Advertisement

ಸೋನ್ ಭದ್ರಾ ಭೇಟಿಗೆ ಪ್ರಿಯಾಂಕಾಗೆ ಅಧಿಕಾರಿಗಳ ತಡೆ

09:14 AM Jul 20, 2019 | sudhir |

ವಾರಣಾಸಿ: ಭೂವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮ ಮುಖ್ಯಸ್ಥನ ಗುಂಡೇಟಿಗೆ ಬಲಿಯಾದ 10 ವ್ಯಕ್ತಿಗಳ ಕುಟುಂಬ ಸದಸ್ಯರನ್ನು ಭೇಟಿಯಾಗುವ ಉದ್ದೇಶದಿಂದ ಸೋನ್ ಭದ್ರಾಗೆ ಹೊರಟಿದ್ದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ ಅವರಿಗೆ ಗ್ರಾಮಕ್ಕೆ ಪ್ರವೆಶಿಸದಂತೆ ಮಾರ್ಗ ಮಧ್ಯದಲ್ಲೇ ಅಧಿಕಾರಿಗಳು ತಡೆಯೊಡ್ಡಿರುವ ಘಟನೆ ವರದಿಯಾಗಿದೆ. ಇದಕ್ಕೂ ಮೊದಲು ವಾರಣಾಸಿಗೆ ತೆರಳಿ ಪ್ರಿಯಾಂಕಾ ಗಾಂಧಿ ವಾಧ್ರಾ ಅವರು ಈ ದುರ್ಘಟನೆಯಲ್ಲಿ ಗಾಯಗೊಂಡವರನ್ನು ಭೇಟಿಯಾಗಿ ಅವರ ಕ್ಷೇಮ ವಿಚಾರಿಸಿದರು.

Advertisement

ಪ್ರಿಯಾಂಕಾ ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ಸ್ಥಳೀಯ ಅಧಿಕಾರಿಗಳು ಮಿರ್ಝಾಪುರದ ಬಳಿ ನಾರಾಯಣಪುರ ಎಂಬಲ್ಲಿ ತಡೆದು ನಿಲ್ಲಿಸಲಾಯಿತು. ಅಧಿಕಾರಿಗಳ ಈ ಕ್ರಮವನ್ನು ವಿರೋಧಿಸಿ ಪ್ರಿಯಾಂಕ ಅವರು ತಮ್ಮ ವಾಹನದಿಂದ ಇಳಿದು ಬೆಂಬಲಿಗರೊಂದಿಗೆ ಸ್ಥಳದಲ್ಲೇ ಧರಣಿಗೆ ಕೂತರು.

ಈ ಸಂದರ್ಭದಲ್ಲಿ ಯಾವುದೇ ರೀತಿಯ ಘರ್ಷಣೆಗಳನ್ನು ತಪ್ಪಿಸುವ ಸಲುವಾಗಿ ಇಲ್ಲಿನ ಪೊಲೀಸ್ ಅಧೀಕ್ಷಕರು ಬಿಗು ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದರು.

ದುರ್ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬದವರನ್ನು ಭೇಟಿಯಾಗಲು ನಾಲ್ವರೊಂದಿಗೆ ತೆರಳಬಹುದೆಂಬ ಭರವಸೆಯನ್ನು ನನಗೆ ಸ್ಥಳೀಯಾಡಳಿತವು ಅನುಮತಿ ನೀಡಿತ್ತು. ಆದರೆ ಇದೀಗ ನಮ್ಮನ್ನು ಅಲ್ಲಿಗೆ ಹೋಗದಂತೆ ತಡೆಯಲಾಗುತ್ತಿದೆ ಎಂದು ಪ್ರಿಯಾಂಕ ಅವರು ಸುದ್ದಿಗಾರರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next