ಚೇಳೂರು: ರಾಜ್ಯದಲ್ಲಿ ಮಳೆ ಇಲ್ಲದೆ ಬೆಳೆಗಳೆಲ್ಲ ನಷ್ಟವಾಗುತ್ತಿದೆ, ಜತೆಗೆ ವಿದ್ಯುತ್ ನ ಸಮಸ್ಯೆಯೂ ಸಹ ಹೆಚ್ಚಾಗಿದ್ದು ರೈತರ ಪರ ಎಂದು ಹೇಳಿಕೊಳ್ಳುವ ಸರಕಾರ ಸತ್ತಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಿಡಿ ಕಾರಿದ್ದಾರೆ.
ಗ್ರಾಮದ ಎಪಿಎಂಸಿ ಆವರಣದಲ್ಲಿ ನಡೆದ ರೈತರೊಂದಿಗೆ ಸಂವಾದ ಬರ ಅಧ್ಯಯನ ಪ್ರವಾಸದ ಕಾರ್ಯಕ್ರಮದಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದು ಇಂತಹ ಬರದ ಪರಿಸ್ಥಿತಿಯಲ್ಲಿ ಜನಗಳ ಕಷ್ಟ ಸುಖ ತಿಳಿದುಕೊಳ್ಳುವ ಪ್ರವಾಸವನ್ನು ಮಾಡುತ್ತಿಲ್ಲ. ನನಗೆ 81 ವರ್ಷವಾದರೂ ಜನಗಳ ಕಷ್ಟ ಸುಖ ಕೇಳಲು ನಾನು ನಮ್ಮ ನಾಯಕರೊಂದಿಗೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ ಎಂದರು.
ಈಗ ಮಳೆ ಇಲ್ಲ,ಜತೆಗೆ ವಿದ್ಯುತ್ ನ ಸಮಸ್ಯೆ ಹೆಚ್ಚಾಗಿದೆ ವಿದ್ಯುತ್ ಸರಿಯಾಗಿ ನೀಡಿದರೆ ಅಲ್ಪ ಸ್ವಲ್ಪ ಕೊಳವೆ ಬಾವಿಯ ಮುಖಾಂತರ ನೀರನ್ನು ಬಿಟ್ಟುಕೊಂಡು ಬೆಳೆಗಳನ್ನು ರಕ್ಷಿಸಿಕೊಳ್ಳಬಹುದಾಗಿತ್ತು. ಇಂತಹ ಯಾವುದೇ ಜನಪರ ಕಾರ್ಯಕ್ರಮಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಇದನ್ನು ಬಿಟ್ಟು ಪ್ರಧಾನಿ ಮೋದಿ ಅವರ ಮೇಲೆ ಟೀಕೆಗಳನ್ನು ಮಾಡುವುದು ಎಷ್ಟರಮಟ್ಟಿಗೆ ಸರಿಯಾಗಿದೆ.ಮೊದಲು ತಾವು ರಾಜ್ಯದ ಜನರ ಕಷ್ಟ ಸುಖಕ್ಕೆ ಸ್ಪಂದಿಸಿ ಬೇಕಾಗಿದೆ ಎಂದರು.
ರಾಜ್ಯದ ಜನರು ಬೆಂಬಲ ಸಹಕಾರ ನೀಡಿದರೆ ರಾಜ್ಯ ಸರ್ಕಾರದ ವಿರುದ್ಧ ಮುಂದೆ ನಾನು ಸತ್ಯಾಗ್ರಹ ಮಾಡುತ್ತೇನೆ ನೀವುಗಳು ಸಹಕಾರ ನೀಡಬೇಕಾಗಿದೆ ಎಂದರು.
ಗುಬ್ಬಿ ತಾಲೂಕಿನ ಬಗ್ಗೆ ಪ್ರಾಸ್ತಾವಿಕ ನುಡಿಯನ್ನು ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಈ ಭಾಗದ ಜನರ ಅದರಲ್ಲೂ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ವಿಸ್ತಾರವಾಗಿ ಹೇಳಿದರು. ಈ ಕಾರ್ಯಕ್ರಮದಲ್ಲಿ ರೈತರದ ಗಂಗಾಧರಪ್ಪ,ಮಂಜುನಾಥ್, ಅಜಯ್, ಶಿವಕುಮಾರ್, ಹೇಮಂತ್ ಕುಮಾರ್ ಜಯಮ್ಮ ಇವರುಗಳು ಈ ಭಾಗದಲ್ಲಿ ಸಾರ್ವಜನಿಕರಿಗೆ ರೈತರಿಗೆ ಆಗುತ್ತಿರುವ ಕಷ್ಟ ಗಳ ಬಗ್ಗೆ ಹೇಳಿದರು.
ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಅಲ್ಲಿನ ರಾಗಿ ಬೆಳೆ ಬಗ್ಗೆ ವೀಕ್ಷಣ ನಡೆಸಿದರು.
ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿ ಗಣೇಶ್ ಸುರೇಶ್ ಗೌಡ, ಮಾಜಿ ಸಂಸದ ಎಸ್ .ಪಿ. ಮುದ್ದುಹನುಮೇಗೌಡ, ಮಾಜಿ ಸಚಿವರಾದ ನಾಗೇಶ್,ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್, ಮುಖಂಡರಾದ ರವಿಕುಮಾರ್, ನಂದೀಶ್ ಭೈರಪ್ಪ, ವಿನಯ್ ಚಿದಾನಂದ ಹಾಗೂ ಇತರ ಮುಖಂಡರುಗಳು ಭಾಗವಹಿಸಿದ್ದರು.