Advertisement

“ಧೃತರಾಷ್ಟ್ರನ ಆಲಿಂಗನ ನೆನಪಿಸುವ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ’

11:39 PM Apr 09, 2019 | sudhir |

ಮಡಿಕೇರಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವ ಏಕೈಕ ಉದ್ದೇಶದಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಹೊಂದಾಣಿಕೆಯನ್ನು ಮಾಡಿಕೊಂಡಿದ್ದು, ಇದೊಂದು ಧೃತರಾಷ್ಟ್ರನ ಆಲಿಂಗನದಂತಾಗಿದೆ. ಸಾರ್ವಜನಿಕ ವಲಯದಲ್ಲಿ ಈ ಮೈತ್ರಿ ನಗೆಪಾಟಲಿಗೆ ಈಡಾಗಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಲೇವಡಿ ಮಾಡಿದ್ದಾರೆ.

Advertisement

ನಗರದ ಜಿಲ್ಲಾ ಬಿಜೆಪಿ ಕಚೆೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜಾತ್ಯತೀತ ಜನತಾದಳ ಎಲ್ಲೆಲ್ಲಿÉ ಗೆಲ್ಲುತ್ತದೆ ಎಂದು ಭಾವಿಸಿತ್ತೋ ಅಲ್ಲೆಲ್ಲ ಅದಕ್ಕೆ ಸೋಲು ಖಚಿತವಾಗಿದೆ ಎಂದು ಭವಿಷ್ಯ ನುಡಿದರು. ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅವರನ್ನು ಹೇಗಾದರೂ ಮಾಡಿ ಸೋಲಿಸುವ ಸಲುವಾಗಿ ಮೂವರು ಸುಮಲತಾರನ್ನು ನಿಲ್ಲಿಸಿರುವುದು ನಾಚಿಕೆ ಗೇಡಿನ ವಿಚಾರವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂಡ್ಯ ಕ್ಷೇತ್ರದಲ್ಲಿ ಸುಮಲತಾರಿಗೆ ಬಿಜೆಪಿ ಬೇಷರತ್‌ ಬೆಂಬಲ ನೀಡಿದ್ದು, ಅಲ್ಲಿ ನಿಖೀಲ್‌ ನೋಟಿಗೂ-ಸುಮಲತಾ ಓಟಿಗೂ ನಡುವೆ ಸ್ಪರ್ಧೆ ನಡೆಯುತ್ತಿದೆ ಎಂದು ಜನರೇ ಹೇಳಿಕೊಳ್ಳುತ್ತಿದ್ದು, ಸುಮಲತಾ ಗೆಲುವು ನಿಶ್ಚಿತವಾಗಿದೆ. ಹಾಸನದಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಬಿಜೆಪಿ 22ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಳೆೆದ ಐದು ವರ್ಷಗಳ ಅವಧಿಯ ಕಾರ್ಯವೈಖರಿಯ ಆಧಾರದಲ್ಲಿ ಕೊಡಗು-ಮೈಸೂರು ಕ್ಷೇತ್ರದಲ್ಲಿ ಪ್ರತಾಪ ಸಿಂಹ ಅವರು ಗೆಲುವನ್ನು ಸಾಧಿಸಲಿದ್ದಾರೆ, ರಾಜ್ಯದಲ್ಲಿ ಮೈತ್ರಿ ತನ್ನ ಅಸ್ತಿತ್ವವನ್ನೆ ಕಳೆೆದುಕೊಳ್ಳುವ ಸ್ಥಿತಿಯಲ್ಲಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಪಕ್ಷ ಇಂದು 6 ಕೋಟಿ ಜನರ ಅಭಿಪ್ರಾಯಗಳನ್ನು ಕ್ರೋಡಿಕರಿಸಿದ 75 ವಿಷಯಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಅದೇ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಭಯೋತ್ಪಾದಕತೆಯ ಸುಳಿಗೆ ಸಿಲುಕಿ ದಾರಿತಪ್ಪಿದವರನ್ನು ಬಿಡುಗಡೆ ಮಾಡಿ ಅವರಿಗೆ ಆರ್ಥಿಕ ನೆರವನ್ನು ನೀಡುವ ವಿಚಾರವನ್ನು ಪ್ರಸ್ತಾವಿಸಿದೆ ಎಂದು ಆರೋಪಿಸಿದರು.

Advertisement

ಕಳೆದ ಐದು ವರ್ಷಗಳ ಅವಧಿಯಲ್ಲಿ ಕೇಂದ್ರದ ಮೋದಿ ಸರಕಾರ ರಾಷ್ಟ್ರದ ಸಮಗ್ರತೆಗೆ ಪೂರಕವಾಗಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ಪ್ರಾಮಾಣಿಕವಾದ ಆಡಳಿತವನ್ನು ನೀಡಿದೆ. ಪ್ರಸ್ತುತ ರಾಷ್ಟ್ರದ ಜನತೆ ವ್ಯಕ್ತಿ ಮತ್ತು ಪಕ್ಷಕ್ಕೂ ಮಿಗಿಲಾಗಿ ರಾಷ್ಟ್ರ ಮೊದಲು ಎನ್ನುವುದನ್ನು ಅರ್ಥೈಸಿಕೊಂಡಿರುವುದಾಗಿ ತಿಳಿಸಿದರು.

ಮೋದಿ ಸರಕಾರದೇಶದ ಭದ್ರತೆಗೆ ಪ್ರಥಮ ಪ್ರಾಶಸ್ತ$Âವನ್ನು ನೀಡುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವುದಲ್ಲದೆ, ತನ್ನ ಅಧಿಕಾರದ ಅವಧಿಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ತಕ್ಕ ಭೂಮಿಕೆಯನ್ನು ಸಿದ್ಧಪಡಿಸಿದೆ. ಮಂದಿರ ನಿರ್ಮಾಣ ವಿರೋಧಿಸುತ್ತಿದ್ದ ಸಿ.ಎಂ.ಇಬ್ರಾಹಿಂ ಅಂತಹವರೆ ರಾಮಮಂದಿರ ನಿರ್ಮಾಣವಾಗುವುದಾದರೆ ನಾವು ಕರಸೇವೆಗೆ ಬರುತ್ತೇವೆ ಎನ್ನುವ ಮಾತ ನಾಡುವ ಮನಸ್ಥಿತಿಗೆ ಬಂದಿದ್ದಾರೆ. ಇದು ಕೇಂದ್ರ ಸರಕಾರದ ಹೆಗ್ಗಳಿಕೆ ಎಂದು ಶ್ರೀನಿವಾಸಪೂಜಾರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ, ನಗರಾಧ್ಯಕ್ಷ ಮಹೇಶ್‌ ಜೈನಿ, ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ, ಧನಂಜಯ್‌, ಉಮೇಶ್‌ ಸುಬ್ರಮಣಿ, ಅರುಣ್‌ ಕುಮಾರ್‌, ಸಜಿಲ್‌ ಕೃಷ್ಣನ್‌, ಜಗದೀಶ್‌ ಉಪಸ್ಥಿತರಿದ್ದ‌ರು.

ಜನ‌ರ ಬಯಕೆ
ರಾಷ್ಟ್ರದ ಜನತೆ ವಿಶ್ವಾ ಸದಿಂದ ನರೇಂದ್ರ ಮೋದಿ ಅವರನ್ನು ಕಾಣುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಪಕ್ಷಕ್ಕಿ ಂತಲೂ ಮೋದಿಯವರ ಹೆಸರು ಮುನ್ನಡೆಗೆ ಬಂದಿರುವುದಾಗಿ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲಿಯೂ, ಬಿಜೆಪಿ ಅಭ್ಯರ್ಥಿಗಳ ಬದಲಾಗಿ ಮೋದಿ ಹೆಸರು ಮುಂಚೂಣಿಯಲ್ಲಿದ್ದು, ಅವರ ಹೆಸರಿನಲ್ಲಿ ಮತಯಾಚನೆ ಮಾಡುತ್ತಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಐದು ವರ್ಷಗಳ ಆಡಳಿತಾವಧಿಯಲ್ಲಿ ಕಳಂಕ ರಹಿತ ಆಡಳಿತ, ರಾಷ್ಟ್ರೀಯ ಚಿಂತನೆಗೆ ಒತ್ತು ನೀಡುತ್ತಿರುವ ಅವ ರನ್ನು ಜನತೆ ಬಯಸಿರುವುದರಿಂದ ಮುಂಚೂಣಿಗೆೆ ಬಂದಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next