Advertisement
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಎಂಟೂ ಕಾಂಗ್ರೆಸ್ ಅಭ್ಯರ್ಥಿಗಳು ಸಮರ್ಥರು, ಭ್ರಷ್ಟಾಚಾರ ರಹಿತರು. ಅವರು ಗೆದ್ದಲ್ಲಿ ಅಭಿವೃದ್ಧಿಯ ಜೊತೆಜೊತೆಗೆ ಜಿಲ್ಲೆಯಲ್ಲಿ ಕೋಮುಸಾಮರಸ್ಯದಿಂದ ಜನರ ಬದುಕು ಸುಗಮವಾಗಲಿದೆ ಎಂದರು.
Related Articles
Advertisement
ಕಾಂಗ್ರೆಸ್ ಬಂದರೆ ಎಲ್ಲವೂ ಹಾಳಾಗುತ್ತದೆ ಎಂಬ ರೀತಿಯಲ್ಲಿ ಬಿಜೆಪಿಯವರು ಮನೆ ಮನೆಗೆ ಹೋಗಿ ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ಕಾಂಗ್ರೆಸ್‌ನಿಂದ ಜನರಿಗೆ ಒಳ್ಳೆಯದೇ ಆಗಲಿದೆ, ಇಂತಹ ಅಪಪ್ರಚಾರಕ್ಕೆ ಜನರು ಗಮನ ಕೊಡದೆ ಕಾಂಗ್ರೆಸ್ ಅನ್ನು ಆರಿಸಬೇಕಾಗಿದೆ ಎಂದರು. ಕಾಂಗ್ರೆಸ್ ನಾಯಕಿಯರಾದ ಅಪ್ಪಿ, ಶಾಂತಲಾ ಗಟ್ಟಿ, ಜೆಸಿಂತಾ ಆಲ್ಪ್ರೇಡ್, ಚಂದ್ರಕಲಾ ಜೋಗಿ ಹಾಜರಿದ್ದರು.
ಕಾಂಗ್ರೆಸ್ ಗ್ಯಾರಂಟಿಯಲ್ಲಿ ಮಹಿಳೆಗೆ ಆದ್ಯತೆಕಾಂಗ್ರೆಸ್ ಈಗಾಗಲೇ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರನ್ನೇ ಮುಖ್ಯವಾಗಿ ಪರಿಗಣಿಸಲಾಗಿದೆ, ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಮಹಿಳೆಗೆ ಮಾಸಿಕ 2000 ರೂ, ಗೃಹಜ್ಯೋತಿಯಲ್ಲಿ 200 ಯುನಿಟ್ ಉಚಿತ ವಿದ್ಯುತ್, ಮೊನ್ನೆ ರಾಹುಲ್ ಗಾಂಧಿಯವರು ಮಂಗಳೂರಿಗೆ ಬಂದಾಗ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಜನೆಯನ್ನೂ ಘೋಷಿಸುವ ಮೂಲಕ ದುಡಿಯುವ ಮಹಿಳೆಯರ ನೆರವಿಗೆ ಬರಲು ಮುಂದಾಗಿದ್ದಾರೆ. ಜನರು ಹಿಂದಿನ ಕಾಂಗ್ರೆಸ್ ಸರಕಾರ ಇದ್ದಾಗ ಬದುಕು ಯಾವ ರೀತಿ ಇತ್ತು, ಈಗ ಯಾವ ರೀತಿ ಇದೆ ಎನ್ನುವುದನ್ನು ಹೋಲಿಸಿ ನೋಡಿ ಯಾವ ಆಡಳಿತ ಬೇಕೆನ್ನುವುದನ್ನು ತೀರ್ಮಾನಿಸಲಿ ಎಂದೂ ನುಡಿದರು.