Advertisement

ಕಾಂಗ್ರೆಸ್‌ನಿಂದ ಚುನಾವಣೆ ಗಿಮಿಕ್‌:ತೇರದಾಳ ಶಾಸಕ ಸಿದ್ದು ಸವದಿ

05:26 PM Jul 20, 2021 | Team Udayavani |

ಬನಹಟ್ಟಿ: 5 ದಶಕಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್‌ ಪಕ್ಷ ಇದೀಗ ವಿಪಕ್ಷದಲ್ಲಿದ್ದಾಗ ನೇಕಾರರ ನೆನಪಿನೊಂದಿಗೆ ಚುನಾವಣೆ ಗಿಮಿಕ್‌ ಮಾಡುತ್ತಿದೆ. ಇವೆಲ್ಲವೂ ನೇಕಾರರಿಗೆ ಅರಿವಾಗುತ್ತದೆ. ಅಧಿಕಾರದಲ್ಲಿದಾಗಲೇ ನೇಕಾರ ಸಮುದಾಯಕ್ಕೆ ಏನೂ ನೀಡದ ಕಾಂಗ್ರೆಸ್‌ ಈಗೇನು ಮಾಡಲು ಸಾಧ್ಯ. ಬಿಜೆಪಿಯಿಂದಲೇ ನೇಕಾರರ ಸಂಕಷ್ಟಗಳ ಪರಿಹಾರವಾಗುತ್ತಿವೆ ಎಂದು ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ತೇರದಾಳ ಶಾಸಕ ಸಿದ್ದು ಸವದಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

Advertisement

ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೇರದಾಳ ಕ್ಷೇತ್ರದಲ್ಲಿ ನೇಕಾರರೊಂದಿಗಿನ ಸಂವಾದ ನಡೆಸಲು ಆಗಮಿಸಿದ್ದು, ಕಾಂಗ್ರೆಸ್‌ನ ಪ್ರಚಾರಕ್ಕೆ ಹೊರತು ನೇಕಾರರ ಕಳಕಳಿ ಹೊತ್ತು ಬಂದಿಲ್ಲ. ಆಡಳಿತ ಪಕ್ಷದಲ್ಲಿದ್ದಾಗಲೇ ಇಂದಿಗೂ ನೇಕಾರರ ಪರ ಧ್ವನಿ ಎತ್ತುತ್ತಿದ್ದೇನೆ. ಒಂದೇ ಒಂದು ಸಲವಾದರೂ ನನ್ನೊಂದಿಗೆ ಧ್ವನಿಗೂಡಿಸಿದ್ದರೆ ನೇಕಾರರ ನಿಜವಾದ ಕಳಕಳಿ ಎನ್ನಬಹುದು. ಆಡಳಿತ ಪಕ್ಷದಲ್ಲಿರುವ ನಾವೇ ನಾಲ್ಕೈದು ಶಾಸಕರು ನಿತ್ಯ ನೇಕಾರರ ಸಮಸ್ಯೆಗಳಿಗೆ ಧ್ವನಿಯಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿದೆ. ಈ ಸಂವಾದ ಬದಲಾಗಿ ಕಲಾಪದಲ್ಲಿ ಸಮಸ್ಯೆ ಪರಿಹರಿಸಿ ಎಂದು ಸವದಿ ತೀಕ್ಷ್ಣವಾಗಿ ಡಿಕೆಶಿಗೆ ಟಾಂಗ್‌ ನೀಡಿದರು.

ಒಂದೇ ಒಂದು ಉದಾಹರಣೆ ನೀಡಲಿ: ಪಾವರ್‌ಲೂಮ್‌ ನಿಗಮದ ಅಧ್ಯಕ್ಷನಿದ್ದಾಗ ವಿದ್ಯಾವಿಕಾಶ ಯೋಜನೆಯಲ್ಲಿ ಶೇ.20 ರಷ್ಟು ಬಟ್ಟೆ ಖರೀದಿಯಲ್ಲಿ ಹೆಚ್ಚಳ ಮಾಡಿತ್ತು. ಇದನ್ನು ರದ್ದು ಮಾಡಿದ್ದೇ ಕಾಂಗ್ರೆಸ್‌. ಸಾಲ ಮನ್ನಾ, ಬಡ್ಡಿ ಮನ್ನಾ, ರಿಯಾಯ್ತಿ ಸಾಲ, 1.25 ವಿದ್ಯುತ್‌ ಸಬ್ಸಿಡಿ ಹಾಗು ಶೇ.1 ಮತ್ತು 3 ಬಡ್ಡಿ ಆಕರಣೆ ನೇಕಾರನಿಗೆ ಸಾಲ ಬಿಜೆಪಿ ಸರ್ಕಾರದಲ್ಲಿದ್ದಾಗಲೇ ಮಾಡಿದೆ. 2 ಮಗ್ಗದ ಸಬ್ಸಿಡಿ ಜವಳಿ ಆಶ್ರಯ ಬಡನೇಕಾರಿಕೆ ಪುನರ್‌ ಪ್ರಾರಂಭ, ಸಂಧ್ಯಾ ಸುರಕ್ಷಾ, ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ “ನೇಕಾರ ಸಮ್ಮಾನ ಯೋಜನೆ’ಯಡಿ 2 ಸಾವಿರ ಮತ್ತು 3 ಸಾವಿರ ಸಹಾಯ ಧನ ಮಾಡಿದ್ದು ಯಡಿಯೂರಪ್ಪನವರ ಸರ್ಕಾರ. ಇವೆಲ್ಲವಿದ್ದಾಗ ಕಾಂಗ್ರೆಸ್‌ನ ಅವಧಿಯಲ್ಲಿ ನೇಕಾರರಿಗೆ ರೂಪಿಸಿದ ಸಹಾಯವನ್ನು ವೇದಿಕೆ ಮೂಲಕ ಒಂದೇ ಒಂದು ಉದಾಹರಣೆ ನೀಡಲಿ ಎಂದು ಸವದಿ ಹೇಳಿದರು.

ನಿಗಮ ಅವನತಿಗೆ ಕಾಂಗ್ರೆಸ್‌ ಕಾರಣ:
ರಾಜ್ಯದಲ್ಲಿ ಕಳೆದ 5 ವರ್ಷ ಕಾಂಗ್ರೆಸ್‌ ನಲ್ಲಿದ್ದಾಗ 32.65 ಕೋಟಿ ರೂ. ಗಳಷ್ಟು ಕೆಎಚ್‌ಡಿಸಿ ನಿಗಮವನ್ನು ಹಾನಿ ಮಾಡಿ ಅವನತಿಗೆ ತಂದಿದ್ದಾರೆ. ಇದೀಗ ಪುನಶ್ಚೇತನಗೊಳ್ಳುತ್ತಿದೆ. ಎಂ.ಡಿ. ಲಕ್ಷ್ಮೀನಾರಾಯಣ ಅವರನ್ನು ಬೆಳಕಿಗೆ ತಂದಿದ್ದೇ ಬಿಜೆಪಿ. ಇದೀಗ ಪಕ್ಷಕ್ಕೆ ದ್ರೋಹ ಬಗೆದು ಅಧಿಕಾರದ ಸ್ವಾರ್ಥಕ್ಕಾಗಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ಡಿಕೆಶಿ, ಉಮಾಶ್ರೀ ಅವರಿಗೆ ನೇಕಾರಿಕೆ ಬರುತ್ತದೆಯೇ? ನೇಕಾರ ಕುಲದಿಂದ ಬಂದರೆ ನೇಕಾರಿಕೆ ಬಂದಂತೆಯೇ?
ಹಾಗಿದ್ದಲ್ಲಿ ಸಚಿವರಾಗಿ, ಮಾಜಿ ಸಿಎಂ ಸಿದ್ದರಾಮಯ್ಯನವರ ಬಲಗೈ ಬಂಟರಾಗಿ ಕೆಲಸ ಮಾಡುವ ಸಂದರ್ಭ ನೇಕಾರರಿಗೆ ಯಾವ ಯೋಜನೆ ಜಾರಿ ತಂದಿದ್ದೀರಿ ಎಂದು ಉಮಾಶ್ರೀ ಅವರನ್ನು ಸವದಿ ಪ್ರಶ್ನಿಸಿದರು. ನಗರಸಭಾಧ್ಯಕ್ಷ ಶ್ರೀಶೈಲ ಬೀಳಗಿ, ರಾಜು ಅಂಬಲಿ, ಮಲ್ಲಿಕಾರ್ಜುನ ಬಾಣಕಾರ, ಜಿ.ಎಸ್‌. ಗೊಂಬಿ, ಮಹಾದೇವ ಮುನ್ನೋಳ್ಳಿ, ಸಿದ್ರಾಮಪ್ಪ ಸವದತ್ತಿ, ಬಸವರಾಜ ತೆಗ್ಗಿ, ನಾರಾಯಣ ಮಾಲಪಾನಿ, ಹಟ್ಟಿ ಸೇರಿದಂತೆ ಅನೇಕ ನೇಕಾರ ಮುಖಂಡರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next