Advertisement

ಮಿತ್ರರ ನಡುವೆ ಕುಸಿದಿದೆ‌ ನಂಬಿಕೆ :ಸೀಟು ಹಂಚಿಕೆಯಲ್ಲೇ ಮುಗ್ಗರಿಸಿತಾ?

12:30 AM Mar 18, 2019 | |

ಬೆಂಗಳೂರು: ಬಿಜೆಪಿ ಮಣಿಸಲು ಲೋಕಸಭೆಯಲ್ಲಿ ಇಪ್ಪತ್ತು ಸ್ಥಾನದ ಟಾರ್ಗೆಟ್‌ ಇಟ್ಟುಕೊಂಡಿರುವ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಸೀಟು ಹಂಚಿಕೆ ಅಂತಿಮಗೊಂಡ ಬೆನ್ನಲ್ಲೇ, ಉಭಯ ಪಕ್ಷಗಳ ನಾಯಕರಲ್ಲಿ ಪರಸ್ಪರ ಅನುಮಾನಗಳು ಭುಗಿಲೆದ್ದಿವೆ. ಹೊಂದಾಣಿಕೆಯಲ್ಲಿ ಎಡವಿದೆವಾ ಎಂಬ ಜಿಜ್ಞಾಸೆ ಇಕ್ಕೆಡೆ ಕಾಡುತ್ತಿದೆ. ಸೀಟು ಹಂಚಿಕೆ ಸೂತ್ರ ಹೊರಬೀಳುತ್ತಿದ್ದಂತೆ ಚುನಾವಣೆಗೂ ಮುನ್ನವೇ ಐದು ಸೀಟು ತಮ್ಮ ಬುಟ್ಟಿಗೆ ಬೀಳುವುದು ಬಹುತೇಕ ಖಾತರಿ ಎಂದು ಬಿಜೆಪಿ ನಿಟ್ಟುಸಿರು ಬಿಟ್ಟಂತೆ ಕಾಣುತ್ತಿದೆ.

Advertisement

ಜೆಡಿಎಸ್‌ಗೆ ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ವಿಜಯಪುರ ಕ್ಷೇತ್ರಗಳು ಬಿಟ್ಟುಕೊಟ್ಟಿರುವುದು. ಸೀಟು ಹಂಚಿಕೆ ಕುರಿತು ಎರಡೂ ಪಕ್ಷಗಳಲ್ಲಿ ಉದ್ಭವಿಸಿರುವ ಬಿಕ್ಕಟ್ಟು, ಪರಸ್ಪರ ಅನುಮಾನಗಳು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶ ಇದ್ದದ್ದು ಕಾಂಗ್ರೆಸ್‌ಗೆ. ಆಕಾಂಕ್ಷಿಗಳು,ಅಭ್ಯರ್ಥಿಗಳು ಇದ್ದದ್ದೂ ಕಾಂಗ್ರೆಸ್‌ನಲ್ಲೇ. ಆದರೆ, ಆ ಮೂರೂ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಟ್ಟು ಬಿಜೆಪಿ ಗೆಲುವಿಗೆ ಅವಕಾಶ ಮಾಡಿಕೊಟ್ಟಂತಾಗಿದೆ.

ಇನ್ನು, ಬೆಂಗಳೂರು ಉತ್ತರ ಹಾಗೂ ತುಮಕೂರಿನಲ್ಲಿ ಎಚ್‌.ಡಿ.ದೇವೇಗೌಡರು ನಿಂತರಷ್ಟೇ ಲಾಭ. ಇಲ್ಲದಿದ್ದರೆ ಕಷ್ಟ ಎಂಬಂತಾಗಿದೆ. ಜತೆಗೆ, ತುಮಕೂರು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಸ್ವತಂತ್ರವಾಗಿ ಕಣಕ್ಕಿಳಿಯುವುದಾಗಿ ಮಾಜಿ
ಶಾಸಕ ಕೆ.ಎನ್‌.ರಾಜಣ್ಣ ಹೇಳಿರುವುದು. ಹಾಲಿ ಸಂಸದ ಮುದ್ದ ಹನುಮೇಗೌಡರಿಗೆ ಕ್ಷೇತ್ರ ತಪ್ಪಿಸಿದ್ದಕ್ಕೆ ಕಂಡುಬರುತ್ತಿ ರುವ ಆಕ್ರೋಶ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರ ಷರತ್ತು ಇವೆಲ್ಲವನ್ನೂ ಗಮನಿಸಿದರೆ ಈ ಎರಡೂ ಕ್ಷೇತ್ರಗಳು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್‌ನ ಎ.ಮಂಜು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಂಡ್ಯದಲ್ಲಿ ಸುಮಲತಾ ತೀರ್ಮಾನದ ನಂತರ ಸ್ಪಷ್ಟ ಚಿತ್ರಣ ಸಿಗಬಹುದು.

ಏನೇ ಆದರೂ ಎರಡೂ ಕಡೆ ಅಂತಿಮವಾಗಿ ಗೆಲ್ಲುವ ಭರವಸೆಯನ್ನು ಜೆಡಿಎಸ್‌ ಹೊಂದಿದೆ. ಆದರೆ, ಮುಂದಿನ ದಿನಗಳಲ್ಲಿ ಅಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತದೆಯೋ ಅದು ಚುನಾವಣೆ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆಯೋ ಕಾದು ನೋಡಬೇಕಾಗಿದೆ. ಶಿವಮೊಗ್ಗಕ್ಕೆ ಬಂದರೆ ಕಾಂಗ್ರೆಸ್‌ನಲ್ಲಿ ಸ್ಪರ್ಧೆ ಮಾಡುವವರೇ ಇರಲಿಲ್ಲ. ಹೀಗಾಗಿ, ಅಲ್ಲಿ ಮಧು ಬಂಗಾರಪ್ಪ ಅವರಿಗೆ ಪ್ರತಿರೋಧವಿಲ್ಲ. ಆದರೆ, ಕಾಂಗ್ರೆಸ್‌ ನಾಯಕರು ಮನಃಪೂರ್ವಕವಾಗಿ ಕೆಲಸಮಾಡಬೇಕು. ಡಿ.ಕೆ.ಶಿವಕುಮಾರ್‌ ಅವರಿಗೆ ಹೊಣೆಗಾರಿಕೆ ನೀಡಿರುವುದರಿಂದ ಸ್ವಲ್ಪ ಮಟ್ಟಿನ ಆಶಾಭಾವನೆ ಜೆಡಿಎಸ್‌ನಲ್ಲಿದೆ.

ಅಭ್ಯರ್ಥಿಗಳೇ ಸಿಗ್ತಿಲ್ಲ : ಈ ಮಧ್ಯೆ, ಕಾಂಗ್ರೆಸ್‌ಗೆ ಬೆಂಗಳೂರು ದಕ್ಷಿಣ, ಮಂಗಳೂರು, ದಾವಣಗೆರೆ ಕೊಪ್ಪಳ ಸೇರಿ ಕೆಲವು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆಯಿದೆ. ಚಿಕ್ಕಬಳ್ಳಾಪುರದ, ಕೋಲಾರ ದಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡಿದ್ದರೇನೇ ಕಾಂಗ್ರೆಸ್‌ ಗೆಲುವಿಗೆ ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯವಿದೆ. ಜತೆಗೆ ಕೋಲಾರದ ಸಂಸದರ ವಿರುದಟಛಿ ಶಾಸಕರು ತಂಡ ಕಟ್ಟಿಕೊಂಡು ಹೈಕಮಾಂಡ್‌ವರೆಗೂ ಹೋಗಿದ್ದಾರೆ.

Advertisement

ಮೈಸೂರು ಕ್ಷೇತ್ರ ದೇವೇಗೌಡರು ಬಯಸಿದ್ದರೂ ಸಿದ್ದರಾಮಯ್ಯ ಹಠ ಹಿಡಿದು ಪಡೆದುಕೊಂಡಿರುವುದರಿಂದ ಆ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರು ಕಾಂಗ್ರೆಸ್‌ ಪರ ಕೆಲಸ ಮಾಡುವರೇ ಎಂಬ ಅನುಮಾನವೂ ಇದೆ. ಹೀಗಾಗಿ, ಸೀಟು ಹಂಚಿಕೆಯಿಂದಲೇಕಾಂಗ್ರೆಸ್‌ ಕೆಲವು ಕ್ಷೇತ್ರ ಕಳೆದುಕೊಂಡಂತಾಗಿ ದೆ ಎಂದು ಮಾತುಗಳು ಕೇಳಿಬರುತ್ತಿವೆ. ಸೀಟು ಹಂಚಿಕೆ ನಂತರದ ರಾಜಕೀಯ ವಿದ್ಯಮಾನಗಳು ಅದಕ್ಕೆ ಇಂಬುಕೊಡುವಂತಿವೆ.

ಬಿಜೆಪಿಯಲ್ಲಿ ಆಶಾಭಾವನೆ
ಸೀಟು ಹಂಚಿಕೆ ನಂತರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಬೆಂಗಳೂರು ದಕ್ಷಿಣ,ವಿಜಯಪುರ, ಬೆಂಗಳೂರು ಸೆಂಟ್ರಲ್‌ನಲ್ಲಿ ಹಾಗೂ ದೇವೇಗೌಡರು ಸ್ಪರ್ಧಿಸದಿದ್ದರೆ ಬೆಂಗ ಳೂರು ಉತ್ತರ ಕ್ಷೇತ್ರದಲ್ಲಿ ನಮಗೆ ಅನುಕೂಲವಾಗಬಹುದು ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಕಾಂಗ್ರೆಸ್‌ ಅಭ್ಯರ್ಥಿಗಳ ಘೋಷಣೆ ನಂತರ ಮೈಸೂರು, ದಾವಣಗೆರೆ ಸೇರಿ ಕೆಲ ಕ್ಷೇತ್ರಗಳಲ್ಲಿ ಎಷ್ಟರ ಮಟ್ಟಿಗೆ ಪೈಪೋಟಿ ಎದುರಾಗಬಹುದು ಎಂಬ ಅಂದಾಜು ಸಿಗಲಿದೆ ಎಂದು ತಿಳಿಸುತ್ತಾರೆ.

ಸಮನ್ವಯ ಸಮಿತಿ ಅಧ್ಯಕ್ಷಈ ಮೈತ್ರಿ ನಡೆದಿರುವುದು ಪರಸ್ಪರ ನಂಬಿಕೆ ಮೇಲೆ. ಸಾ ರಾ. ಮಹೇಶ್‌ ಅಂಥವರು ನೀಡುವ ಹೇಳಿಕೆಗೆ‌ಲ್ಲ ಪ್ರತಿಕ್ರಿಯಿಸಲಾರೆ. ಆದರೆ ಇಂಥ ಮಾತುಗಳು ನಂಬಿಕೆಯನ್ನು ಹಾಳುಮಾಡಬಹುದು.

 ಸಿದ್ದರಾಮಯ್ಯ,ಸಮನ್ವಯ ಸಮಿತಿ ಅಧ್ಯಕ್ಷ

ಎಸ್‌.ಲಕ್ಷ್ಮೀ ನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next