Advertisement

1984 Anti Sikh Roits; ದೆಹಲಿ ಹೈಕೋರ್ಟ್ ಮೊರೆ ಹೋದ ಜಗದೀಶ್ ಟೈಟ್ಲರ್

06:56 PM Sep 30, 2024 | Team Udayavani |

ಹೊಸದಿಲ್ಲಿ: 1984 ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಕೊಲೆ ಮತ್ತು ಇತರ ಅಪರಾಧಗಳಿಗಾಗಿ ತನ್ನ ವಿರುದ್ಧ ಆರೋಪಗಳನ್ನು ರೂಪಿಸಿದ ಇತ್ತೀಚಿನ ವಿಚಾರಣ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

Advertisement

ಟೈಟ್ಲರ್ ವಿರುದ್ಧದ ಆರೋಪಗಳಲ್ಲಿ ಕಾನೂನುಬಾಹಿರ ಸಭೆ, ಗಲಭೆ ಮತ್ತು ದ್ವೇಷವನ್ನು ಉತ್ತೇಜಿಸುವುದು ಸೇರಿವೆ. ಇತ್ತೀಚೆಗೆ ವಿಚಾರಣ ನ್ಯಾಯಾಲಯದ ಮುಂದೆ ಹಾಜರಾದ ಟೈಟ್ಲರ್, ಈ ಆರೋಪಗಳಿಗೆ ನಿರ್ದೋಷಿ ಎಂದು ಹೇಳಿಕೊಂಡಿದ್ದರು.ಇದೀಗ ಗಲಭೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಆರೋಪಗಳನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಕೊಲೆ ಮತ್ತು ಗಲಭೆಯನ್ನು ಉಂಟುಮಾಡುವ ಉದ್ದೇಶದ ಹೊರತಾಗಿ, ಟೈಟ್ಲರ್ ಕಾನೂನುಬಾಹಿರ ಸಭೆ, ಗಲಭೆ, ಆದೇಶಕ್ಕೆ ಅವಿಧೇಯತೆ, ಪೂಜಾ ಸ್ಥಳವನ್ನು ಅಪವಿತ್ರಗೊಳಿಸುವಿಕೆ, ಕುಮ್ಮಕ್ಕು, ಬೆಂಕಿ ಹಚ್ಚಿರುವುದು ಮತ್ತು ಕಳ್ಳತನದ ಆರೋಪಗಳನ್ನು ಎದುರಿಸುದ್ದಾರೆ.

1984ರ ನವೆಂಬರ್‌ನಲ್ಲಿ ಗುರುದ್ವಾರದ ಬಳಿ ನೆರೆದಿದ್ದ ಜನಸಮೂಹವನ್ನು ಪ್ರಚೋದಿಸಿದ್ದಕ್ಕಾಗಿ ಮಾಜಿ ಕೇಂದ್ರ ಸಚಿವ ಟೈಟ್ಲರ್ ವಿರುದ್ಧ ಕಳೆದ ವರ್ಷ ಮೇನಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next