ಟಾ ಕಮ್ಯೂನಿಷ್ಟ್ ಕುಟುಂಬದ ಹಿನ್ನೆಲೆಯ ಸತೀಶನ್ ಕೆಎಸ್ ಯು (ಕೇರಳ ವಿದ್ಯಾರ್ಥಿ ಸಂಘಟನೆ)ನ ಕಾರ್ಯಕರ್ತನಾಗಿದ್ದು, ಅಸಮಧಾನಕ್ಕೆ ಕಾರಣವಾಗಿತ್ತು. ಇದರ ಪರಿಣಾಮ ಸತೀಶನ್ ಅವರನ್ನು 16ನೇ ವಯಸ್ಸಿನಲ್ಲೇ ಮನೆಯಿಂದ ಹೊರಹಾಕಲಾಗಿತ್ತು. ಅಷ್ಟೇ ಅಲ್ಲ ಪಡಿತರ ಚೀಟಿಯಿಂದಲೂ ಹೆಸರನ್ನು ತೆಗೆದು ಹಾಕಲಾಗಿತ್ತು. ಆದರೆ ಪಾಚೇನಿ ಸತೀಶನ್ ಕಾಂಗ್ರೆಸ್ ನಲ್ಲೇ ಮುಂದುವರಿಯಲು ನಿರ್ಧರಿಸಿದ್ದರು.

ಹೀಗೆ ಕೆಪಿಸಿಸಿ ಕಾರ್ಯದರ್ಶಿಯಾಗಿ, ಕಣ್ಣೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸೇರಿದಂತೆ ಹಲವಾರು ಹುದ್ದೆ ಪಡೆದಿದ್ದರು. 1996ರಲ್ಲಿ ತಾಲಿಪರಂಬ್ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2002 ಮತ್ತು 2006ರಲ್ಲಿ ಹಾಗೂ 2016ರಲ್ಲಿ ಕಣ್ಣೂರಿನಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಮೂಲಕ ಒಟ್ಟು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2009ರಲ್ಲಿ ಪಾಲಕ್ಕಾಡ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಜಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next