Advertisement
ರವಿವಾರ ಮಂಗಳೂರಿನಲ್ಲಿ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಯವರ ಆರೋಪ ಸರಿಯಾಗಿದೆ. ಅಧಿಕಾರಿಗಳಿಗೇ ಇಂತಿಷ್ಟು ಕೋಟಿ ರೂ. ನೀಡಬೇಕೆಂಬ ಗುರಿ ನಿಗದಿ ಮಾಡಿರುವ ದೂರುಗಳು ಕೇಳಿಬರುತ್ತಿವೆ. ಸರಕಾರಕ್ಕೆ ಅಭಿವೃದ್ಧಿಯ ಯೋಚನೆಯೇ ಇಲ್ಲ ಎಂದರು.
ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಸ್ವಾತಂತ್ರ್ಯ ಬಳಿಕ ದೇಶದಲ್ಲಿ ಸುದೀರ್ಘ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ನಿಂದ ಯಾಕೆ ಹಳ್ಳಿಗಳಲ್ಲಿ ಶಾಲೆ, ರಸ್ತೆ ನಿರ್ಮಾಣ, ಆಸ್ಪತ್ರೆ ಸಹಿತ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ರೈಲ್ವೇ ಇಲಾಖೆಯಲ್ಲೂ ಯಾವುದೇ ಅಭಿವೃದ್ಧಿ ಸಾಧ್ಯವಾಗಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಎಲ್ಲವೂ ಬದಲಾಗಿದೆ. ಉಚಿತವಾಗಿ ಕೊಟ್ಟು ಶ್ರೀಲಂಕಾ, ಪಾಕಿಸ್ಥಾನದಲ್ಲಿ ಏನಾಗಿದೆ ಎಂದು ಯೋಚಿಸಬೇಕಿತ್ತು ಎಂದು ನಳಿನ್ ಹೇಳಿದರು. ಸಮರ್ಥ ವಿಪಕ್ಷವಾಗಿ ಕೆಲಸ
ಬಿಜೆಪಿ ಸಮರ್ಥ ವಿಪಕ್ಷವಾಗಿ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವದ ಆಧಾರದಲ್ಲಿ ಹೋರಾಡಿದ ನಮ್ಮ ಶಾಸಕರನ್ನು ಸ್ಪೀಕರ್ ಅಮಾನತು ಮಾಡಿದ್ದಾರೆ. ಮುಂದಿನ ದಿನಗಳ ಹೋರಾಟದ ಬಗ್ಗೆ ರೂಪರೇಖೆ ಸಿದ್ಧವಾಗುತ್ತಿದೆ ಎಂದು ಹೇಳಿದರು.