ನವದೆಹಲಿ: 2009ರೊಳಗೆ ದೇಶದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರ ತನ್ನ ಮಾತು ತಪ್ಪಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪ್ರಧಾನ್‌ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆಯಡಿ (ಸೌಭಾಗ್ಯ) ವಿದ್ಯುತ್ ಸಂಪರ್ಕ ಪಡೆದ 16,320 ಕೋಟಿ ಫಲಾನುಭವಿಗಳ ಜತೆಗೆ ಗುರುವಾರ ಮಾತುಕತೆ ನಡೆಸಿದ ಅವರು, ಕಾಂಗ್ರೆಸ್‌ನ ಹಿಂದಿನ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಕೂಡ ಇಂಥದ್ದೇ ವಚನ ಭ್ರಷ್ಟತೆ ಮೆರೆದಿದ್ದಾಗಿ ಟೀಕಿಸಿದರು.
“”2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಈ ಹಳ್ಳಿಗಳ ಜನರು ಪ್ರತಿದಿನ ಸೂರ್ಯೋದಯದಿಂದ ಸೂರ್ಯಾ ಸ್ತದವರೆಗಷ್ಟೇ ಸಕ್ರಿಯವಾಗಿ ರುವಂಥ ದುಸ್ಥಿತಿಯಿತ್ತು. ಅಂಥ ಹಳ್ಳಿಗಳಿಗೆ ಈಗ ವಿದ್ಯುತ್ ಸಂಪರ್ಕ ಸಿಕ್ಕಿದ್ದು, ಅಲ್ಲಿಯ ಜನಜೀವನ ಬದಲಾಗಿದೆ. ಸೌಭಾಗ್ಯ ಯೋಜನೆಯಡಿ 80ರಿಂದ 85 ಲಕ್ಷ ಮನೆಗಳಿಗೆ ವಿದ್ಯುತ್ ಸೌಲಭ್ಯ ನೀಡಲಾಗಿದ್ದು, 2019ರ ಮಾರ್ಚ್ 31ರೊಳಗೆ ಇನ್ನೂ, 3.6 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ನಿರ್ಧರಿಸಲಾಗಿದ್ದೆವು. ಇದೀಗ ಆ ಗುರಿಯನ್ನು ಇದೇ ವರ್ಷ ಡಿ. 31ರೊಳಗೆ ಮುಟ್ಟಲು ತೀರ್ಮಾನಿಸಲಾಗಿದೆ” ಎಂದರು.
“”ಇಷ್ಟು ಪ್ರಗತಿ ಸಾಧಿಸಿದರೂ, ಪ್ರತಿಪಕ್ಷಗಳು ಅನವಶ್ಯಕವಾಗಿ ನಮ್ಮನ್ನು ಟೀಕಿಸುತ್ತಿವೆ” ಎಂದ ಪ್ರಧಾನಿ, “”ನೀವು (ಪ್ರತಿಪಕ್ಷಗಳು) ಮೋದಿಯನ್ನು ಎಷ್ಟಾದರೂ ನಿಂದಿಸಿ, ಆದರೆ ಹಳ್ಳಿಗಳಿಗೆ ವಿದ್ಯುತ್ ನೀಡಲು ಶ್ರಮಿಸುತ್ತಿರುವ ಇಂಧನ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯನ್ನು ಗೌರವಿಸಿ” ಎಂದರು.
ಸೌಭಾಗ್ಯ ಫಲಾನುಭವಿಗಳ ಜತೆಗಿನ ಸಂವಾದದಲ್ಲಿ ಪ್ರಧಾನಿ ಮೋದಿ ಆರೋಪ
ತಮ್ಮ ಸರ್ಕಾರದಿಂದ 80-85 ಲಕ್ಷ ಮನೆಗಳಿಗೆ ವಿದ್ಯುತ್: ಮೋದಿ
ಡಿ. 31ರೊಳಗೆ 3.6 ಲಕ್ಷ ಮನೆಗಳಿಗೆ ವಿದ್ಯುತ್ ಗುರಿ