Advertisement

ಕಾಂಗ್ರೆಸ್‌ಗೆ ಜಾತಿ ವಿಷ ಬೀಜ ಬಿತ್ತಿ ಗೆಲ್ಲುವ ಭ್ರಮೆ

11:28 AM Nov 13, 2017 | Team Udayavani |

ಉಡುಪಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಜಾತಿ ವಿಷಬೀಜ ಬಿತ್ತಿ ಅದರ ಮೂಲಕ ಚುನಾವಣೆ ಗೆಲ್ಲಬಹುದು ಎಂಬ ಭ್ರಮೆ ಯಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತೀವ್ರ ವಾಗ್ಧಾಳಿ ನಡೆಸಿದ್ದಾರೆ. 

Advertisement

ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆ ಅಂಗವಾಗಿ ರವಿವಾರ ಉಡುಪಿ ಚಿತ್ತ ರಂಜನ್‌ ಸರ್ಕಲ್‌ನ ಕೀರ್ತಿಶೇಷ ಡಾ| ವಿ.ಎಸ್‌. ಆಚಾರ್ಯ ವೇದಿಕೆಯಲ್ಲಿ ಜರಗಿದ ಬಿಜೆಪಿ ಕಾರ್ಯಕರ್ತರ ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನನಗೆ ಜಾತಿ ಗೊತ್ತಿಲ್ಲ. ಮೋದಿ ಅವರು ಹೇಳುವಂತೆ “ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಮಾತ್ರ ಗೊತ್ತಿರುವುದು. ಮುಂದೆ ಎಲ್ಲರೂ  ಸ್ವಾಭಿಮಾನದಿಂದ ಬದುಕುವಂತಾಗಲು ಪ್ರಾಮಾ ಣಿಕ, ದಕ್ಷ ಆಡಳಿತವನ್ನು ಒಗ್ಗಟ್ಟಾಗಿ ನೀಡುತ್ತೇವೆ. ಇದನ್ನು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು. 

ಯೋಗ್ಯತೆ ಇದ್ದರೆ ಸಿದ್ದರಾಮಯ್ಯ ಸರಕಾರದ ಹಗರಣಗಳ ಬಗ್ಗೆ ನಾವು ಮಾಡಿರುವ ಆರೋಪ ಗಳ ಬಗ್ಗೆ ಸಿಬಿಐನಿಂದ ತನಿಖೆ ಮಾಡಿಸಲಿ. ಸಿಬಿಐ ಮೇಲೆ ನಂಬಿಕೆ ಇಲ್ಲಿದಿದ್ದರೆ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಿಂದ ತನಿಖೆ ನಡೆಸಲಿ  ಎಂದು ಯಡಿಯೂರಪ್ಪ ಹೇಳಿದ‌ರು. 

ಸಂಸದ ಶ್ರೀರಾಮುಲು ಸಿಎಂ ಸಿದ್ದರಾಮಯ್ಯ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದರು.  ಸಂಸದ ರಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ದ.ಕ. ಜಿಲ್ಲಾ ಉಸ್ತುವಾರಿ ಉದಯ ಕುಮಾರ್‌ ಶೆಟ್ಟಿ, ಮಾಜಿ ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌, ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಪಕ್ಷದ ಮುಖಂಡರಾದ ರವಿ ಕುಮಾರ್‌, ಯಶ್‌ಪಾಲ್‌ ಸುವರ್ಣ, ತೇಜಸ್ವಿನಿ ರಮೇಶ್‌, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕುಯಿಲಾಡಿ ಸುರೇಶ್‌ ನಾಯಕ್‌, ದಿನಕರ ಶೆಟ್ಟಿ ಹೆರ್ಗ, ಸಂಧ್ಯಾ ರಮೇಶ್‌, ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಪ್ರಭಾಕರ ಪೂಜಾರಿ, ಪ್ರತಾಪ್‌ ಹೆಗ್ಡೆ ಮಾರಾಡಿ, ನಳಿನಿ ಪ್ರದೀಪ್‌ ರಾವ್‌, ಪ್ರವೀಣ್‌ ಶೆಟ್ಟಿ ಕಪ್ಪೆಟ್ಟು, ಡಾ| ಎಂ.ಆರ್‌. ಪೈ, ಶ್ಯಾಮಲಾ ಕುಂದರ್‌, ಸುಧಾಕರ ಶೆಟ್ಟಿ, ಗುರ್ಮೆ ಸುರೇಶ್‌ ಶೆಟ್ಟಿ,  ರಾಘವೇಂದ್ರ ಕಿಣಿ,  ಶ್ರೀಶ ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಕೆ.ಕೆ. ಹೆಬ್ಟಾರ್‌, ಕುತ್ಯಾರು ನವೀನ್‌ ಶೆಟ್ಟಿ ಮತ್ತು ಗಿರೀಶ್‌ ಅಂಚನ್‌ ಕಾರ್ಯಕ್ರಮ ನಿರ್ವ ಹಿಸಿ ದರು. ಅಕ್ಕಿಮುಡಿ, ಬೃಹತ್‌ ಹಾರದೊಂದಿಗೆ ಯಡಿಯೂರಪ್ಪ ಅವರನ್ನು ಸಮ್ಮಾನಿಸಲಾಯಿತು. ನೂರಾರು ಕಾರ್ಯಕರ್ತರು ಬೈಕ್‌ ರ್ಯಾಲಿ ಮೂಲಕ ಸಮಾವೇಶ ಸ್ಥಳಕ್ಕೆ ಆಗಮಿಸಿದ್ದರು. 

ಶ್ರೀಕೃಷ್ಣ  ಸಾನ್ನಿಧ್ಯದ ಪಾವಿತ್ರ್ಯ ಉಳಿಯಿತು
ಸಿದ್ದರಾಮಯ್ಯ ಹಲವು ಬಾರಿ ಉಡುಪಿಗೆ ಬಂದಿದ್ದರೂ ಶ್ರೀ ಕೃಷ್ಣ ದರ್ಶನ ಪಡೆಯಲಿಲ್ಲ ಎಂದು ಜನತೆ ಹೇಳು ತ್ತಿದ್ದಾರೆ. ಇದು ಒಳ್ಳೆ ಯದೇ ಆಯಿತು. ಅವರು ದರ್ಶನ ಮಾಡ ದಿರು  ವುದ  ರಿಂದ ಸಾನ್ನಿಧ್ಯದ ಪಾವಿತ್ರ್ಯತೆ ಉಳಿ  ಯಿತು. ಧರ್ಮ ಸ್ಥಳಕ್ಕೆ ಮೀನು, ಮಾಂಸ ತಿಂದು ತೆರಳಿದ್ದ ಸಿದ್ದರಾಮಯ್ಯ ನವ ರನ್ನು ಅರ್ಧ ದಲ್ಲೇ ತಡೆದು ಮಂಜುನಾಥ ದೇವರು ದರ್ಶನಕ್ಕೆ ಅವಕಾಶ ನೀಡಲಿಲ್ಲ ಇದು ವಿಶೇಷ ವಾಗಿದೆ ಎಂದು ಬಿಎಸ್‌ವೈ ಹೇಳಿದರು. 

ಪ್ರಮೋದ್‌ ದಾನಧರ್ಮ ಮತ್ತೆ ಶುರು: ಭಟ್‌ 
“ನೋಟು ಅಮಾನ್ಯದಿಂದಾಗಿ ದಾನ ಧರ್ಮ ಮಾಡುವುದು ನಿಲ್ಲಿಸಿದ್ದೇನೆ’ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ. ಆದರೆ ಇಂದು ಉಡುಪಿಯಲ್ಲಿ ಸೇರಿರುವ ಜನಸ್ತೋಮ ಕಂಡು ಸಚಿವರು ನಾಳೆಯಿಂದ ಮತ್ತೆ ದಾನ ಧರ್ಮ ಆರಂಭಿಸು ತ್ತಾರೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್‌ ಲೇವಡಿ ಮಾಡಿದರು. “ನಾನು ಕಾಂಗ್ರೆಸ್‌ಗೆ ಹೋಗು ತ್ತೇನೆ ಎಂಬ ಕಾಂಗ್ರೆಸ್ಸಿಗರ ಹೇಳಿಕೆ ಹತಾಶ ತನದ್ದು. ನಾನು ರಾಷ್ಟ್ರೀಯ ಸ್ವಯಂಸೇವಕದಿಂದ ಬೆಳೆದವನು. ನನ್ನಂತಹ ಯಾವ ಕಾರ್ಯಕರ್ತರು ಕೂಡ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಅಂತಹ ಗತಿ ಬಂದಿಲ್ಲ. ಜೀವ ಇರುವವರೆಗೂ ಪಕ್ಷ ಬಿಡುವುದಿಲ್ಲ’ ಎಂದು ಅವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next