Advertisement
ಮುಧೋಳ ಮತಕ್ಷೇತ್ರದಲ್ಲಿ ಲೋಕಾಪುರ, ಹಲಗಲಿ ಹಾಗೂ ಮುಧೋಳ ಬೂತ್‌ಗಳ ವ್ಯಾಪ್ತಿಯಲ್ಲಿ ಒಟ್ಟು 5 ಸಾವಿರ ಮತದಾರರಿದ್ದಾರೆ. ಪಕ್ಷದ ಕಾರ್ಯಕರ್ತರು ಮತದಾರರಿಗೆ ಬಿಜೆಪಿ ಸಾಧನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮನವರಿಕೆ ಮಾಡಿಕೊಟ್ಟು ಮತ ಕೇಳಬೇಕು ಎಂದು ತಿಳಿಸಿದರು.
Related Articles
Advertisement
ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದಿನ ದಿನದಲ್ಲಿ ಪ್ರತಿಯೊಂದು ರಾಜ್ಯಕ್ಕೆ ಒಂದು ಐಐಟಿ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಅವರ ಕೈ ಬಲಪಡಿಸಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಮಾಜಿ ಪ್ರಧಾನ ಮಂತ್ರಿ ಅಟಲ್‌ಬಿಹಾರಿ ವಾಜಪೇಯಿ ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ತಾಲೂಕಿನ ಸಂಪೂರ್ಣ ಅಭಿವೃದ್ಧಿಯಾಗಿದೆ. ನಮ್ಮ ಸಾಧನೆ ಬಗ್ಗೆ ಮತದಾರರಿಗೆ ತಿಳಿಸಿ ಮತ ಕೇಳ್ಳೋಣ. ಶಿಕ್ಷಕರ ಹಾಗೂ ಪದವೀಧರರ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆದು ನಮ್ಮ ಪಕ್ಷದ ಅಭ್ಯರ್ಥಿಗಳಾದ ನಿರಾಣಿ ಹಾಗೂ ಅರುಣ ಶಹಾಪುರ ಅವರನ್ನು ಆಯ್ಕೆ ಮಾಡೋಣ ಎಂದರು.
ವಾಯವ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಹನಮಂತ ನಿರಾಣಿ ಮಾತನಾಡಿ, ಕಳೆದ ಬಾರಿ ಆಯ್ಕೆಯಾದ ನಾನು ಪ್ರಾಮಾಣಿಕವಾಗಿ ನಿಮ್ಮ ಸೇವೆಯನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸೇವೆ ಮಾಡಲು ಮತ್ತೂಮ್ಮೆ ನನಗೆ ಅವಕಾಶ ಕಲ್ಪಿಸಿ ಕೊಡಬೇಕು. ಅದಕ್ಕೆ ಎಲ್ಲರ ಸಹಕಾರ ಅವಶ್ಯ ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ಬಿಜೆಪಿ ಮುಖಂಡರಾದ ಕೆ.ಆರ್. ಮಾಚಪ್ಪನವರ, ಅರುಣ ಕಾರಜೋಳ, ನಗರಸಭೆ ಅಧ್ಯಕ್ಷ ಗುರುಪಾದ ಕುಳಲಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಡಾ| ರವಿ ನಂದಗಾವಿ, ಗ್ರಾಮೀಣ ಘಟಕ ಅಧ್ಯಕ್ಷ ಹನಮಂತ ತುಳಸಿಗೇರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ವಸ್ತ್ರದ, ಬಿಜೆಪಿ ಯುವ ಮೋರ್ಚಾ ಘಟಕ ಅಧ್ಯಕ್ಷ ಪ್ರದೀಪ ನಿಂಬಾಳ್ಕರ, ತುಷಾರ ಭೋಪಳೆ, ಸೇರಿದಂತೆ ಇತರರು ಇದ್ದರು.
ಕೊರೊನಾ ವೇಳೆ ದೇಶದಲ್ಲಿ 6 ಕೋಟಿ 25 ಲಕ್ಷ ಡೋಸ್ ವ್ಯಾಕ್ಸಿನ್‌ಉತ್ಪನ್ನವಾಗುತ್ತಿತ್ತು. ದೇಶದ ಪ್ರತಿಯೋರ್ವ ನಾಗರಿಕರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡಿದ್ದು ನಮ್ಮ ಸರ್ಕಾರ. ಒಂದು ವೇಳೆ ಕೊರೊನಾ ಅವಧಿಯಲ್ಲಿ ಕಾಂಗ್ರೆಸ್ ಆಡಳಿತ ಇದ್ದಿದ್ದರೆ ಜನರು ಇರುವೆ ರೀತಿಯಲ್ಲಿ ಮೃತಪಡುತ್ತಿದ್ದರು. ಕಾಂಗ್ರೆಸ್‌ನ ಇಂದಿರಾಗಾಂಧಿ ಅವರು ಹೇಳಿದ ಹಾಗೆ ಗರೀಬಿ ಹಠವೋ ಆಗಲಿಲ್ಲ, ಬದಲಿಗೆ ಕೇವಲ ಕಾಂಗ್ರೆಸ್ ಪಕ್ಷದ ಮುಖಂಡರ ಗರೀಬಿ ಹಠಾವೋ ಆಯಿತು. –ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ