Advertisement

ಶಿವಸೇನೆ-ಎನ್‌ಸಿಪಿ ನಡೆಯಿಂದ ಕಾಂಗ್ರೆಸ್‌ ಅಸಮಾಧಾನ

08:21 PM Mar 14, 2021 | Team Udayavani |

ಮುಂಬಯಿ : ಮಹಾರಾಷ್ಟ್ರ ವಿಕಾಸ್‌ ಅಘಾಡಿಯ ಎಲ್ಲ ವಿಷಯ ಗಳಿಂದಲೂ ಹೊರಗುಳಿದಿರುವ ಕಾಂಗ್ರೆಸ್‌, ಶಿವಸೇನೆ ಮತ್ತು ಎನ್‌ಸಿಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ವಿಧಾನ ಸಭೆಯ ನೂತನ ಸ್ಪೀಕರ್‌ ಸ್ಥಾನಕ್ಕೆ ಚುನಾವಣೆ ನಡೆಸಲು ವಿಳಂಬ ಮತ್ತು ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಪ್ರಕರಣ ವನ್ನು ನಿರ್ವಹಿಸಿದ ರೀತಿಯಿಂದ ಶಿವಸೇನೆ ಮತ್ತು ಎನ್‌ಸಿಪಿಯ ವಿರುದ್ಧ ಕಾಂಗ್ರೆಸ್‌ ಅಸಮಾ ಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ. ಬಜೆಟ್‌ ಅಧಿವೇಶನದಲ್ಲಿ ಸ್ಪೀಕರ್‌ ಹು¨ªೆಗೆ ಕಾಂಗ್ರೆಸ್‌ ಒತ್ತಾಯಿಸುತ್ತಿದ್ದು, ಕೆಲವು ಎಂವಿಎ ಶಾಸಕರು ಗೈರಾಗಿದ್ದ ಕಾರಣ ಇತರ ಇಬ್ಬರು ಪಾಲು ದಾರರು ಅದನ್ನು ಬಯಸ ಲಿಲ್ಲ ಎನ್ನಲಾ ಗುತ್ತಿದೆ. ಇನ್ನೊಂದೆಡೆ ಕೈಗಾರಿ ಕೋದ್ಯಮಿ ಮುಖೇಶ್‌ ಅಂಬಾನಿಯ ದಕ್ಷಿಣ ಮುಂಬಯಿ ನಿವಾಸದ ಹೊರಗೆ ಸಿಕ್ಕಿಬಿದ್ದ ಜೆಲೆಟಿನ್‌ ತುಂಬಿದ ವಾಹನ ಪ್ರಕರಣ ಮತ್ತು ವಾಹನ ಮಾಲಕನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಮತ್ತು ಎನ್‌ಸಿಪಿಯ ನಡೆಯಿದ ಕಾಂಗ್ರೆಸ್‌ ಅಸಮಾಧಾನ ವ್ಯಕ್ತಪಡಿಸಿದೆ.

Advertisement

ನಾನಾ ಪಟೋಲೆ ಅವರನ್ನು ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ ಬಳಿಕ ಅವರು ವಿಧಾನ ಸಭೆಯ ಸ್ಪೀಕರ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಜೆಟ್‌ ಅಧಿವೇಶನದಲ್ಲಿ ನೂತನ ಸ್ಪೀಕರ್‌ ಆಯ್ಕೆ ಚುನಾವಣೆಗೆ ಕಾಂಗ್ರೆಸ್‌ ಒತ್ತಾಯಿಸಿತು. ಆದರೆ ಕೋವಿಡ್‌ ಸೋಂಕಿನಿಂದಾಗಿ ಹಲವಾರು ಎಂವಿಎ ಶಾಸಕರು ಅಧಿವೇಶನಕ್ಕೆ ಗೈರು ಹಾಜ ರಾಗಿ ¨ªಾರೆ. ಇಂತಹ ಸಂದರ್ಭದಲ್ಲಿ ಅಪಾಯ ವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಎನ್‌ಸಿಪಿ ಮತ್ತು ಶಿವಸೇನೆ ಕಾಂಗ್ರೆಸ್‌ ಬೇಡಿಕೆಗೆ ಸ್ಪಂದಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿಲ್ಲ ಅಧಿವೇಶನದಲ್ಲಿ ಕೋವಿಡ್‌ ಪಾಸಿಟಿವ್‌ ಆಗಿದ್ದ 25 ಶಾಸಕರು ಮತ್ತು ಮಂತ್ರಿಗಳಲ್ಲಿ 15 ಮಂದಿ ಆಡಳಿತ ಪಕ್ಷದವರಾಗಿದ್ದರು. ಇದು ಚುನಾವಣೆಯ ಸಮಯದಲ್ಲಿ ಮತಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದಿತ್ತು, ಆದರೆ ಅದು ಚುನಾವಣೆ ನಡೆಸದಿರಲು ಕಾರಣವಲ್ಲ. ಏಕೆಂದರೆ ವಿಪಕ್ಷಗಳ ಮತಗಳೂ ಕಡಿಮೆಯಾಗಿತ್ತು. ಇದರಿಂದ ಸರಕಾರಕ್ಕೆ ಮುಜುಗರದ ಪ್ರಶ್ನೆಯೇ ಇರಲಿಲ್ಲ. ವಾಸ್ತವವಾಗಿ ಎನ್‌ಸಿಪಿ ಸ್ಪೀಕರ್‌ ಹುದ್ದೆಯನ್ನು ಪಕ್ಷದ ಡೆಪ್ಯೂಟಿ ಸ್ಪೀಕರ್‌ ನರ್ಹಾರಿ ಜಿರ್ವಾಲ್‌ ಅವರು ನಡೆಸಬೇಕೆಂದು ಬಯಸುತ್ತಿದೆ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಹೇಳಿದ್ದಾರೆ. ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ರಾಜ್ಯ ಬಜೆಟ್‌ ಅಧಿವೇಶನದ ಅಂತ್ಯದ ಬಳಿಕ ಕಾಂಗ್ರೆಸ್‌ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಬಜೆಟ್‌ನಲ್ಲಿ ಕೆಲವು ನಿರ್ಧಾರ ಕೈಬಿಡಲಾಗಿದೆ: ಕಾಂಗ್ರೆಸ್‌ ತಿಂಗಳಿಗೆ 100 ಯುನಿಟ್‌ಗಳವರೆಗೆ ವಿದ್ಯುತ್‌ ಬಳಸುವ ಸಣ್ಣ ಗ್ರಾಹಕರಿಗೆ ವಿದ್ಯುತ್‌ ಬಿಲ್‌ ಮನ್ನಾ ಮಾಡಬೇಕೆಂದು ಮತ್ತು ನಿಯಮಿತವಾಗಿ ಸಾಲ ಮರುಪಾವತಿ ಮಾಡುತ್ತಿರುವ ರೈತರಿಗೆ 50,000 ಪ್ರೋತ್ಸಾಹ ಧನ ನೀಡುವಂತೆ ಪಕ್ಷ ಒತ್ತಾಯಿಸಿದೆ. ಬಜೆಟ್‌ನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನಾವು ನಿರೀಕ್ಷಿಸಿದ್ದೇವೆ. ಆದರೆ ಅವುಗಳನ್ನು ರಾಜ್ಯ ಬಜೆಟ್‌ನಲ್ಲಿ ಸೇರಿಸಲಾಗಿಲ್ಲ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದ್ದಾರೆ.

ಇನ್ನೊಂದೆಡೆ ದಾದ್ರಾ ಮತ್ತು ನಗರ ಹವೇಲಿ ಸಂಸದ ಮೋಹನ್‌ ದೇಲ್ಕರ್‌ ಅವರ ಆತ್ಮಹತ್ಯೆ ಪ್ರಕರಣವನ್ನು ನಿಭಾಯಿಸಿದ ಬಗ್ಗೆ ಕಾಂಗ್ರೆಸ್‌ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೇಳಿದಾಗ ಇಂಧನ ಸಚಿವ ಮತ್ತು ಹಿರಿಯ ಕಾಂಗ್ರೆಸ್‌ ಮುಖಂಡ ನಿತಿನ್‌ ರಾವುತ್‌ ಅವರು, ನಾನು ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ. ನಮ್ಮ ರಾಜ್ಯ ಘಟಕದ ಮುಖ್ಯಸ್ಥ ಪಟೋಲೆ ಅಥವಾ ನಮ್ಮ ಶಾಸಕಾಂಗ ಪಕ್ಷದ ನಾಯಕ ಬಾಲಾಸಾಹೇಬ್‌ ಥೋರಟ್‌ ಇದರ ಕುರಿತು ಮಾತನಾಡಲಿ¨ªಾರೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next