Advertisement

ಮೋದಿ ಟೀಕಿಸಲು ಹೋಗಿ ರಮ್ಯಾ ಯಡವಟ್ಟು

05:23 PM Sep 19, 2018 | |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ವಿದ್ಯಾರ್ಹತೆ ಬಗ್ಗೆ ಅಪಪ್ರಚಾರದ ಟ್ವೀಟೊಂದನ್ನು ಮಾಡಿರುವ ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ದಿವ್ಯ ಸ್ಪಂದನ (ರಮ್ಯಾ) ಹೊಸ ವಿವಾದಕ್ಕೆ ಸಿಲುಕಿದ್ದಾರೆ. 

Advertisement

1998ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿಯವರನ್ನು ಆಗ ಪತ್ರಕರ್ತರಾಗಿದ್ದ ಹಾಲಿ ಬಿಜೆಪಿ ಸಂಸದ ರಾಜೀವ್‌ ಶುಕ್ಲಾ ಅಂದೊಮ್ಮೆ ಸಂದ ರ್ಶಿಸಿದ್ದ ವಿಡಿಯೋದ ಆಯ್ದ ಭಾಗಗಳುಳ್ಳ ವಿಡಿಯೋ ಕ್ಲಿಪ್‌ ಅನ್ನು ಟ್ವಿಟರ್‌ನಲ್ಲಿ ಮಂಗಳವಾರ ಪ್ರಕ ಟಿಸಿದ್ದ ರಮ್ಯಾ, “ಇದರಲ್ಲಿ ಸಾಹೇಬರು (ಮೋದಿ) ತಾವು ಹೈಸ್ಕೂಲಿನವರೆಗೆ ಮಾತ್ರ ಓದಿರುವುದು ಎಂದು ಹೇಳಿಕೊಂಡಿದ್ದಾರೆ. ಆದರೆ, ಈಗ ಸಾಹೇಬರ ಬಳಿ ಪದವಿ ಪ್ರಮಾಣ ಪತ್ರಗಳಿವೆ’ ಎಂದು ಲೇವಡಿ ಮಾಡಿದ್ದರು. 

ಆದರೆ, ಅಸಲಿಗೆ ಮೋದಿಯವರು ತಾವು ಮೊದಲು ಹೈಸ್ಕೂಲುವರೆಗೆ ಓದಿದ್ದು, ಆನಂತರ ಬಿಎ, ಎಂಎ ಪದವಿಗಳನ್ನು ದೂರಶಿಕ್ಷಣದ ಮೂಲಕ ಪಡೆದಿರುವುದಾಗಿ ಹೇಳಿದ್ದರು. ರಮ್ಯಾ ಟೀಕೆಯ ಬೆನ್ನಲ್ಲೇ ವಿಡಿಯೋದ ಸತ್ಯಾಸತ್ಯತೆಯನ್ನು ಟ್ವೀಟಿಗರು ಹೊರಹಾಕಿ ರಮ್ಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗಾಗಿ, ಕ್ಷಮೆ ಯಾಚಿಸಿದ ರಮ್ಯಾ, ಆ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next