Advertisement

Congress Guranttee: ಗೃಹಲಕ್ಷ್ಮೀ’ ಹಣದಿಂದ ಊರಿಗೇ ಹೋಳಿಗೆ ಊಟ

03:09 AM Aug 26, 2024 | Team Udayavani |

ಬೆಳಗಾವಿ/ಕುಡಚಿ: ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಅಜ್ಜಿಯೊಬ್ಬರು ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒಳಿತಾಗಲಿ ಎಂದು ಹರಸಿದ್ದಾರೆ.

Advertisement

ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೋಟಿ ಎಂಬ ವೃದ್ಧೆ, ಗ್ರಾಮದ ಶ್ರೀ ಮಹಾಲಕ್ಷಿ$¾à ದೇವಸ್ಥಾನ ದಲ್ಲಿ ಮಹಿಳೆಯರನ್ನು ಸೇರಿಸಿ ಅಡುಗೆ ಸಿದ್ಧಪಡಿಸಿ 2,000 ಜನ ಸಂಖ್ಯೆಯ ಇಡೀ ಹಳ್ಳಿ ಜನರಿಗೆ ಹೂರಣದ ಹೋಳಿಗೆ ಜತೆಗೆ ಅನ್ನ, ಸಾರು, ಬದನೆಕಾಯಿ ಪಲ್ಯ ಊಟ ಹಾಕಿಸಿದ್ದಾರೆ. ಜತೆಗೆ ಐವರು ಮುತ್ತೈದೆಯರಿಗೆ ಉಡಿ ತುಂಬಿ ಸಾರ್ಥಕತೆ ಮೆರೆದಿದ್ದಾರೆ.

10 ತಿಂಗಳ ಹಣ ಕೂಡಿಟ್ಟಿದ್ದರು
ಅಕ್ಕಾ ತಾಯಿಗೆ ಈವರೆಗೆ 10 ತಿಂಗಳ ಗೃಹಲಕ್ಷ್ಮೀ ಹಣ ಬಂದಿದ್ದು, ಇದರಲ್ಲಿ ಒಟ್ಟು 15 ಸಾವಿರ ರೂ. ಖರ್ಚು ಮಾಡಿದ್ದಾರೆ. ಅಜ್ಜಿಯ ಈ ಉತ್ಸಾಹ ಕಂಡು ಗ್ರಾಮದ ಇನ್ನಿತರ ಮಹಿಳೆಯರೂ ಕೈಜೋಡಿಸಿದ್ದಾರೆ. ತಮ್ಮ ಮನೆಯಲ್ಲಿದ್ದ ಕಡ್ಲೆ ಬೇಳೆ, ಬೆಲ್ಲ ತಂದು ಸಹಾಯ ಮಾಡಿದ್ದಾರೆ. ಅಜ್ಜಿಯ ನಿಸ್ವಾರ್ಥ ಭಾವ ಕಂಡು ಇಡೀ ಗ್ರಾಮವೇ ಹಾಡಿ ಹೊಗಳುತ್ತಿದೆ.

ರೇಷ್ಮೆ ಸೀರೆ ಕಳುಹಿಸಿದ ಹೆಬ್ಬಾಳ್ಕರ್‌
ವಿಷಯ ತಿಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಮ್ಮ ಬೆಂಬಲಿಗರಿಂದ ಈ ವೃದ್ಧೆಗೆ ರೇಷ್ಮೆ ಸೀರೆ ಕೊಟ್ಟು ಕಳುಹಿಸಿದ್ದಾರೆ. ಅಜ್ಜಿಗೆ ಪೇಟಾ ತೊಡಿಸಿ, ಹಾರ ಹಾಕಿ ಸಮ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.