ನವದೆಹಲಿ: ಅರ್ಥಶಾಸ್ತ್ರ ವಿಭಾದಲ್ಲಿ ಈ ಬಾರಿಯ ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಕೇಂದ್ರ ಸರಕಾರದ ಆರ್ಥಿಕ ನೀತಿಗಳನ್ನು ಟೀಕಿಸಿದ ಬೆನ್ನಲೇ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ಇದೀಗ ರಾಹುಲ್ ಗಾಂಧಿ ಅಭಿಜಿತ್ ಪರ ವಕಾಲತ್ತು ವಹಿಸಿಕೊಂಡು ಪರೋಕ್ಷವಾಗಿ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.
ಕೇಂದ್ರ ಸರಕಾರದ ವಾಣಿಜ್ಯ ಹಾಗೂ ಕೈಗಾರಿಕ ಸಚಿವ ಪಿಯೂಷ್ ಗೋಯಲ್ ಅವರು ಬ್ಯಾನರ್ಜಿ ಕುರಿತು ಹೇಳಿಕೆ ನೀಡಿದ ಬೆನ್ನಲೆ ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದಾರೆ.
“ಇವರು ಹೃದಯದಿಂದ ಕುರುಡರಾಗಿದ್ದು, ಅವರಿಗೆ ವೃತ್ತಿ ಪರತೆ ಅರ್ಥದ ಕುರಿತು ಜ್ಞಾನವಿಲ್ಲ ಅಂತವರಿಗೆ ನೀವು ಎಷ್ಟು ತಿಳಿಸಿ ಹೇಳಿದರೂ ಅರ್ಥವಾಗೋದಿಲ್ಲ. ನಾನು ನಿಮ್ಮೊಂದಿಗೆ ಇದ್ದೇನೆ, ನಿಮ್ಮ ಸಾಧನೆಯನ್ನು ಕೋಟ್ಯಂತರ ಜನರು ಒಪ್ಪಿಕೊಂಡಿದ್ದಾರೆ ಹಾಗೂ ಶ್ಲಾಘಿಸಿದ್ದಾರೆ” ಎಂದು ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದು, ಯಾವುದೇ ಪಕ್ಷ ಹಾಗೂ ನಾಯಕರ ಹೆಸರನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖೀಸಿಲ್ಲ.
ಅಭಿಜಿತ್ ಬ್ಯಾನರ್ಜಿ ಅವರು ಕಳೆದ ಲೋಕಸಬಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿದ್ದ ಕಡಿಮೆ ಆದಾಯದ ನ್ಯಾಯ್ ಯೋಜನೆಯ ತಯಾರಿಗೆ ರೂಪುರೇಶೆ ಹಾಕಿಕೊಟ್ಟಿದ್ದರು ಮಾತ್ರವಲ್ಲದೇ ಈ ಯೋಜನೆಯನ್ನು ಕಾಂಗ್ರೆಸ್ ಪಕ್ಷದ ಉತ್ತಮ ಯೋಜನೆಗಳಲ್ಲಿ ಒಂದು ಎಂದು ಹೇಳಿದ್ದರು ಎನ್ನಲಾಗುತ್ತಿದೆ.
ಇದಕ್ಕೂ ಮೊದಲು ಪ್ರಿಯಾಂಕ ಗಾಂಧಿ ಅವರು ಅಭಿಜಿತ್ ಬ್ಯಾನರ್ಜಿ ಅವರನ್ನು ಸಮರ್ಥಿಸಿಕೊಂಡು ಮಾತನಾಡಿದ್ದರು.