Advertisement
ದ.ಕ. ಜಿಲ್ಲಾ ಬಿಜೆಪಿ ಲೋಕಸಭಾ ಚುನಾವಣಾ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 1971ರಲ್ಲಿ ಗರೀಬೀ ಹಠಾವೋ ಎಂದಿತ್ತು. ಆದರೆ, ಈಗಿನ ಘೋಷಣಾ ಪತ್ರದಲ್ಲಿಯೂ “ನ್ಯಾಯ್’ ಯೋಜನೆಯನ್ನು ಸೇರ್ಪಡೆ ಮಾಡಿದೆ. ಹಾಗಾದರೆ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅವರು ಜನರಿಗೆ ಕೇವಲ ಅನ್ಯಾಯವನ್ನೇ ಮಾಡಿಕೊಂಡು ಬಂದಿದೆಯೇ ಎಂದು ಪ್ರಶ್ನಿಸಿದರು.
2013ರವರೆಗೆ ನರೇಂದ್ರ ಮೋದಿ ಯವರದ್ದು ಕೇವಲ ಹೆಸರಾಗಿತ್ತು. ಆದರೆ, ಪ್ರಸ್ತುತ ಮೋದಿ ಅವರು ಭಾರತದ ಮಂತ್ರವಾಗಿದ್ದಾರೆ. ದೇಶ ಮುನ್ನಡೆಸಲು ನರೇಂದ್ರ ಮೋದಿಯವರೇ ಸೂಕ್ತ ವ್ಯಕ್ತಿ ಎಂಬುದು ಪ್ರತಿಯೊಬ್ಬರಿಗೂ ಅರ್ಥವಾಗಿದೆ. ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ತೆಗೆದುಕೊಂಡ ಕ್ರಮ, ದೇಶದ ಆಂತರಿಕ ಭದ್ರತೆ ವಿಚಾರದಲ್ಲಿ ಅವರ ನಿಲುವು, ಕಟ್ಟಕಡೆಯ ಜನರನ್ನೂ ಸ್ಪರ್ಶಿಸುವ 146 ಯೋಜನೆಗಳ ಯಶಸ್ವಿ ಅನುಷ್ಠಾನಗಳಿಂದಾಗಿ ಜನರ ಬಳಿ ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಹೋಗುತ್ತಿದ್ದೇವೆ ಎಂದು ಮಾಳವಿಕಾ ಅವಿನಾಶ್ ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಾ ವಧಿಯಲ್ಲಿ ಕೋಮು ಪ್ರಕರಣಗಳು ಹೆಚ್ಚಿತ್ತು. ಕುಮಾರಸ್ವಾಮಿ ಸರಕಾರ ದಲ್ಲಿಯೂ ಇದು ಮುಂದುವರಿದಿದೆ ಎನ್ನುವುದಕ್ಕೆ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಉಳಾಯಿಬೆಟ್ಟು ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿ ಗಳನ್ನು ಖುಲಾಸೆಗೊಳಿಸಿ, ಹಿಂದೂಗಳ ಮೇಲೆ ಮಲತಾಯಿ ಧೋರಣೆ ಅನುಸರಿಸಿರುವುದೇ ಸಾಕ್ಷಿ. ಈ ಬಗ್ಗೆ ಅವರು ಉತ್ತರಿಸಬೇಕು ಎಂದರು.
Related Articles
ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಸಾಧನೆಗಳನ್ನು ಹೇಳಿಕೊಂಡು ಅವರ ಹೆಸರಿನಲ್ಲಿ ಮತ ಕೇಳಲು ನಮಗೆ ಯಾವುದೇ ಹಿಂಜರಿಕೆ ಇಲ್ಲ. ಎಲ್ಲ ಸಂಸದರ ಈ ಹಿಂದಿನ ಸಾಧನೆಗಳನ್ನು ಪಟ್ಟಿ ಮಾಡಿದ್ದೇವೆ. ದ.ಕ. ಜಿಲ್ಲೆಯಲ್ಲಿ ನಳಿನ್‌ಕುಮಾರ್ ಕಟೀಲು ಅವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ನಳಿನ್‌ಕುಮಾರ್ ಕಟೀಲು ಗೆದ್ದರೆ ನರೇಂದ್ರ ಮೋದಿ ಗೆಲ್ಲುತ್ತಾರೆ ಎಂದು ಮಾಳವಿಕಾ ಅವಿನಾಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Advertisement
ಆ ಕೆಲವರು ಯಾರು?ಬಾಲಾಕೋಟ್ ದಾಳಿ ಸಂದರ್ಭ ದೇಶದ ಜನ ಸಂಭ್ರಮಾಚರಣೆ ನಡೆಸಿದ್ದರು. ಆದರೆ ಸಂಭ್ರಮಾಚರಣೆಯಿಂದ ಕೆಲವರಿಗೆ ನೋವಾಗುತ್ತದೆ ಎಂದು ಹೇಳಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೇಶಭಕ್ತರಿಗೆ ಅವಮಾನ ಮಾಡಿದ್ದಾರೆ. ಆ ಕೆಲವರು ಯಾರು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ ಎಂದು ಇದೇ ವೇಳೆ ಅವರು ಟಾಂಗ್ ನೀಡಿದರು.