Advertisement

ಹಗರಣದಲ್ಲೇ ಮುಳುಗಿದೆ ಕಾಂಗ್ರೆಸ್‌ ಸರ್ಕಾರ: ಪಿ. ರಾಜೀವ್‌

06:14 PM Sep 16, 2024 | Team Udayavani |

ಉದಯವಾಣಿ ಸಮಾಚಾರ
ಸೇಡಂ: ಹೋರಾಟದ ಗುಣ, ಜನರ ಸತತ ಒಡನಾಟ ಹಾಗೂ ಸಾಮಾಜಿಕ ಕಳಕಳಿ ಮನೋಭಾವ ಹೊಂದಿದವರು ಮಾತ್ರ ನಾಯಕರಾಗಲು ಸಾಧ್ಯವಾ ಗುತ್ತದೆ ಎಂದು ಕುಡಚಿ ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಹೇಳಿದರು.

Advertisement

ಪಟ್ಟಣದ ಮೋತಕಪಲ್ಲಿಯಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ಹಗರಣಗಳಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದೆ. ಯಾವಾಗ ಸರ್ಕಾರ ಬಿದ್ದು ಹೋಗುತ್ತದೆಯೋ ಗೊತ್ತಿಲ್ಲ. ಅಭಿವೃದ್ಧಿಯಂತೂ ಸಂಪೂರ್ಣ ಮರಿಚಿಕೆಯಾಗಿದೆ ಎಂದರು. ಸಿಎಂ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ಗುದ್ದಾಟ ಜೋರಾಗಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಳ್ಳಹಿಡಿದಿದ್ದು, ಒಂದಿಲ್ಲೊಂದು ಗಲಭೆ ನಡೆಯುತ್ತಲೇ ಇವೆ. ಕೆಲವರು ಏನೇ ಮಾಡಿದರೂ ಸರ್ಕಾರದ ಕಣ್ಣಿಗೆ ಅಮಾಯಕರಂತೆ ಕಾಣುತ್ತಾರೆ.

ಕಾಂಗ್ರೆಸ್‌ ನಾಯಕರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯವಾಗುತ್ತದೆ ಎಂದರು. ಸೇಡಂ ಮತಕ್ಷೇತ್ರದ ಶಾಸಕರು ಆಯ್ಕೆಯಾಗಿ
ಎರಡು ವರ್ಷ ಕಳೆಯುತ್ತಿದ್ದರೂ ಒಂದು ನಯಾ ಪೈಸೆ ಅನುದಾನ ತಂದಿಲ್ಲ. ಹಿಂದೆ ಶಾಸಕರಾಗಿದ್ದ ರಾಜಕುಮಾರ ಪಾಟೀಲ ಅವರು ತಂದ ಅನುದಾನದ ಕಾಮಗಾರಿಗಳನ್ನು ಮಾಡುತ್ತಿದ್ದಾರೆ.

ರಾಜಕುಮಾರ ಪಾಟೀಲ ಕ್ರಿಯಾಶೀಲ ಶಾಸಕರಾಗಿದ್ದರು. ಸೇಡಂ ಜನತೆ ಅವರ ಅಭಿವೃದ್ಧಿಕಾರ್ಯ, ಕ್ಷೇತ್ರದ ಮೇಲೆ ಅವರಿಗಿರುವ
ಅಪಾರ ಕಾಳಜಿ ಅರಿಯಲಿಲ್ಲ ಎನಿಸುತ್ತದೆ ಎಂದು ವಿಷಾಧ ವ್ಯಕ್ತಪಡಿಸಿದರು.

Advertisement

ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್‌ ಮಾತನಾಡಿ, ಒಟ್ಟಾರೆ ಸೇಡಂ ಮತಕ್ಷೇತ್ರದಲ್ಲಿ ಒಂದು ಲಕ್ಷ ಸದಸ್ಯತ್ವ ಗುರಿ
ಹೊಂದಲಾಗಿದೆ. ನಮ್ಮ ಕಾರ್ಯಕರ್ತರು ಈ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಬೇಕು. ಪ್ರತಿ ಕಾರ್ಯಕರ್ತರು ತಮ್ಮ ಹಳ್ಳಿ, ಗಲ್ಲಿಯ ಪ್ರತಿ ಮನೆಗೆ ಭೇಟಿ ನೀಡಿ ಕನಿಷ್ಟ 200 ಸದಸ್ಯತ್ವ ಮಾಡಿಸಬೇಕು ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಶರಣು ಮೆಡಿಕಲ್‌, ಪ್ರಧಾನ ಕಾರ್ಯದರ್ಶಿ ತಿರುಪತಿ ಶಹಾಬಾದಕರ್‌, ಮಹಿಪಾಲರೆಡ್ಡಿ ಪಾಟೀಲ,
ವಿಜಯಕುಮಾರ ಆಡಕಿ, ಓಂಪ್ರಕಾಶ ಪಾಟೀಲ, ಗೋವಿಂದ ಯಾಕಂಬ್ರಿ, ರಾಜು ಮದರಿ, ವಿಜಯಕುಮಾರ ಖೆವಜಿ, ಬನ್ನಪ್ಪ ಕುಂಬಾರ, ಜಗದೇವಪ್ಪ ಸಾಹುಕಾರ, ಕೋನರೆಡ್ಡಿ ಕೋಲಕುಂದಾ, ಪಂಡರಿ ಇಟಕಾಲ್‌, ತಿರುಪತಿರೆಡ್ಡಿ ಬುರಗಪಲ್ಲಿ, ಬನ್ನಪ್ಪ ಶಕಲಾಸಪಲ್ಲಿ, ಚಂದ್ರಶೇಖರ ಗೌಡ, ರಾಮುಲು ಕೋನಾಪೂರ, ವಿನೋದ ಸಾಹುಕಾರ ದುಗನೂರ, ರಾಮುಲು ಕಾನಾಗಡ್ಡ, ಬುಗ್ಗಾರೆಡ್ಡಿ, ನವಾದರೆಡ್ಡಿ, ರಾಘು ಪಾಕಲ್‌, ವೇಣು ಪಾಟೀಲ, ಲಾಲಪ್ಪ ಇಟಕಾಲ, ಜಾಕಿರ ಯಾನಾಗುಂದಿ, ಶೇಖರ ಮಲ್ಕಾಪಲ್ಲಿ, ಸುನೀಲ ಕಡಚೆರ್ಲಾ, ಅಶೋಕ ಕುಂಬಾರ, ಮೋಹನರೆಡ್ಡಿ, ಜನಾರ್ಧನರೆಡ್ಡಿ, ನಾರಾಯಣ ರೆಡ್ಡಿ, ಯಂಕುನಾಯಕ, ಲಕ್ಷಣ, ರಾಜಪ್ಪ, ಕನಕಪ್ಪ, ಬಸಪ್ಪ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next