Advertisement

ಪಂಜಾಬ್: ಕಾಂಗ್ರೆಸ್ ನಾಯಕನನ್ನು ಗುಂಡಿಕ್ಕಿ ಹತ್ಯೆಗೈದ ಮಹಿಳೆ

07:15 PM Feb 27, 2023 | Team Udayavani |

ಅಮೃತಸರ : ಕಾಂಗ್ರೆಸ್ ನಾಯಕ ಮೇಜರ್ ಸಿಂಗ್ ಧಲಿವಾಲ್ ಅವರನ್ನು ಮಹಿಳೆಯೊಬ್ಬರು ಸೋಮವಾರ ಇಲ್ಲಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಗುರ್ಮೀತ್ ಚೌಹಾಣ್ ಅವರು ಮಹಿಳೆ ಧಲಿವಾಲ್ ಅವರೊಂದಿಗೆ ಸಂಬಂಧ ಹೊಂದಿದ್ದು, ಕೆಲವು ವೈಯಕ್ತಿಕ ಕಾರಣಗಳಿಂದ ಅವರನ್ನು ಹತ್ಯೆಗೈದಿದ್ದಾಳೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತರ್ನ್ ತರಣ್ ಹೇಳಿದ್ದಾರೆ.

ಗಡಿಭಾಗದಲ್ಲಿರುವ ಸಾಂಗ್ವಾ ಗ್ರಾಮದಲ್ಲಿ ಕಾಂಗ್ರೆಸ್ ನಾಯಕನ ಮಾಲಕತ್ವದ ಅರಮನೆಯ ಬಳಿ ಮಹಿಳೆ ಹಲವು ಬಾರಿ ಗುಂಡು ಹಾರಿಸಿದ್ದಾಳೆ. ಎರಡು ಗುಂಡುಗಳು ತಗುಲಿ ಧಲಿವಾಲ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪತ್ತೆಗೆ ಪೊಲೀಸ್ ತಂಡಗಳನ್ನು ರವಾನಿಸಲಾಗಿದೆ. ಹಿಂದಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಧಲಿವಾಲ್ ಅವರು ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next