Advertisement

ಮೋದಿ ಹೇಳಿದ ಅಚ್ಚೇದಿನ್ ಎಂದರೆ ಬೆಲೆ ಏರಿಕೆ: ಎನ್.ಎಸ್. ಭೋಸರಾಜು

02:24 PM Jun 14, 2021 | keerthan |

ವಿಜಯಪುರ: ಒಂದೂವರೆ ವರ್ಷದಲ್ಲಿ ದೇಶದ ಜನರು ಕೋವಿಡ್ ಸೋಂಕಿನಿಂದ ಸಾವು, ನೋವು, ಲಾಕ್ ಡೌನ್ ಕಾರಣದಿಂದ ಜನರು ತತ್ತರಿಸಿದ್ದಾರೆ. ಇಂಥ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆ ಮೂಲಕ ದೇಶದಲ್ಲಿ ಬೆಲೆ ಏರಿಕೆ ಆಗಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ವಿರೋಧಿಸಿ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಭೋಸರಾಜು ಟೀಕಿಸಿದರು.

Advertisement

ಸೋಮವಾರ ನಗರದ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಜ್ಞರು ಎರಡನೇ ಅಲೆಯ ಮುನ್ನೆಚ್ಚರಿಕೆ ನೀಡಿದರೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ನಿರ್ಲಕ್ಷ್ಯ ವಹಿಸಿತು. ದೀಪ ಹಚ್ವಿ, ಚಪ್ಪಾಳೆ ಬಡಿಯುವದರಿಂದ ಸೋಂಕು ಹೋಗಲಿದೆ ಎಂದು ಹೇಳಿದವರು ಇವರು ಟೀಕಾ ಪ್ರಹಾರ ನಡೆಸಿದರು.

ಸಂಸದೀಯ ಸಮಿತಿ, ತಜ್ಞರು ನೀಡಿದ ವರದಿಯನ್ನು ಕೇಂದ್ರ ನಿರ್ಲಕ್ಷ್ಯ ಕುಂಭಮೇಳ, ಚುನಾವಣೆ ನಡೆಸಿದರು. ಲಸಿಕೆ ಉತ್ಪಾದನೆಗೆ ಹೆಚ್ಚಿನ ಅವಕಾಶ ಇದ್ದರೂ ಹೆಚ್ಚಿನ ಮುತುವರ್ಜಿ ತೋರಲಿಲ್ಲ. ಪರಿಣಾಮ‌ ದೇಶದ ಜನರು ರೋಗದಿಂದ ತತ್ತರಿಸುವಂತೆ ಮಾಡಿದೆ. ರಾಜ್ಯದಲ್ಲಿ ಕೋವಿಡ್ ಅಗತ್ಯ ವೈದ್ಯಕೀಯ ಪರಿಕರ ಖರೀದಿಯಲ್ಲಿ ದೊಡ್ಡ ಮಟ್ಡದ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಪೆಟ್ರೋಲಿಯಂ ಹಾಗೂ ಅಡುಗೆ ಅನಿಲ ಬೆಲೆ ನಿಯಂತ್ರಣದಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ದೇಶಗಳಿಗಿಂತ ಭಾರತದಲ್ಲಿ ಇಂಧನ ಬೆಲೆ ಹೆಚ್ಚಾಗಿದೆ. ಅಧಿಕಾರಕ್ಕೆ ಬರುವ ಮುನ್ನ ಮೋದಿ ಅವರು ಹೇಳಿದ್ದ ಅಚ್ಚೆ ದಿನ್ ಎಂದರೆ ಇದೇ ಆಗಿದೆ. ಇದು ಸರ್ಕಾರದ ದುರ್ಬಲ ಆಡಳಿತದ ಪ್ರತೀಕ. ಇದರಿಂದಾಗಿ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಮನಕ್ಕೆ ಏರಿದೆ. ಪರಿಣಾಮ ಜನರು ಸಹಜ ಜೀವನ ನಡೆಸಲು ಪರದಾಟ ನಡೆಸಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಪ್ರತಿಭಟನೆ ಬಳಿಕ ಸರ್ಕಾರ ಉಚಿತ ಲಸಿಕೆ ನಿರ್ಧಾರ ಎನ್ನುತ್ತಿದೆ. ನರೇಗಾ ಯೋಜನೆ ಉದ್ಯೋಗ ದಿನಗಳ ಹೆಚ್ಚಳಕ್ಕೆ ಅಸಗ್ರಹಿಸಿದ್ದೇವೆ. ಯುಪಿಎ ಸರ್ಕಾರದ ಅವಧಿಯಲ್ಲಿ ಸಾಲ ಇಂದಿನ ದುಸ್ಥಿತಿಗೆ ಕಾರಣ ಎಂದು ದೇಶದ ಜನತೆಯ ದಾರಿ ತಪ್ಪಿಸುವ ಕೆಲಸ‌ ಮೋದಿ ಹಾಗೂ ಅವರ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆದಿದರು.

Advertisement

ಮೋದಿ ಸರ್ಕಾರದ ಅವಧಿಯ ಆರು ವರ್ಷದಲ್ಲಿ ಮಾಡಿದ ಸಾಧನೆ ಎಂದರೆ ಅಂಬಾನಿ, ಅದಾನಿ ಅವರಂಥ ಕಾರ್ಪೋರೆಟ್ ವ್ಯವಸ್ಥೆಯನ್ನು ಬಲವರ್ಧನೆ ಮಾಡಿದ್ದೇ ಮೋದಿ ಸರ್ಕಾರದ ಪ್ರಮುಖ ಸಾಧನೆ ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next