ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಇದೇ ಮೊದಲ ಬಾರಿಗೆ ಬಿಹಾರದ ಮಿತ್ರಪಕ್ಷವಾಗಿರುವ ಕಾಂಗ್ರೆಸ್ ವಿರುದ್ಧ ಅತ್ಯಂತ ತೀಕ್ಷ್ಣ ಮಾತುಗಳಿಂದ ನೇರ ವಾಗ್ಧಾಳಿ ನಡೆಸಿದ್ದು ಹೀಗೆ. ಭಾನುವಾರ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ನಿತೀಶ್, ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Advertisement
“ಎಲ್ಲ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸಂಘ-ಮುಕ್ತ ಭಾರತದ ನಿರ್ಮಾಣ ಸಾಧ್ಯವೇ ಇಲ್ಲ. ವಿಪಕ್ಷಗಳ ಕಡೆಯಲ್ಲಿ ಈಗ ಮೂಡಿರುವ ಎಲ್ಲ ಅವ್ಯವಸ್ಥೆಗೂ ಕಾಂಗ್ರೆಸ್ ಮಾತ್ರ ಕಾರಣ. ನಾವು ಉತ್ತರ ಪ್ರದೇಶದಲ್ಲಿ ಮೈತ್ರಿಯಿಂದ ವಂಚಿತರಾಗಲು, ಅಸ್ಸಾಂನಲ್ಲಿ ಮೈತ್ರಿ ಮಾಡಿಕೊಳ್ಳದೇ ಇರಲು ಕಾಂಗ್ರೆಸ್ ಕಾರಣ. ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲೂ ಕಾಂಗ್ರೆಸ್ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ,’ ಎನ್ನುವ ಮೂಲಕ ನಿತೀಶ್ ಕಾಂಗ್ರೆಸ್ ಬಗೆಗಿದ್ದ ತಮ್ಮೆಲ್ಲ ಆಕ್ರೋಶಗಳನ್ನೂ ಹೊರಹಾಕಿದ್ದಾರೆ.