Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮೀ ಯೋಜನೆ, ವೃದ್ಧಾಪ್ಯ ವೇತನ ಹಣ ಜಮಾ ಆಗಿಲ್ಲ. ಪೆಟ್ರೋಲ್, ಡೀಸೆಲ್, ಹಾಲಿನ ದರ ಹೆಚ್ಚಳ ಮಾಡಲಾಗಿದೆ ಎಂದರು.
ಈ ಹಿಂದೆ ಒಂದು ಕೆಜಿ ಅಕ್ಕಿಗೆ 34 ರೂ. ಇದ್ದ ದರವನ್ನು ಈಗ 28 ರೂ.ಗೆ ಇಳಿಸಿದ್ದು, ಶೀಘ್ರವೇ ಅಕ್ಕಿ ವಿತರಣೆ ಪುನಾರಂಭಿಸಲಾಗುವುದು. ಸಿಎಂ ಸಿದ್ದರಾಮಯ್ಯ ಕಳೆದ ವರ್ಷ ಅಕ್ಕಿ ಕೇಳಿದಾಗ ನಾವು ಬಫರ್ ಸ್ಟಾಕ್‌ಗೆ ಬಹಳ ಹತ್ತಿರ ಇದ್ದೆವು. ಎಲ್‌ನಿನೋ, ಮಳೆ ಅಭಾವ-ಬರದಿಂದ ಅಕ್ಕಿ ಸಂಗ್ರಹ ಕಡಿಮೆಯಾಗುತ್ತದೆಂಬ ಆತಂಕ ಭಾರತ ಮಾತ್ರವಲ್ಲ ಜಗತ್ತಿನ ಎಲ್ಲಾ ದೇಶಗಳಲ್ಲಿತ್ತು. ಹೀಗಾಗಿ 2023ರ ಜೂ. 13ಕ್ಕೆ ಓಪನ್ ಮಾರ್ಕೆಟ್ ಸಪೋರ್ಟ್ ಸಿಸ್ಟಮ್(ಒಎಂಎಸ್‌ಎಸ್)ನಲ್ಲಿ ನಾವು ಅದನ್ನು ನಿಲ್ಲಿಸಿದ್ದೆವು. ಇದೀಗ ಕೇಂದ್ರದ ಬಳಿ 330 ಲಕ್ಷ ಮೆಟ್ರಿನ್ ಟನ್ ಅಕ್ಕಿ ಸಂಗ್ರಹ ಆಗಿರುವುದರಿಂದ ಈಗ ಒಎಂಎಸ್‌ಎಸ್‌ನಲ್ಲಿ ರಾಜ್ಯಕ್ಕೂ, ಖಾಸಗಿಯವರಿಗೂ ಅಕ್ಕಿ ನೀಡಲು ಅವಕಾಶ ನೀಡಿದ್ದೇವೆ ಎಂದರು.