Advertisement

15 ವರ್ಷಗಳ ಬಿಜೆಪಿ ಆಡಳಿತ ಕೊನೆ

05:41 PM Nov 11, 2020 | Suhan S |

ಮಾಲೂರು: ಬಿಜೆಪಿಯ ನಿರಂತರ 15 ವರ್ಷಗಳ ಆಡಳಿತಕ್ಕೆ ತಿಲಾಂಜಲಿ ಕೊಟ್ಟ ಕಾಂಗ್ರೆಸ್‌ ಪಕ್ಷ, ಜೆಡಿಎಸ್‌ಮತ್ತುಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಪುರಸಭೆಯ ಆಡಳಿತ ಚುಕ್ಕಾಣಿ ಹಿಡಿದಿದೆ.

Advertisement

ಒಟ್ಟು 27 ಸದಸ್ಯ ಬಲದ ಮಾಲೂರು ಪುರಸಭೆಗೆ ನಡೆದಸಾರ್ವತ್ರಿಕ ಚುನಾವಣೆಯಲ್ಲಿಕಾಂಗ್ರೆಸ್‌ನ 11, ಬಿಜೆಪಿ 10, ಜೆಡಿಎಸ್‌ 1, ಪಕ್ಷೇತರರು 5 ಮಂದಿಗೆಲುವು ಸಾಧಿಸಿದ್ದರು. ಈ ಪೈಕಿ ಪಕ್ಷೇತರ ಸದಸ್ಯ ಎನ್‌.ವಿ.ಮುರಳೀಧರ ಆರಂಭದಲ್ಲಿಯೇ ಶಾಸಕ ನಂಜೇಗೌಡರ ಒಡನಾಡಿ ಯಾಗಿ ಕಾಂಗ್ರೆಸ್‌ ಪಕ್ಷ ಬೆಂಬಲಿಸಿದ್ದರು.

ವಾರ್ಡ್‌ಸಂಖ್ಯೆ 4ಮೀಸಲುಕ್ಷೇತ್ರದಿಂದ ಎರಡನೇ ಬಾರಿ ಅಯ್ಕೆಯಾಗಿದ್ದ ಎನ್‌.ವಿ. ಮುರಳೀಧರ ಕಾಂಗ್ರೆಸ್‌ ನಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರೆ,ಕಾಂಗ್ರೆಸ್‌ ನ ಹಿಂದುಳಿದ ವರ್ಗದ ಸದಸ್ಯೆ ಭಾರತೀ ಶಂಕರಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ಅನಿತಾ ನಾಗರಾಜು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್‌ 19ರ ಸದಸ್ಯೆ ಮಂಜುಳಾ ನಾಮಪತ್ರ ಸಲ್ಲಿಸಿದ್ದರು.

15 ಮಂದಿ ಹಕ್ಕು ಚಲಾವಣೆ: ಚುನಾವಣೆ ಪ್ರಕ್ರಿಯೆ ನಡೆದು ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಶಾಸಕರಮತವೂ ಸೇರಿ 15 ಮಂದಿ ತಮ್ಮ ಹಕ್ಕು ಚಲಾಯಿಸಿದರು. ಬಿಜೆಪಿ ಪರವಾಗಿ ಸಂಸದ ಎಸ್‌ ಮುನಿಸ್ವಾಮಿ ಮತ್ತು ಮೂರು ಮಂದಿ ಪಕ್ಷೇತರ ಸದಸ್ಯರ ಮತಗಳಿಂದ 13 ಮತಗಳು ದಾಖಲಾಗಿದ್ದವು. ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್‌ ಎಂ. ಮಂಜುನಾಥ್‌, ಕಾಂಗ್ರೆಸ್‌ನ ಮುರಳೀಧರ ಹಾಗೂ ಭಾರತೀ ಶಂಕರಪ್ಪ ಅವರ ಆಯ್ಕೆ ಪ್ರಕಟಿಸಿದ್ದಾರೆ. ವಾರ್ಡ್‌ 8ರಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವುಸಾಧಿಸಿದ್ದ ವಿಜಯ ಲಕ್ಷ್ಮೀ ಕೃಷ್ಣಪ್ಪ ಚುನಾವಣೆಯಲ್ಲಿ ಗೈರು ಹಾಜರಾಗಿದ್ದರು.

ಪೊಲೀಸ್ಬಂದೋಬಸ್ತ್: ಕೋಲಾರ ಕ್ಷೇತ್ರದ ಸಂಸದರಾದ ಎಸ್‌.ಮುನಿಸ್ವಾಮಿ ಮತ್ತು ಕ್ಷೇತ್ರದ ಶಾಸಕ ಕೆ. ವೈ.ನಂಜೇಗೌಡ ಅವರು ಒಂದೇ ಹೋಬಳಿಗೆ ಸೇರಿದವರಾದ ಕಾರಣ ಇಬ್ಬರ ನಡುವೆ ಪರಸ್ಪರ ರಾಜಕೀಯ ಚಟುವಟಿಕೆಗಳು ಜಿದ್ದಾಜಿದ್ದಿಗೆ ಕಾರಣವಾಗಿ ಪ್ರತಿಷ್ಠೆಯಾಗಿ ಸ್ವೀಕರಿಸಿದ ಕಾರಣ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆ ಮಹತ್ವ ಪಡೆದುಕೊಂಡಿತ್ತು. ಪಟ್ಟಣದಾದ್ಯಂತ 144ರ ಕಲಂನ ಅನ್ವಯ ನಿಷೇಧಾಜ್ಞೆ ಹೊರಡಿಸಿ ಪೊಲೀಸ್‌ ಬಂದೋಬಸ್ತು ಒದಗಿಸಿದ್ದರು. ಎಸ್ಪಿ ಜಾಹ್ನವಿ ಸ್ಥಳದಲ್ಲಿ ಮೊಕ್ಕಂ ಹೂಡಿ ಭದ್ರತೆ ಉಸ್ತುವಾರಿ ವಹಿಸಿದ್ದರು.

Advertisement

15 ವರ್ಷಗಳ ಸುದೀರ್ಘಆಡಳಿತಕ್ಕೆ ಇತಿಶ್ರೀಕ್ಷೇತ್ರದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಸಚಿವ ಎಸ್‌.ಎಸ್‌.ಕೃಷ್ಣಯ್ಯಶೆಟ್ಟಿಯವರ ಕಾಲದಲ್ಲಿ ಬಿಜೆಪಿಗೆ ಬದ್ರಭುನಾದಿ ಕಲ್ಪಿಸಿ ಇಲ್ಲಿನ ಪುರಸಭೆ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿಯು ಎರಡನೇ ಅವಧಿಯಲ್ಲಿ ಎಲ್ಲಾ23 ಸ್ಥಾನಗಳಲ್ಲಿಯೂ ಗೆಲುವು ಸಾಧಿಸುವ ಮೂಲಕ 5 ವರ್ಷಗಳಕಾಲ ಪ್ರತಿಪಕ್ಷವಿಲ್ಲದೇ ಆಡಳಿತನೀಡಿತ್ತು. ನಂತರದ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಪ್ರಬಲ ಸ್ಪರ್ಧೆ ನೀಡಿದ್ದಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ ಮತ್ತೆ5 ವರ್ಷಗಳಕಾಲ ಆಡಳಿತ ನೀಡಿತ್ತು. ಇದರಿಂದ ನಿರಂತರವಾಗಿ 15 ವರ್ಷಗಳ ಸುದೀರ್ಘ‌ಆಡಳಿತವನ್ನು ಪ್ರಸ್ತುತ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಪಕ್ಷಕೊನೆಗಾಣಿಸಿದೆ.

22 ದಿನಗಳ ರೆರ್ಸಾಟ್ವಾಸಕ್ಕೆ ಮುಕ್ತಿಕಳೆದ 22 ದಿನಗಳ ಹಿಂದೆ ಮಾಲೂರು ಪಟ್ಟಣಕ್ಕೆ ಆಗಮಿಸಿದ್ದ ಸಂಸದ ಎಸ್‌.ಮುನಿಸ್ವಾಮಿ ಅವರು ತಮ್ಮ ಮಾತಿನ ವೇಳೆಯಲ್ಲಿ ಮಾಲೂರು ಪುರಸಭೆಯ ಆಡಳಿತವನ್ನು ಬಿಜೆಪಿ ಹಿಡಿಯಲಿದ್ದು,ಕಾಂಗ್ರೆಸ್‌ನ ಮೂರ್ನಾಲ್ಕು ಸದಸ್ಯರು ತಮ್ಮ ಸಂಪರ್ಕದಲ್ಲಿ ಇರುವುದಾಗಿ ಹೇಳಿಕೆ ನೀಡಿದ್ದರಿಂದ ಎಚ್ಚರವ ಹಿಸಿದ್ದ ಶಾಸಕ ಕೆ.ವೈ.ನಂಜೇಗೌಡರು ಮರುದಿನವೇ ಪಕ್ಷದ11ಸದಸ್ಯರು, ಓರ್ವ ಜೆಡಿಎಸ್‌ ಸದಸ್ಯ ಮತ್ತು ಇಬ್ಬರು ಪಕ್ಷೇತರ ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರವಾಸಕ್ಕೆಕಳುಹಿಸುವ ಮೂಲಕ ಆಡಳಿತ ಚುಕ್ಕಾಣಿಗೆ ಅಗತ್ಯವಾಗಿರುವ ಸದಸ್ಯರ ಬಲವನ್ನು ಹೊಂದಲು ಯಶಸ್ವಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next