Advertisement

ಕಾಂಗ್ರೆಸ್‌ನದ್ದು ನಕರಾತ್ಮಕ ಚಿಂತನೆಗಳ ಚುನಾವಣೆ

12:33 PM Apr 02, 2018 | Team Udayavani |

ಬೆಂಗಳೂರು: ಸಾಮಾನ್ಯವಾಗಿ ಎಲ್ಲ ರಾಜಕೀಯ ಪಕ್ಷಗಳು ಸಕಾರಾತ್ಮಕ ವಿಷಯಾಧಾರಿತವಾಗಿ ಚುನಾವಣೆ ಎದುರಿಸುತ್ತವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಪಕ್ಷ ನಕರಾತ್ಮಕ ಚಿಂತನೆಗಳೊಂದಿಗೆ ಚುನಾವಣೆಗೆ ಮುಂದಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಆರೋಪಿಸಿದರು.

Advertisement

ಭಾನುವಾರ ಮಲ್ಲೇಶ್ವರದ 8ನೇ ಮುಖ್ಯರಸ್ತೆಯಲ್ಲಿರುವ ಜಿ.ಎಂ.ರಿಜಾಯ್ಸನಲ್ಲಿ  ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಸೇರಿದಂತೆ ಹಲವು ಲೋಪಗಳ ದಾಖಲೆಯನ್ನು ಬಣ್ಣ ಬಣ್ಣದ ಜಾರ್ಚ್‌ಶೀಟ್‌ ಮೂಲಕ ಹೊರ ತಂದಿದ್ದೇವೆ. ಚುನಾವಣೆ ಹೋಗುವಾಗ ಸಕಾರತ್ಮಕ ವಿಷಯ ಹಾಗೂ ಚಿಂತನೆಗಳೊಂದಿಗೆ ಹೋಗಬೇಕು. ಆದರೆ, ರಾಜ್ಯ  ಕಾಂಗ್ರೆಸ್‌ ಪಕ್ಷ ನಕಾರತ್ಮಕ  ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸಲು ಮುಂದಾಗಿದೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಡೀ ಕಾಂಗ್ರೆಸ್‌ ಪಕ್ಷವೇ ಹತಾಶೆಗೆ ಒಳಗಾಗಿದೆ. ಬಿಜೆಪಿ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಟೀಕಿಸುವುದನ್ನು ಬಿಟ್ಟು ಬೇರೇನೂ ವಿಷಯ ಅವರಲ್ಲಿ ಇಲ್ಲ. ಹೇಳಿಕೊಳ್ಳುವುದಕ್ಕೂ ನಾಲ್ಕೈದು ಗಮನಾರ್ಹ ಸಾಧನೆಯನ್ನು ಮಾಡಿಲ್ಲ ಎಂದು ಟೀಕಿಸಿದರು.

ಇದಕ್ಕಾಗಿ ಸಿದ್ದರಾಮಯ್ಯ ಅವರನ್ನು ಧೂಷಣೆ ಮಾಡುವುದಿಲ್ಲ. ಕಾರಣ ಅವರ “ಬಾಸ್‌’ ರಾಹುಲ್‌ ಗಾಂಧಿಯಿಂದ  ತರಬೇತಿ ಪಡೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ, ನೀವು ರಾಹುಲ್‌ ಗಾಂಧಿಯನ್ನು ಅನುಕರಣೆ ಮಾಡುತ್ತಿದ್ದರೆ ನೀವು ಸರಿಯಾದ ಪಥದಲ್ಲಿ ಹೋಗುವುತ್ತಿಲ್ಲ. ಯಾಕೆಂದರೆ, ಈ ಹಿಂದೆ ರಾಹುಲ್‌ ಗಾಂಧಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಈಗ ಅಧ್ಯಕ್ಷರಾಗಿದ್ದಾರೆ. ರಾಹುಲ್‌ಗಾಂಧಿ ಹೋಗಿ ಬಿಜೆಪಿಯನ್ನು ಟೀಕಿಸಿದಲ್ಲೆಲ್ಲ ಕಾಂಗ್ರೆಸ್‌ ಸೋತಿದೆ. ಏ.1ರಂದು ಏಪ್ರಿಲ್‌ ಫ‌ೂಲ್‌ ಮಾಡುತ್ತಿದ್ದಾರಂತೆ ಅದಕ್ಕೂ ಶುಭವಾಗಲಿ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಸರ್ಕಾರದ ತಪ್ಪುಗಳನ್ನು ಚಾರ್ಜ್‌ಸೀಟ್‌ ಮೂಲಕ ಹೊರ ತಂದಿದ್ದೇವೆ. ಕರ್ನಾಟಕ, ಪಂಜಾಬ್‌ ಹೊರತುಪಡಿಸಿ ದೇಶದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಈಶಾನ್ಯ ಭಾರತ ಸೇರಿ ಎಲ್ಲಿಯೂ ಕಾಂಗ್ರೆಸ್‌ ಇಲ್ಲ. ಕರ್ನಾಟಕದ ಮತದಾರರು ಇದನ್ನು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್‌ ತನ್ನ ತಪ್ಪು ಮತ್ತು ದುರಾಡಳಿತದಿಂದ ದೇಶದ ಜನರ ವಿಶ್ವಾಸವನ್ನೇ ಕಳೆದುಕೊಂಡಿದೆ. ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ಇದೆ ಎಂದರು.

Advertisement

ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್‌ ಮೊದಲಾದವರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಸೋತರೆ ಬಿಜೆಪಿಗೆ ತೃಪ್ತಿ: ಚಾಮುಂಡೇಶ್ವರಿ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವರುಣ ಕ್ಷೇತ್ರದಿಂದ ಅವರ ಮಗ ಗೆದ್ದು ಬರಲಿ ನೋಡೋಣ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

ನಾನು ಅಲ್ಲೇ ಇದ್ದು, ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್‌ ಶಾ ಅವರೊಂದಿಗೆ ಪ್ರವಾಸ ಮಾಡಿದ್ದೇನೆ. ಯಾವ ಕಾರಣಕ್ಕೂ ಈ ರಾಜ್ಯ ಮುಖ್ಯಮಂತ್ರಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಮತ್ತು ಅವರ ಮಗನನ್ನು ಗೆಲ್ಲಿಸಲು ಸಾಧ್ಯವಿಲ್ಲ. ಬಿಜೆಪಿ ತೃಪ್ತಿಯಾಗುವುದು 150 ಸೀಟು ಗೆದ್ದಾಗ ಅಲ್ಲ. ಸಿದ್ದರಾಮಯ್ಯ ಮತ್ತು ಅವರ ಮಗನೂ ಸೋಲಬೇಕು. ಆ ರೀತಿಯ ಸವಾಲನ್ನು ಸ್ವೀಕಾರ ಮಾಡಿ ರಾಜ್ಯದ ಉದ್ಧಗಲ ಪ್ರಮಾಸ ಮಾಡುತ್ತಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next