ತೀರ್ಥಹಳ್ಳಿ : ಕಾಂಗ್ರೆಸ್ ಪಕ್ಷ ಹಲವು ಗ್ಯಾರೆಂಟಿ ಯೋಜನೆಗಳ ಮೂಲಕ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಿತ್ತು ಅದರಿಂದ ಮಲೆನಾಡು ಭಾಗದ ರೈತರಿಗೆ ತೀವ್ರ ರೀತಿಯಲ್ಲಿ ತೊಂದರೆ ಆಗುತ್ತಿದ್ದು ಅಡಕೆ ಬೆಳಗಾರರಿಗೆ ಸಂಕಷ್ಟ ಬಂದಿದೆ. ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್ ಹೆಸರಿನಲ್ಲಿ ರೈತರ ಜೀವ ಕಸಿಯುತ್ತಿದೆ. ಈ ಕಾರಣಕ್ಕೆ ನ.27 ರ ಸೋಮವಾರದಂದು ರೈತರ ಪರವಾಗಿ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಗೃಹಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಸರ್ಕಾರಕ್ಕೆ ಅಡಕೆಯಿಂದ ತೆರಿಗೆ ರೂಪದಲ್ಲಿ ರಾಜ್ಯಸರ್ಕಾರಕ್ಕೆ ಪ್ರತಿವರ್ಷ ನೂರಾರು ಕೋಟಿ ರೂ ಗಳ ಹಣ ಸಂಧಾಯವಾಗುತ್ತದೆ. ಕೆಲಸಕ್ಕೆ ಜನ ಸಿಗದ ಕಾರಣ ಸ್ವಲ್ಪ ತೋಟ ಇದ್ದವರು ಕೂಡ ಅಡಕೆ ಸುಲಿಯುವ ಯಂತ್ರ ಇಟ್ಟುಕೊಂಡಿರುತ್ತಾರೆ. ಮನೆಯ ವಿದ್ಯುತ್ ಗೆ ಯಂತ್ರವನ್ನು ಹಾಕಿ ಕೆಲಸ ಮಾಡುತ್ತಾರೆ. ಇದು ಅನೇಕ ವರ್ಷಗಳಿಂದ ನೆಡೆದುಕೊಂಡು ಬರುತ್ತಿದೆ. ಆದರೆ ಈಗ ಅಡಕೆ ಸುಲಿಯುವ ಯಂತ್ರದ ವಿಚಾರವಾಗಿ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿಚಿತ್ರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಯಿಂದ ಅಡಕೆ ಬೆಳೆಗಾರರಿಗೆ ಹಿಂಸೆ ನೀಡುತ್ತಿದ್ದಾರೆ. ಉಚಿತ ವಿದ್ಯುತ್ ಕೊಡುತ್ತೇನೆ ಎಂದು ಹೇಳಿ ವಿದ್ಯುತ್ ಕಂಪನಿಗಳಿಗೆ ಹಣ ಕಟ್ಟದೆ ಕಂಪನಿ ಗಳು ಸಿಬ್ಬಂದಿಗಳಿಗೆ ಸಂಬಳ ನೀಡಲಾಗದೆ ಈಗ ರೈತರನ್ನು ಸುಲಿಗೆ ಮಾಡಲು ಹೊರಟಿದ್ದಾರೆ. ಯಾರು ಮನೆ ಮೀಟರ್ ನಲ್ಲಿ ಯಂತ್ರ ಉಪಯೋಗ ಮಾಡುತ್ತಿದ್ದರೋ ಅವರಿಗೆ ತೊಂದರೆ ನೀಡಬಾರದು ಹಾಗೂ ಹೊಸ ಕಲೆಕ್ಷನ್ ತೆಗೆದುಕೊಳ್ಳದಂತೆ ಸರ್ಕಾರ ಆದೇಶ ನೀಡಬೇಕು ಎಂದರು.
ಈ ಕಾರಣಕ್ಕೆ ರೈತ ಮೋರ್ಚಾ ವತಿಯಿಂದ ಸೋಮವಾರ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ, ತಾನು ಅಧಿಕಾರಕ್ಕೆ ಬರಬೇಕೆಂದು ಗ್ಯಾರೆಂಟಿ ನೆಪದಲ್ಲಿ ರೈತರ ಸುಲಿಗೆ ಮಾಡುತ್ತಿದ್ದು ಸರ್ಕಾರ ಮುಂದಿನ ದಿನಗಳಲ್ಲಿ ಎಚ್ಚೆತ್ತು ಕೊಳ್ಳದಿದ್ದರೆ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವ ಕೆಲಸ ನೆಡೆಸುತ್ತೇವೆ ಎಂದು ವಾಗ್ದಾಳಿ ನೆಡೆಸಿದರು.
ವಿರೋಧ ಪಕ್ಷದ ನಾಯಕ ಸ್ಥಾನದ ವಿಷಯ ಮಾತನಾಡಿ ಈ ವಿಚಾರದಲ್ಲಿ ತ್ಯಾಗ ಬಲಿದಾನ ಏನು ಇಲ್ಲ. ನಮ್ಮ ಹಿರಿಯರು ಯೋಚನೆ ಮಾಡಿ ಮಾಡಿದ್ದಾರೆ ಶಾಸಕಂಗ ಪಕ್ಷದಲ್ಲಿ ನಾವು ಅನುಮೋದನೆ ಮಾಡಿದ್ದೇವೆ ಎಂದರು.