Advertisement

ಬಿಜೆಪಿ ಸೋಲಿಗೆ ಕಾಂಗ್ರೆಸ್‌ ಕಾರಣ

12:58 PM May 17, 2018 | |

ಬೇಲೂರು: ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಚ್‌.ಕೆ.ಸುರೇಶ್‌ ಸೋಲು ಅನುಭವಿಸಲು ಕಾಂಗ್ರೆಸ್‌ ಪಕ್ಷದ ಹಿನ್ನಡೆಯೇ ಕಾರಣ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ರೇಣುಕುಮಾರ್‌ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಬಿಜೆಪಿ 44 ಸಾವಿರ ಮತ ಪಡೆದು ಎರಡನೇ ಸ್ಥಾನದಲ್ಲಿದೆ ಆದರೆ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ನಿರ್ವಹಿಸಿದ್ದಾರೆ. ಆದರೆ ಬಿಜೆಪಿ ಗೆಲ್ಲಬಾರದು ಎಂಬ ಭಾವನೆ ಇದ್ದ ಕೆಲ ಸಮುದಾಯಗಳು ಕಾಂಗ್ರೆಸ್‌ ಪಕ್ಷಕ್ಕೆ ಮತಹಾಕದೆ ಜೆಡಿಎಸ್‌ಗೆ ಮತ ಹಾಕಿದ್ದರಿಂದ ಬಿಜೆಪಿ ಸೋಲಲು ಕಾರಣ ಎಂದರು. 

ಪ್ರತಿ ಚುನಾವಣೆಯಲ್ಲಿ ಬಿಜೆಪಿಗೆ ತಮ್ಮದೇ ಆದ ಸಾಂಪ್ರದಾಯಿಕ ಮತಗಳಿದ್ದು ಚುನಾವಣೆ ಎದುರಿಸಲು ಕಾಲವಕಾಶ ಕಡಿಮೆ ಇದ್ದುದಲ್ಲದೆ ಅಭ್ಯರ್ಥಿ ಆಯ್ಕೆಯಲ್ಲಿ ಪಕ್ಷ ತಡ ಮಾಡಿದ್ದೆ ಸೋಲಿಗೆ ಇನ್ನೊಂದು ಕಾರಣ ಎಂದು ಹೇಳಿದರು. 

ಬಿಜೆಪಿ ಪರಾಜಿತ ಅಭ್ಯರ್ಥಿ ಎಚ್‌. ಕೆ.ಸುರೇಶ್‌ ಮಾತನಾಡಿ, ಬೇಲೂರು ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಮತದಾರರು ತೀರ್ಪಿಗೆ ಬದ್ಧನಾಗಿದ್ದು ಚುನಾವಣೆಯಲ್ಲಿ 2ನೇ ಸ್ಥಾನ ಪಡೆದಿರುವುದು ಮತದಾರರು ಪಕ್ಷದ ಪರವಾಗಿದ್ದಾರೆ ಎಂಬುದು ತಿಳಿಯುತ್ತದೆ ಎಂದರು. 

ಪಕ್ಷ ಸೋತಿರುವ ಬಗ್ಗೆ ಕಾರ್ಯಕರ್ತರು ಮುಖಂಡರ ಜೊತೆ ಚರ್ಚಿಸಿ ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ತಿಳಿಸಿದರಲ್ಲದೆ, 2019ರಲ್ಲಿ ನಡೆಯುವ ಲೋಕಾಸಭೆ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪಕ್ಷ ಅವಕಾಶ ಕಲ್ಪಿಸಿದರೆ ಸ್ಪರ್ಧಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರಲ್ಲದೆ ಮುಂದೆ ನಡೆಯುವ ವಿಧಾನ ಸಭಾ ಚುನಾವಣೆಯಲ್ಲೂ ನಾನೆ ಬೇಲೂರು ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದರು.

Advertisement

ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್‌ ಮಾತನಾಡಿ, ಬೇಲೂರಿನಲ್ಲಿ ಬಿಜೆಪಿ ಗೆಲ್ಲಲೆಬೇಕಿತ್ತು ಪಕ್ಷ ಟಿಕೆಟ್‌ ನೀಡುವಲ್ಲಿ
ಸ್ಪಲ್ಪತಡ ಮಾಡಿತ್ತು ಅಲ್ಲದೆ ಕಳೆದ ಹತ್ತು ವರ್ಷಗಳಿಂದ ಪಕ್ಷವನ್ನು ಸಂಘಟನೆ ಮಾಡಿದ್ದು ನಾನು ಸಹ ಟಿಕೆಟ್‌ ಆಕಾಂಕ್ಷಿಯಾಗಿದ್ದೆ, ಆದರೆ ಪಕ್ಷ ಎಚ್‌.ಕೆ.ಸುರೇಶ್‌ ಅವರಿಗೆ ಟಿಕೆಟ್‌ ನೀಡಿತ್ತು ಅದರಂತೆ ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿದ್ದು ಪಕ್ಷ ಎರಡನೆ ಸಾನಕ್ಕೆ ಬಂದಿದೆ ಎಂದರು. 

ಹಳೇಬೀಡಿನಲ್ಲಿ ನಡೆದ ಚುನಾವಣೆ ಬಹಿರಂಗ ಸಭೆಯಲ್ಲಿ ಬಿಜೆಪಿ ಸರ್ಕಾರ ಬಂದರೆ ತಾಲೂಕು ಅಧ್ಯಕ್ಷ ಪ್ರಕಾಶ್‌
ಅವರಿಗೆ ಹುದ್ದೆ ನೀಡುವುದಾಗಿ ಬಿ.ಎಸ್‌.ಯಡಿಯೂರಪ್ಪ ಪ್ರಚಾರ ಭಾಷಣದಲ್ಲಿ ತಿಳಿಸಿದ್ದರು ಎಂಬ ಪ್ರಶ್ನೆಗೆ
ಉತ್ತರಿಸಿದ ಅವರು ಇನ್ನು ಯಡಿಯೂರಪ್ಪರನ್ನು ಭೇಟಿ ಮಾಡಿಲ್ಲ ಬಿ.ಎಸ್‌.ಯಡಿಯೂರಪ್ಪ ಹೇಳಿದ ಮಾತಿಗೆ
ತಪ್ಪಲಾರರು ಎಂದು ಹೇಳಿದರು. ಮುಖಂಡರಾದ ಗೋವಿಂದಪ್ಪ, ಜುಂಜಯ್ಯ, ಬಿ.ಕೆ.ಚಂದ್ರಕಲಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next