Advertisement

ಕಾಂಗ್ರೆಸ್‌ ಪಕ್ಷಕ್ಕೆ ಸಿದ್ದು ಶನಿ ಇದ್ದಂತೆ: ಪೂಜಾರಿ

09:29 AM Nov 06, 2019 | sudhir |

ಮಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷಕ್ಕೆ ಶನಿ ಇದ್ದಂತೆ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವ ರು, ಸಿದ್ದರಾಮಯ್ಯ ಪಕ್ಷವನ್ನು ಮುಗಿಸಿಯೇ ಹೋಗುತ್ತಾರೆ. ದೇವರಿಗೂ ಅದು ಗೊತ್ತಿದೆ. ಹೈಕಮಾಂಡ್‌ ಅವರಿಗೆ ಹೆಚ್ಚು ಅಧಿಕಾರ ಕೊಟ್ಟು ತಪ್ಪು ಮಾಡುತ್ತಿದೆ. ಈ ಹೇಳಿಕೆ ಬಗ್ಗೆ ನನ್ನ ವಿರುದ್ಧ ದೂರು ನೀಡಲಿ. ಪಕ್ಷದಿಂದ ತೆಗೆದು ಹಾಕಲಿ. ಸಿದ್ದರಾಮಯ್ಯ ಭಾಗವಹಿಸುವ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ನಾನು ಹೋಗುವುದಿಲ್ಲ. ಅವರು ಏನು ಹೇಳುತ್ತಾರೆ ನೋಡೋಣ, ಮರುದಿನ ನಾನು ಮಾತನಾಡುತ್ತೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next