Advertisement
ನಿಯಮಾವಳಿಗಳ ಉಲ್ಲಂಘನೆ ಆರೋಪದ ಮೇಲೆ ಈ ಎಲ್ಲಾ ಖಾತೆಗಳನ್ನು ಬಂದ್ ಮಾಡಲಾಗಿದೆ ಎಂದು ಟ್ವಿಟರ್ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ಒತ್ತಡದಿಂದಾಗಿ ಟ್ವಿಟರ್ ಈ ರೀತಿ ವರ್ತಿಸುತ್ತಿದೆ ಎಂದು ಆರೋಪಿಸಿದೆ.
Related Articles
ಐಎನ್‌ಸಿ ಇಂಡಿಯಾ(ಕಾಂಗ್ರೆಸ್‌ನ ಪ್ರಮುಖ ಅಕೌಂಟ್), ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದಾಮನ್ ಆ್ಯಂಡ್ ದಿಯು, ತಮಿಳುನಾಡು ಕಾಂಗ್ರೆಸ್ ಸಮಿತಿಗಳ ಖಾತೆ ಬಂದ್ ಆಗಿವೆ. ಇನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ರಣದೀಪ್ ಸುರ್ಜೆವಾಲಾ, ಅಜಯ್ ಮಾಕೇನ್, ಕೆ.ಸಿ. ವೇಣುಗೋಪಾಲ್, ಮಣಿಕ್ಕನ್ ಟ್ಯಾಗೋರ್, ಸುಶ್ಮಿತಾ ದೇವ್, ಹರೀಶ್ ಸಿಂಗ್ ರಾವತ್, ಚೆಲ್ಲ ಕುಮಾರ್ ಸೇರಿದಂತೆ 21 ನಾಯಕರ ಖಾತೆಗಳೂ ಬ್ಲ್ಯಾಕ್ ಆಗಿವೆ. ಹಾಗೆಯೇ ಮಹಾರಾಷ್ಟ್ರ ಕಾಂಗ್ರೆಸ್‌ನ 500 ನಾಯಕರ ಖಾತೆಗಳನ್ನು ಬಂದ್ ಮಾಡಲಾಗಿದೆ.
Advertisement
ಎಲ್ಲರ ಪ್ರೊಫೈಲ್‌ನಲ್ಲೂ ರಾಹುಲ್!ರಾಹುಲ್ ಖಾತೆ ಬ್ಲಾಕ್ ಮಾಡಿರುವುದನ್ನು ಖಂಡಿಸಿ, ಪ್ರತಿಭಟನಾರ್ಥವಾಗಿ ದೇಶಾದ್ಯಂತ ಕಾಂಗ್ರೆಸ್‌ನ ಬಹುತೇಕ ಕಾರ್ಯಕರ್ತರು ಹಾಗೂ ನಾಯಕರು ತಮ್ಮ ತಮ್ಮ ಖಾತೆಗಳ ಪ್ರೊಫೈಲ್‌ನಲ್ಲಿ ರಾಹುಲ್ ಫೋಟೋಗಳನ್ನು ಹಾಕಿ ಕೊಂಡಿದ್ದಾರೆ. ಗುರುವಾರ ಪ್ರಿಯಾಂಕಾ ವಾದ್ರಾ ಅವರ ಖಾತೆಯಲ್ಲೂ ರಾಹುಲ್ ಅವರ ಪ್ರೊಫೈಲ್ ಫೋಟೋ ಪ್ರತ್ಯಕ್ಷವಾಗಿದೆ.