Advertisement

ಸ್ವಗ್ರಾಮದಲ್ಲಿ ಕಾಂಗ್ರೆಸ್‍ ಗೆ ಹೆಚ್ಚುಸ್ಥಾನ ಚಾಮರಾಜನಗರ ಕಾಂಗ್ರೆಸ್‍ ಅಧ್ಯಕ್ಷ ಮರಿಸ್ವಾಮಿ

01:56 PM Feb 03, 2021 | Team Udayavani |

ಚಾಮರಾಜನಗರ: ತಮ್ಮ ಸ್ವಗ್ರಾಮ ನಂಜೇದೇವನಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರವರ್ಗದಲ್ಲಿ ಕಾಂಗ್ರೆಸ್‍ ಬೆಂಬಲಿತ ಸದಸ್ಯರಾರೂ ಇರಲಿಲ್ಲ. ಹೀಗಾಗಿ ಬಿಜೆಪಿ ಅಧಿಕಾರಕ್ಕೇರಲು ಸಾಧ್ಯವಾಯಿತು ಎಂದು ಜಿಲ್ಲಾ ಕಾಂಗ್ರೆಸ್‍ ಅಧ್ಯಕ್ಷ ಪಿ. ಮರಿಸ್ವಾಮಿ ತಿಳಿಸಿದ್ದಾರೆ.

Advertisement

ಜಿಲ್ಲಾ ಕಾಂಗ್ರೆಸ್‍ ಅಧ್ಯಕ್ಷರ ಸ್ವಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಎಂಬ ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸದರಿ ಗ್ರಾ.ಪಂ.ನಲ್ಲಿ ಒಟ್ಟು 21 ಸ್ಥಾನಗಳಿದ್ದು, ಕಾಂಗ್ರೆಸ್‍ ಮತ್ತು ಬಿಜೆಪಿ ಬೆಂಬಲಿತರು ತಲಾ 9 ಸ್ಥಾನಗಳಲ್ಲಿ ಜಯಗಳಿಸಿದ್ದರು. 3 ಪಕ್ಷೇತರ ಅಭ್ಯರ್ಥಿಗಳಿದ್ದರು. ಅಧ್ಯಕ್ಷ ಸ್ಥಾನ ಎಸ್‍ಸಿ ಮಹಿಳೆ ಪ್ರವರ್ಗಕ್ಕೆ ನಿಗದಿಯಾಗಿತ್ತು. ಕಾಂಗ್ರೆಸ್‍ನಿಂದ ಗೆದ್ದವರಲ್ಲಿ ಆ ಪ್ರವರ್ಗದ ಅಭ್ಯರ್ಥಿ ಇರಲಿಲ್ಲ ಎಂದರು.

ಇದನ್ನೂ ಓದಿ:ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸ್ವಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಹಿಡಿದ ಬಿಜೆಪಿ!

ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್‍ ಹಾಗೂ ಬಿಜೆಪಿ ಬೆಂಬಲಿತರು ಸಮಬಲದಲ್ಲಿದ್ದರು. ಆದರೆ ನನ್ನ ಸ್ವಗ್ರಾಮ ನಂಜದೇವನಪುರದ 5 ವಾರ್ಡ್‍ಗಳಲ್ಲಿ 1 ಅವಿರೋಧ ಆಯ್ಕೆ, ಚುನಾವಣೆ ನಡೆದ 4 ಸ್ಥಾನಗಳಲ್ಲಿ ಕಾಂಗ್ರೆಸ್‍ 3 ರಲ್ಲಿ ಜಯ ಗಳಿಸಿದೆ. 1 ಸ್ಥಾನ ಬಿಜೆಪಿ ಗೆದ್ದಿದೆ. ಹೀಗಾಗಿ ನನ್ನ ಸ್ವಗ್ರಾಮದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಅಲ್ಲದೇ, ಅದೇ ಗ್ರಾಮದವರಾದ ಬಿಜೆಪಿ ಮಂಡಲ (ತಾಲೂಕು) ಅಧ್ಯಕ್ಷರ ಇಬ್ಬರು ಬಂಧುಗಳೇ ಕಾಂಗ್ರೆಸ್ ಎದುರು ಸೋತಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಖಲಿಸ್ತಾನದ ಪರ ಬಿಜೆಪಿ ಕಾರ್ಯಕರ್ತರೇ ಕರಪತ್ರ ಹಂಚಿದ್ದರು: ರಾಮಲಿಂಗಾರೆಡ್ಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next