Advertisement

ಕಾಂಗ್ರೆಸ್ “ಆರು ರೋಗಗಳಿರುವ” ಒಂದು ಸಂಘಟನೆ; ಬಂಗಾರಪೇಟೆಯಲ್ಲಿ ಮೋದಿ

11:24 AM May 09, 2018 | Team Udayavani |

ಕೋಲಾರ(ಬಂಗಾರಪೇಟೆ):ಈ ಚುನಾವಣೆ ಕರ್ನಾಟಕದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ, ಯಾರು ಶಾಸಕರು ಆಗುತ್ತಾರೆ, ಯಾರು ಆಗಲ್ಲ, ಯಾವ ಪಕ್ಷ ಗೆಲ್ಲುತ್ತೆ, ಯಾವ ಪಕ್ಷ ಸೋಲುತ್ತೆ ಎಂಬುದಲ್ಲ. ಬದಲಿಗೆ ರಾಜ್ಯದ ಅಭಿವೃದ್ಧಿ ಮುಖ್ಯವಾಗಿದೆ. ಮುಂದಿನ ಐದು ವರ್ಷಗಳ ಕಾಲ ಯಾರು ಆಡಳಿತ ನಡೆಸುತ್ತಾರೆ ಹಾಗೂ ಯುವಕರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಬುಧವಾರ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಇಡೀ ದೇಶ ಕಾಂಗ್ರೆಸ್ ಪಕ್ಷದ ಸಂಸ್ಕೃತಿ,ಕಾಂಗ್ರೆಸ್ ನಿಯತ್ತು, ಅದರ ನೀತಿಯನ್ನು ಅಪರಾಧಗಳನ್ನು ಜನರು ಸರಿಯಾಗಿ ತಿಳಿದುಕೊಂಡಿದ್ದಾರೆ. ದೇಶದ ಎಲ್ಲಾ ಭಾಗಗಳಲ್ಲಿ ಜನರು ವಿದಾಯ ಹೇಳಿದ್ದಾರೆ, ಈ ಬಾರಿ ವಿದಾಯ ಹೇಳುವ ಸರದಿ ಕರ್ನಾಟಕದ ಜನರದ್ದು ಎಂದರು.

ಕರ್ನಾಟಕ ಪ್ರದೇಶ ಇಡೀ ದೇಶಕ್ಕೆ ಗೌರವ ತರುವ ಪ್ರದೇಶ, ಬೆಂಗಳೂರು, ಮೈಸೂರು, ಮಂಗಳೂರು, ಕೋಲಾರ ಸೇರಿದಂತೆ ಎಲ್ಲವೂ ದೇಶಕ್ಕೆ ಕೀರ್ತಿ ತರುವ ಜಿಲ್ಲೆಗಳಾಗಿವೆ. ಮಹಾರಾಷ್ಟ್ರ, ಗೋವಾ, ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಿದೆ. ಹೀಗಾಗಿ ಮೇ 15ರಂದು ಕರ್ನಾಟಕದಲ್ಲಿ ಏನಾಗಲಿದೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.

ಆದರೆ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ಇಡೀ ರಾಜ್ಯದ ಗೌರವವನ್ನು ಮಣ್ಣು ಪಾಲು ಮಾಡಿದೆ. ಕಾಂಗ್ರೆಸ್ ಸದ್ಯ ಆರು ರೋಗಗಳಿಂದ ಬಳಲುತ್ತಿದೆ. ಈ ರೋಗಗಳ ವೈರಸ್ ಎಲ್ಲೆಡೆ ಹರಡಿದೆ ಎಂದು ವಾಗ್ದಾಳಿ ನಡೆಸಿದರು.

Advertisement

ಕಾಂಗ್ರೆಸ್ ಪಕ್ಷ ಇಡೀ ವ್ಯವಸ್ಥೆಯನ್ನು ನಾಶ ಮಾಡ್ತಿದೆ. ಕಾಂಗ್ರೆಸ್ ಸಂಸ್ಕೃತಿ ಕೋಮುವಾದ,ಜಾತಿವಾದ, ಅಪರಾಧ, ಭ್ರಷ್ಟಾಚಾರ ಹಾಗೂ ಗುತ್ತಿಗೆದಾರಿಕೆ ಎಂಬ ಆರು ರೋಗಗಳಿಂದ ಬಳಲುತ್ತಿದೆ.

ಹತ್ತು ವರ್ಷಗಳ ಆಡಳಿತ ನಡೆಸಿದ್ದ ಮನಮೋಹನ್ ಸಿಂಗ್ ಅವರ ರಿಮೋಟ್ ಕಂಟ್ರೋಲ್ ದೆಹಲಿ 10 ಜನ್ ಪಥ್ (ಸೋನಿಯಾಗಾಂಧಿ) ನಲ್ಲಿ ಇತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ನೀವು ನಮ್ಮ ಸರ್ಕಾರ ನೋಡಿದ್ದೀರಿ. ನಮಗಿರುವ ಹೈಕಮಾಂಡ್ ಅಂದ್ರೆ ಈ ದೇಶದ ನೂರಾ ಇಪ್ಪತ್ತೈದು ಕೋಟಿ ಜನರು, ಮೋದಿ ಎದ್ದು ನಿಲ್ಲು ಎಂದರೆ ಎದ್ದು ನಿಲ್ಲುತ್ತೇನೆ, ಬಲಕ್ಕೆ ತಿರುಗು ಎಂದರೆ ಬಲಕ್ಕೆ ತಿರುಗುತ್ತೇನೆ..ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತಾ ಜನಾರ್ದನರೇ ನನ್ನ ಹೈಕಮಾಂಡ್ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next