Advertisement

Congress Govt.ಸುಳ್ಳು ಹೇಳಲು ಬಜೆಟ್‌ ಅಧಿವೇಶನ ಬಳಕೆ: ಕೋಟ ಶ್ರೀನಿವಾಸ ಪೂಜಾರಿ

12:44 AM Mar 02, 2024 | Team Udayavani |

ಬೆಂಗಳೂರು: ರಾಜ್ಯದ ಜನರಿಗೆ ತಪ್ಪು ಸಂದೇಶ ನೀಡಲು ಹಾಗೂ ಸುಳ್ಳು ಹೇಳುವುದಕ್ಕಾಗಿ ಈ ಬಾರಿಯ ರಾಜ್ಯಪಾಲರ ಭಾಷಣ ಮತ್ತು ಸಂಪೂರ್ಣ ಬಜೆಟ್‌ ಅಧಿವೇಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ರಾಜ್ಯದ ಜನರನ್ನುತಪ್ಪು ದಾರಿಗೆ ಎಳೆಯಲು ಮತ್ತು ಜನತೆಗೆ ಸುಳ್ಳು ಮಾಹಿತಿ ನೀಡಲು ಇಡೀ ಸದನವನ್ನು ಸರಕಾರ ಬಳಸಿಕೊಂಡಿತ್ತು. ಕೆಂಗಲ್‌ ಹನು ಮಂತಯ್ಯ ಅವರು ನಿರ್ಮಿಸಿದ ವಿಧಾನಸೌಧದಲ್ಲಿ ಪಾಕಿಸ್ಥಾನ ಪರಘೋಷಣೆ ಹಾಕಿದರೂ ಆರೋಪಿ ಗಳನ್ನು ಬಂಧಿಸಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next