Advertisement

ಹೈ ಬುಲಾವ್‌: ಕೈ ಚಟುವಟಿಕೆ ಚುರುಕು

01:58 AM Feb 21, 2022 | Team Udayavani |

ಬೆಂಗಳೂರು: ರಾಜ್ಯದ ಪ್ರಮುಖ ನಾಯಕರಿಗೆ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಬುಲಾವ್‌ ಬಂದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಚಟುವಟಿಕೆಗಳು ಚುರುಕುಗೊಂಡಿ ಬಗ್ಗೆ ಚರ್ಚಿಸಲು ಕರೆಯಲಾಗಿದ್ದರೂ ಆಂತರಿಕ ಸಂಘರ್ಷ ವಿಚಾರಗಳನ್ನು ನಾಯಕ ರಾಹುಲ್‌ ಗಾಂಧಿ ಮುಂದೆ ಪ್ರಸ್ತಾವಿಸಿ ದೂರುಗಳ ಪಟ್ಟಿ ಸಲ್ಲಿಸಲು ಹಿರಿಯ ನಾಯಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Advertisement

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿ. ಬಣದ ನಡುವೆ ಆಂತರಿಕ ಕಚ್ಚಾಟ, ಇದರಿಂದ ಪಕ್ಷಕ್ಕಾಗುವ ಹಾನಿಯ ಬಗ್ಗೆ ಪ್ರಸ್ತಾವಿಸಿ ಹೈಕಮಾಂಡ್‌ ಮೂಲಕ ನಿರ್ದೇಶನ ಕೊಡಿಸಲು ಹಿರಿಯ ನಾಯಕರು ತೀರ್ಮಾನಿಸಿದ್ದಾರೆ. ಜತೆಗೆ ಚುನಾವಣೆ ದೃಷ್ಟಿಯಿಂದ ಸಮನ್ವಯ ಸಮಿತಿ ರಚನೆ ಪ್ರಸ್ತಾವವನ್ನೂ ಮಂಡಿಸಲಾಗುವುದು ಎಂದು ತಿಳಿದುಬಂದಿದೆ.

ಈ ಬಗ್ಗೆ ಡಿ.ಕೆ.ಶಿ. ಕೂಡ ಹೈಕಮಾಂಡ್‌ಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಅದೇ ರೀತಿ ಸಿದ್ದರಾಮಯ್ಯ ಅವರು ಕೂಡ ಕಳೆದ ದಿಲ್ಲಿ ಭೇಟಿ ಸಂದರ್ಭದಲ್ಲಿ ಕೆಲವು ವಿಚಾರಗಳನ್ನು ಹೇಳಿದ್ದರು ಎನ್ನಲಾಗಿದೆ.

ನಿರ್ದೇಶನ ಸಾಧ್ಯತೆ
ಈ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಿ ಒಗ್ಗಟ್ಟಾಗಿ ಮುಂದುವರಿಯಲು ಸೂಚನೆ, ಚುನಾವಣೆ ಗೆಲ್ಲಲು ಅನುಸರಿಸಬೇಕಾದ ತಂತ್ರದ ಕುರಿತು ಚರ್ಚೆ, ಇತರ ಪಕ್ಷಗಳಿಂದ ಕಾಂಗ್ರೆಸ್‌ಗೆ ಬರಲು ಮುಂದಾಗಿರುವವರಿಗೆ ಒಪ್ಪಿಗೆ ಮತ್ತಿತರ ವಿಚಾರ ಚರ್ಚೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿಯೇ ಹದಿನೈದು ನಾಯಕರ ಪಟ್ಟಿಯಲ್ಲಿ ಮೂಲ ವಲಸಿಗರು ಸೇರಿದ್ದಾರೆ ಎನ್ನಲಾಗಿದೆ.

ರಾಜ್ಯದ ಕಾಂಗ್ರೆಸ್‌ ಬೆಳವಣಿಗೆ, ಪ್ರಸ್ತುತ ವಿದ್ಯಮಾನಗಳನ್ನು ಹೈಕಮಾಂಡ್‌ ಗಮನಿಸುತ್ತಿದೆ. ನಮ್ಮಲ್ಲಿ ಒಡಕು ಇಲ್ಲದೆ ಒಟ್ಟಾಗಿ ಮುಂದೆ ಸಾಗಬೇಕು. ಅನಗತ್ಯ ಗೊಂದಲ, ಸಮಸ್ಯೆ ಸೃಷ್ಟಿಯಾಗದಂತೆ ನೋಡಿಕೊಳ್ಳಲು ಪ್ರಮುಖರ ಸಭೆ ಕರೆಯಲಾಗಿದೆ. ನಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳುತ್ತೇವೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಸೇರಿ ಎಲ್ಲರೂ ಒಟ್ಟಾಗಿ ಹೋಗಬೇಕಿದೆ. ಪಕ್ಷದ ಹಿತ ಮುಖ್ಯ ಎಂದು ಕೇಂದ್ರದ ಮಾಜಿ ಸಚಿವರೊಬ್ಬರು ಹೇಳಿದ್ದಾರೆ.

Advertisement

ಮನವಿ ಮಾಡಿದ್ದೆ
ನಾನು ಪಕ್ಷದ ಅಧ್ಯಕ್ಷನಾದ ಸಮಯದಲ್ಲೇ ನಮ್ಮ ಎಲ್ಲ ನಾಯಕರನ್ನು ಕರೆಸಿ ದಿಲ್ಲಿಯಲ್ಲಿ ಹೈಕಮಾಂಡ್‌ ಜತೆ ಚರ್ಚೆ ಮಾಡಬೇಕು ಎಂದು ಮನವಿ ಮಾಡಿದ್ದೆ ಎಂದು ದಿಲ್ಲಿ ನಾಯಕರ ಬುಲಾವ್‌ ಕುರಿತು ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಚರ್ಚಿಸುವ ಉದ್ದೇಶದಿಂದ ಫೆ. 25ಕ್ಕೆ ನನ್ನನ್ನು ಹೈಕಮಾಂಡ್‌ ಕರೆದಿದೆ. ಅದಕ್ಕಾಗಿ ದಿಲ್ಲಿಗೆ ಹೋಗುತ್ತಿದ್ದೇನೆ. ಎಐಸಿಸಿ ವರಿಷ್ಠ ರಾಹುಲ್‌ ಗಾಂಧಿ ಸಾರಥ್ಯದಲ್ಲಿ ಸಭೆ ನಡೆಯಲಿದೆ.
-ಸಿದ್ದರಾಮಯ್ಯ, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next