Advertisement

Congress ಸರಕಾರಕ್ಕೆ ಹಗರಣದಿಂದ ಹೊರ ಬರಲಾಗುತ್ತಿಲ್ಲ: ವಿಪಕ್ಷ ನಾಯಕ ಅಶೋಕ್‌

01:27 AM Jul 22, 2024 | Team Udayavani |

ಸಕಲೇಶಪುರ: ರಾಜ್ಯ ಸರಕಾರದ ಪ್ರಮುಖ ಹಗರಣಗಳು ದಲಿತರನ್ನು ಲೂಟಿ ಮಾಡಿರುವುದೇ ಆಗಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಸರಕಾರವನ್ನು ಟೀಕಿಸಿದರು.

Advertisement

ತಾಲೂಕಿನಲ್ಲಿ ಮಳೆ ಹಾನಿ ಹಿನ್ನೆಲೆಯಲ್ಲಿ ಕೊಲ್ಲಹಳ್ಳಿ ಹಾಗೂ ದೊಡ್ಡತಪ್ಪಲೆ ಸಮೀಪ ರಾಷ್ಟ್ರೀಯ ಹೆದ್ದಾರಿ 75ರ ತಡೆಗೋಡೆ ಕುಸಿತ ವೀಕ್ಷಿಸಿದ ಅನಂತರ ಮಾತನಾಡಿ, ರಾಜ್ಯ ಸರಕಾರ ಹಗರಣಗಳಲ್ಲಿ ಸಿಲುಕಿಕೊಂಡಿದೆ. ಅದರಿಂದ ಹೊರಬರಲಾಗುತ್ತಿಲ್ಲ, ಮಳೆ ಹಾನಿಗೆ ಪರಿಹಾರ ಕೊಡಲು ಇನ್ನೂ ಶುರು ಮಾಡಿಲ್ಲ. ಈಗ ಗ್ಯಾರಂಟಿಗಾಗಿ ದಲಿತರ ಹಣ ಉಪಯೋಗಿಸಿಕೊಂಡಿ¨ªಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ ಎಂಬ ಕಾರಣಕ್ಕೆ ವಿಧಾನಸಭೆಯಲ್ಲಿ ಬಿಜೆಪಿ ಮಾತನಾಡಲು ಬಿಡುತ್ತಿಲ್ಲ ಎಂಬ ಸಚಿವ ಕೆ.ಎನ್‌. ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಜಾತಿಯವನಾದರೆ ಕಳ್ಳತನ ಮಾಡಬಹುದು, ಈ ಜಾತಿಯವನಾದರೆ ಕಳ್ಳತನ ಮಾಡಬಾರದು ಎಂದು ಸಂವಿಧಾನದಲ್ಲಿ ಇದೆಯಾ? ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮನೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರೆ ಏನು ಪ್ರಯೋಜನ ಆಗಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್‌ ಬಂದರೆ ಪ್ರಯೋಜನ ಆಗುತ್ತೆ ಅಂದರೆ ಅವರು ಮನೆ ಬಿಟ್ಟು ಬರಬೇಕು ಎಂದರು.

ಸಿದ್ದರಾಮಯ್ಯ ಸಿಬಿಐ ತನಿಖೆ ಎದುರಿಸಲಿ: ಸಚಿವ ಜೋಶಿ
ಬೆಳಗಾವಿ: ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ಸಿಬಿಐ ತನಿಖೆ ಎದುರಿಸಬೇಕು. ಶುದ್ಧಹಸ್ತರಾದರೆ ಕಾಂಗ್ರೆಸ್‌ ಮತ್ತೆ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗಾರರ ಜತೆ ಅವರು ಮಾತನಾಡಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ಹೆಸರು ಕೇಳಿ ಬಂದಿದೆ. ನಿಮ್ಮ ಕಳ್ಳ ಸ್ನೇಹಿತರ ಹೆಸರಿಗೆ ಹಣ ವರ್ಗಾವಣೆ ಆಗಿದೆ. ಬ್ಯಾಂಕಿನ ಅಧಿಕಾರಿ ಶಾಮೀಲಾಗಿದ್ದರೆ ಕ್ರಮ ಆಗುತ್ತದೆ. ನೀವು ಏನೂ ತಪ್ಪು ಮಾಡಿಲ್ಲ ಎಂದಾದರೆ ಸಿಬಿಐಗೆ ಒಪ್ಪಿಸಲು ಏಕೆ ಹೆದರುತ್ತಿದ್ದೀರಿ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next