Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಿಎಫ್‌ಐ ಬೆಳೆಸುವುದರ ಹಿಂದೆ ಮುಸ್ಲಿಂ ಮತಗಳ ಮೇಲಿನ ಮಮಕಾರವೂ ಇದೆ. ಒಂದೆಡೆ ಮುಸ್ಲಿಮರನ್ನು ಓಲೈಸುತ್ತಾ, ಇನ್ನೊಂದೆಡೆ ಒಬಿಸಿಗಳನ್ನು ಅಹಿಂದ ಹೆಸರಿನಲ್ಲಿ ಉಸಿರುಗಟ್ಟಿಸಿ ಸಾಯಿಸಲಾಗುತ್ತಿದೆ. ಇದು ಕಾಂಗ್ರೆಸ್ ದ್ವಿಮುಖ ನೀತಿ. ಇದು ಸರಿಯಾದುದ್ದಲ್ಲ ಎಂದರು.
Related Articles
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದರೆ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರುತ್ತಾ? ಇಂತಹ ಭ್ರಮೆಯಿಂದ ಕಾಂಗ್ರೆಸ್ ಹೊರ ಬರಬೇಕು. ಅದೆಲ್ಲ ಕನಸಿನ ಮಾತು. ಯಾರು ಅಧ್ಯಕ್ಷರಾದರೂ ಕಾಂಗ್ರೆಸ್ ದೇಶದಲ್ಲಿ ಅಧಿಕಾರಕ್ಕೆ ಬರುವುದಿರಲಿ, ರಾಜ್ಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡರೆ ಸಾಕು. ಸೋನಿಯಾ, ರಾಹುಲ್ ಏನೇ ಸರ್ಕಸ್ ಮಾಡಿದರೂ ಅಧಿಕಾರಕ್ಕೆ ಬರಲ್ಲ. ಪಾದಯಾತ್ರೆ, ಭಾರತ್ ಜೋಡೋ ಏನೇ ಮಾಡಿದರೂ ಸಾಧ್ಯವಿಲ್ಲ. ಇವರು ಕಾಲಿಟ್ಟಲ್ಲೆಲ್ಲಾ ಪಕ್ಷ ಸೋಲುತ್ತಿದೆ. ಕರ್ನಾಟಕದಲ್ಲೂ ಸೋಲು ಕಟ್ಟಿಟ್ಟ ಬುತ್ತಿ. ಅಂದಿನ ಗಾಂಧಿ ಕುಟುಂಬವೇ ಬೇರೆ, ಇಂದು ಅಧಿಕಾರಕ್ಕಾಗಿ ರಸ್ತೆಗಳಲ್ಲಿ ಓಡಾಡುವ ಗಾಂಧಿ ಕುಟುಂಬವೇ ಬೇರೆ. ಪರಮೇಶ್ವರ ಸೋಲಿಸಿದ್ದು ಸಿದ್ದರಾಮಯ್ಯ ಅಲ್ಲವೇ? ಈಗಲಾದರೂ ಸಿದ್ದರಾಮಯ್ಯ ಚಾಮುಂಡಿ ಮೇಲೆ ಆಣೆ ಮಾಡಿ ಹೇಳಲಿ ನಾನು ಸೋಲಿಸಿಲ್ಲ ಅಂತಾ. ಪರಮೇಶ್ವರ ಸಿಎಂ ರೇಸ್‌ನಲ್ಲಿ ಇದ್ದ ಕಾರಣ ಸೋಲಿಸಿದ್ದು ಇವರೇ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
Advertisement
ಕಲಬುರಗಿಯಲ್ಲಿ ಅ.30ರಂದು ಒಬಿಸಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಮಾಡಲಾಗುತ್ತಿದೆ. ಸಮಾವೇಶದಲ್ಲಿ 5 ಲಕ್ಷ ಜನ ಭಾಗಿಯಾಗಲಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರದಿಂದ ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ. ಇದು ಕಾಂಗ್ರೆಸ್‌ಗೆ ಟಕ್ಕರ್ ಕೊಡುವುದಕ್ಕೆ ಅಲ್ಲ. ಬಿಜೆಪಿಯ ಆಶಯವಾಗಿದೆ.– ಕೆ.ಎಸ್.ಈಶ್ವರಪ್ಪ ಮಾಜಿ ಸಚಿವ